ಬೆಂಗಳೂರು: ಸಾರ್ವತ್ರಿಕ ವರ್ಗಾವಣೆ ಅವಧಿಯ ಕೊನೇ ದಿನ ಮುಕ್ತಾಯವಾದ ಬಳಿಕವೂ ಇಬ್ಬರು ಪಿಡಿಒಗಳನ್ನು ವರ್ಗಾವಣೆ ಮಾಡಿರುವುದು ಕಂಡುಬಂದಿದೆ. ಈ ಮೂಲಕ ಸರ್ಕಾರದ ವರ್ಗಾವಣೆ ನಿಯಮವನ್ನು (PDO Transfer) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಉಲ್ಲಂಘಿಸಿರುವುದು ಬಹಿರಂಗಗೊಂಡಿದೆ.
ಜುಲೈ 3ನೇ ತಾರೀಖು ಸಾರ್ವತ್ರಿಕ ವರ್ಗಾವಣೆಗೆ ಕೊನೆಯ ದಿನವಾಗಿತ್ತು. ಆದರೆ, ಸಚಿವ ಪ್ರಿಯಾಂಕ್ ಖರ್ಗೆ ಅವರು, ಜುಲೈ 5ರಂದು ಇಬ್ಬರು ಪಿಡಿಒಗಳನ್ನು ವರ್ಗಾವಣೆ ಆದೇಶ ಮಾಡಿದ್ದಾರೆ. ಹೀಗಾಗಿ ಸರ್ಕಾರದ ವರ್ಗಾವಣೆ ನಿಯಮವನ್ನ ಸಚಿವರೇ ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ | DJ Halli case : ಮತ್ತೆ ಬೆಂಕಿ ಕಾರಿದ ಕೆಜಿ-ಡಿಜೆ ಹಳ್ಳಿ ಕೇಸ್! ಪ್ರಕರಣ ವಾಪಸ್‌ಗೆ ಮುಂದಾಯಿತೇ ಸರ್ಕಾರ?
ಸಚಿವ ಪ್ರಿಯಾಂಕ್ ಖರ್ಗೆ 208 ಅವರು ಒಟ್ಟು ಪಿಡಿಒಗಳನ್ನು ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಿತ್ತಾಮಂಗಲ ಗ್ರಾಮ ಪಂಚಾಯತಿಗೆ ಇಬ್ಬರು ಪಿಡಿಒಗಳನ್ನು ವರ್ಗಾವಣೆ ಮಾಡಲಾಗಿದೆ. ಕೆ.ಎಂ ವೆಂಕಟೇಶ್ ಹಾಗೂ ಪ್ರತಿಭಾ ಎನ್ನುವ ಇಬ್ಬರಿಗೂ ಒಂದೇ ಗ್ರಾಮ ಪಂಚಾಯತಿಗೆ ವರ್ಗಾವಣೆ ಮಾಡಿರುವುದರಿಂದ ಯಾರು ಅಧಿಕಾರ ತೆಗೆದುಕೊಳ್ಳಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ.