Site icon Vistara News

Midday Meal | ಇನ್ನು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ವಿಶೇಷ ಭೋಜನ; ಇದಕ್ಕಿದೆ ಸಾರ್ವಜನಿಕ ಸಹಭಾಗಿತ್ವ

mid day meal ವಿಶೇಷ ಭೋಜನ ಶಾಲೆಗಾಗಿ ನಾವು ನೀವು ಕಾರ್ಯಕ್ರಮ

ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ (Midday Meal) ಮಕ್ಕಳಿಗೆ ವಿಶೇಷ ಭೋಜನ ಮತ್ತು ಶಾಲೆಗಾಗಿ ನಾವು ನೀವು’ ಕಾರ್ಯಕ್ರಮ ಆಯೋಜಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಈ ಕಾರ್ಯಕ್ರಮದಡಿ ಟ್ರಸ್ಟ್, ಸಂಘ ಸಂಸ್ಥೆಗಳು, ಎಸ್‌ಡಿಎಂಸಿಗಳು, ಸಾರ್ವಜನಿಕರೂ ಸೇರಿದಂತೆ ಸಮುದಾಯದವರಿಂದ ಆರ್ಥಿಕ ನೆರವು ಪಡೆದು ವಿಶೇಷ ಪೌಷ್ಟಿಕ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅಂದರೆ, ವಿಶೇಷ ದಿನಗಳನ್ನಾಗಿ ನಿಗದಿ ಮಾಡಿ ಸಾರ್ವಜನಿಕರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ಖಾಸಗಿ ಸಂಸ್ಥೆಗಳವರು ಸೇರಿ ಯಾರೂ ಬೇಕಾದರೂ ಈ ಯೋಜನೆಗೆ ಕೈಜೋಡಿಸಬಹುದಾಗಿದೆ. ಈ ಮೂಲಕ ಮಕ್ಕಳಿಗೆ ಪೌಷ್ಟಿಕಯುಕ್ತ ಆಹಾರವನ್ನು ಕಲ್ಪಿಸಿ ಕೊಡುವ ಉದ್ದೇಶವನ್ನು ಹೊಂದಲಾಗಿದೆ.

ಸಸ್ಯಾಹಾರವೇ ಆಗಿರಬೇಕು
ಈ ರೀತಿ ನೀಡುವ ವಿಶೇಷ ಭೋಜನವು ಸಂಪೂರ್ಣ ಸಸ್ಯಾಹಾರವಾಗಿರಬೇಕು. ಇಲಾಖೆ ಗುರುತಿಸಿರುವ ಆಹಾರ ಪದಾರ್ಥಗಳ ಪಟ್ಟಿಯಲ್ಲಿರಬೇಕು ಎಂದು ತಿಳಿಸಿರುವ ಶಿಕ್ಷಣ ಇಲಾಖೆ, ಇದರಿಂದ ಯಾವುದೇ ವರ್ಗ, ಜಾತಿ , ಮತ, ಲಿಂಗ ತಾರತಮ್ಯ, ಭೇದವಿಲ್ಲದೆ, ಒಗ್ಗಟ್ಟು, ಸಹಬಾಳ್ವೆ, ಬಾಂಧವ್ಯ, ಐಕ್ಯತೆ ಮೂಡಿಸುವುದು, ನಾವೆಲ್ಲರೂ ಒಂದು ಎಂಬ ಏಕತಾ ಭಾವನೆಯನ್ನು ಮಕ್ಕಳಲ್ಲಿ ಬೆಳೆಸುವುದು ಇದರ ಉದ್ದೇಶ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ | Rashmika Mandanna | ರಶ್ಮಿಕಾ ಜತೆ ಡೇಟಿಂಗ್‌ ಹೋಗಬೇಕು ಎಂದ ನಟ ವಿಶಾಲ್‌!

