ಬೆಂಗಳೂರು: ನಗರಾಭಿವೃದ್ಧಿ ಸಚಿವ ಹಾಗೂ ಬೆಂಗಳೂರಿನ ಕೆ.ಆರ್.ಪುರದ ಶಾಸಕ ಭೈರತಿ ಬಸವರಾಜ್ ಅವರ ತಂದೆ ಭೈರತಿ ಆಂಜಿನಪ್ಪ(85) ವಯೋಸಹಜ ಕಾಯಿಲೆಯಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.
ಮೃತರಿಗೆ ಐವರು ಪುತ್ರರು ಮತ್ತು ಮೂವರು ಪುತ್ರಿಯರು ಇದ್ದು, ಅವರಲ್ಲಿ ಭೈರತಿ ಬಸವರಾಜ್ ಅವರು ಹಿರಿಯ ಮಗನಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಭೈರತಿಯಲ್ಲಿ ಸಂಜೆ 6 ಗಂಟೆಗೆ ನೆರವೇರಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಲವು ರಾಜಕೀಯ ನಾಯಕರು ಹಾಗೂ ಗಣ್ಯರು ಭೈರತಿ ಆಂಜಿನಪ್ಪ ಅವರ ಅಂತಿಮ ದರ್ಶನ ಪಡೆದು ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಇದನ್ನೂ ಓದಿ | ನೂತನ ಆಕಾಸ ಏರ್ಲೈನ್ಸ್ ಪ್ರಾರಂಭಿಸಿದ್ದ, ಖ್ಯಾತ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಇನ್ನಿಲ್ಲ