ಬೇರೆ ರಾಜ್ಯಗಳಲ್ಲೂ ಇದೆ ವಿಶೇಷ ಭೋಜನ
ಸದರಿ ಪರಿಕಲ್ಪನೆಯ ಕಾರ್ಯಕ್ರಮವು ಅಸ್ಸಾಂ ರಾಜ್ಯದಲ್ಲಿ ಸಂಪ್ರೀತಿ ಭೋಜನ್ ಎಂದು, ಆಂದ್ರಪ್ರದೇಶ, ತೆಲಂಗಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಪ್ರೀತಿ ಭೋಜನ್, ದಮನ್ ಮತ್ತು ದಿಯುನಲ್ಲಿ ವಿಶೇಷ ಭೋಜನ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯದಲ್ಲಿ ಸ್ನೇಹ ಭೋಜನ್, ಪುದುಚೇರಿಯಲ್ಲಿ ಅನ್ನ ದಾನಂ, ಹರಿಯಾಣ ರಾಜ್ಯದಲ್ಲಿ ಮಗಳ ಹುಟ್ಟಿದ ಹಬ್ಬ ಎಂದೂ, ಚಂಡಿಗಢ, ಉತ್ತರಾಖಂಡ ರಾಜ್ಯದಲ್ಲಿ ವಿಶೇಷ ಭೋಜನ ಎಂಬ ಶೀರ್ಷಿಕೆಯಲ್ಲಿ ಅರ್ಥೈಸಿ ಕಾರ್ಯ ಕ್ರಮವನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಸದರಿ ಪರಿಕಲ್ಪನೆಯನ್ನು “ಶಾಲೆಗಾಗಿ ನಾವು-ನೀವು” ಎಂಬ ಕಾರ್ಯಕ್ರಮವಾಗಿ ಸಮಾನಾಂತರಗೊಳಿಸಿ ಅನುಷ್ಠಾನಗೊಳಿಸಿದೆ. ಇದೇ ಕಾರ್ಯಕ್ರಮವನ್ನು “ವಿಶೇಷ ಭೋಜನ “ಎಂದು ಅರ್ಥೈಸಿಕೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆಯಲ್ಲಿ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಯೋಜನ ಮತ್ತು ಉದ್ದೇಶ:
೧. ಸಮುದಾಯದಲ್ಲಿ ಯಾವುದೇ ವರ್ಗ, ಜಾತಿ, ಮತ, ಲಿಂಗ ಭೇದಗಳಿಲ್ಲದೆ ನಾವೆಲ್ಲರೂ ಒಂದು ಎಂಬ ಏಕತಾ ಭಾವನೆಯನ್ನು ಅಭಿವ್ಯಕ್ತಿಗೊಳಿಸಲು
೨. ಪೂರಕ ಆಹಾರವಾಗಿ ಮಧ್ಯಾಹ್ನ ಉಪಾಹಾರದ ಪೌಷ್ಟಿಕ ಮೌಲ್ಯವನ್ನು ಹೆಚ್ಚಿಸಲು
3. ಸ್ಥಳೀಯ ಸಮುದಾಯದಲ್ಲಿ ಪರಸ್ಪರ ಉತ್ತಮ ಸಂಬಂಧ, ಸಂಪರ್ಕ, ಐಕ್ಯತೆ ಮತ್ತು ಸದ್ಭಾವನೆಯ ಬಾಂಧವ್ಯವನ್ನು ಗಟ್ಟಿಗೊಳಿಸಲು
೪. ಸಮುದಾಯದಲ್ಲಿ ಎಲ್ಲ ಮಕ್ಕಳಿಗೆ ಸಮಾನ ನ್ಯಾಯ, ಸಮಾನವಾದ ಅವಕಾಶ ಹಾಗೂ ಸಮಾನವಾದ ಹಂಚಿಕೆಯನ್ನು ಹೊಂದಲು
5. ಯಾವುದೇ ಭೇದ-ಭಾವ ಇಲ್ಲದೆ ಎಲ್ಲ ಮಕ್ಕಳು ಒಟ್ಟಿಗೆ ಕುಳಿತು ವೈವಿಧ್ಯಮಯ ಪೌಷ್ಟಿಕದಾಯಕವಾದ, ಶುಚಿ-ರುಚಿಕರವಾದ ಊಟೋಪಚಾರದಲ್ಲಿ ಪರಸ್ಪರ ಸಾಮರಸ್ಯ, ಪ್ರೀತಿ-ವಿಶ್ವಾಸ ಭಾವನೆಗಳಿಂದ ಪಾಲ್ಗೊಂಡು ಸಂಭ್ರಮಿಸಲು

ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮಾರ್ಗಸೂಚಿ
ಸ್ಥಳೀಯ ದಾನಿಗಳನ್ನು, ಸಂಘ-ಸಂಸ್ಥೆಗಳನ್ನು ಪಾಲುದಾರರನ್ನು ಗುರುತಿಸುವುದು ಹಾಗೂ ಸದರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅರಿವು ಜಾಗೃತಿ: ಆಹಾರದ ಗುಣಮಟ್ಟ, ಸುರಕ್ಷತೆ, ಪ್ರಮಾಣ, ಸಿಹಿ ತಿಂಡಿ (ಎಲ್ಲವೂ ಸಸ್ಯಾಹಾರ), ವಿತರಣೆ ದಿನಾಂಕ ಇತ್ಯಾದಿಗಳ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು. ಜತೆಗೆ ಮಕ್ಕಳ ಜನ್ಮದಿನಾಚರಣೆಯನ್ನು ವಾರಕ್ಕೊಮ್ಮೆ ಇಲ್ಲವೇ ತಿಂಗಳಿಗೆ ಎರಡು ಬಾರಿ ವಿಶೇಷ ಭೋಜನ ಕೂಟವನ್ನೂ ಏರ್ಪಡಿಸಬಹುದಾಗಿದೆ.

ಇದನ್ನೂ ಓದಿ | Domestic violence | ಪತ್ನಿಯ ಕಿರುಕುಳ ತಾಳಲಾರದೆ ಮದುವೆಯಾದ ಮೂರೇ ತಿಂಗಳಲ್ಲಿ ಗಂಡ ಆತ್ಮಹತ್ಯೆ

ಶಾಲಾ ಮಕ್ಕಳಿಗೆ ವಿತರಿಸುವ ಪೂರಕ ಆಹಾರ ನಿಬಂಧನೆಗಳು: ಸದರಿ ಕಾರ್ಯಕ್ರಮದಡಿ ಪ್ರತಿ ನಿತ್ಯ ಶಾಲೆಯಲ್ಲಿ ವಿತರಿಸುವ ಬಿಸಿಯೂಟದೊಂದಿಗೆ ಪೂರಕ ಪೌಷ್ಟಿಕ ಆಹಾರವಾಗಿ ವಿತರಿಸುವ ಪದಾರ್ಥಗಳನ್ನು ನೀಡಬಹುದು. ಉದಾಹರಣೆಗೆ ಮೊಟ್ಟೆ, ಶೇಂಗಾ ಚಿಕ್ಕಿ, ಸಿಹಿ ಹಲ್ವ, ಬಿಸ್ಕತ್, ಹಪ್ಪಳ, ಉಪ್ಪಿನಕಾಯಿ, ಸಂಡಿಗೆ, ವಿವಿಧ ಬಗೆಯ ಸಿಹಿತಿಂಡಿ, ಸಂಜೆ ವೇಳೆ ಸ್ನ್ಯಾಕ್ಸ್, ಬಾಳೆಹಣ್ಣು, ಇತರ ಹಣ್ಣುಹಂಪಲುಗಳು, ಮೊಳಕೆ ಭರಿಸಿರುವ ಕಾಳುಗಳು ಹೆಸರು ಕಾಳು, ಕಡಲೇಕಾಳು) ವಿವಿಧ ಬಗೆಯ ಬೆಳಗಿನ ಉಪಾಹಾರ ಇತ್ಯಾದಿ ಮಕ್ಕಳು ಇಷ್ಟಪಡುವ ಪೂರಕ ಆಹಾರ ಪದಾರ್ಥಗಳಾಗಿರಬೇಕು. ಹೀಗೆ ಶಾಲೆಯಲ್ಲಿ ವಿತರಿಸುವ ಪೂರಕ ಪೌಷ್ಟಿಕ ಆಹಾರವು ಸ್ಥಳೀಯ ಪ್ರದೇಶದಲ್ಲಿ ಆಹಾರ ಪದ್ಧತಿಯಲ್ಲಿ ಒಪ್ಪಿತವಾಗಿರಬೇಕು ಹಾಗೂ ಸರ್ಕಾರದಿಂದ ಅನುಮೋದಿತವಾಗಿರುವ ಇಲಾಖಾ ಸೂಚಿತ ಆಹಾರ ಪಟ್ಟಿಯಲ್ಲಿರುವ ಮೆನುವಿಗೆ ಪೂರಕವಾಗಿರಬೇಕು. ವಿಶೇಷವಾಗಿ ಸಸ್ಯಾಹಾರವಾಗಿರಬೇಕು ಎಂದು ಉಲ್ಲೇಖಿಸಲಾಗಿದೆ.

ದಾಖಲೆ ನಿರ್ವಹಣೆಗೆ ಸೂಚನೆ
ಈ ಸಂಬಂಧ ದಾನಿಗಳ ಕೊಡುಗೆಯಾಗಿ ಹರಿದುಬಂದ ವಸ್ತು- ಆಹಾರ ಪದಾರ್ಥಗಳು, ಭೌತಿಕ ಕಾಮಗಾರಿ ಇತ್ಯಾದಿಗಳ ಮೌಲ್ಯ ಹಾಗೂ ದಾನಿಗಳ ವಿವರವನ್ನು ಫೋಟೋ ದಾಖಲೀಕರಣದೊಂದಿಗೆ ಶಾಲಾ ಕಚೇರಿಯಲ್ಲಿ ಪ್ರತ್ಯೇಕವಾದ ರಿಜಿಸ್ಟರ್‌ನಲ್ಲಿ ದಾಖಲೆ ನಿರ್ವಹಿಸಿರಬೇಕು ಹಾಗೂ ಇಲಾಖೆಗೆ ಮಾಹಿತಿ ರೂಪದಲ್ಲಿ ವರದಿ ಮಾಡಬೇಕಿದೆ.

ಇದನ್ನೂ ಓದಿ | IOCL Recruitment | 1,760 ಅಪ್ರೆಂಟಿಸ್‌ಗಳ ನೇಮಕಕ್ಕೆ ಅರ್ಜಿ ಆಹ್ವಾನ; ರಾಜ್ಯದಲ್ಲಿಯೂ ಇದೆ ಅವಕಾಶ

Exit mobile version