ಚಿಕ್ಕಮಗಳೂರು: ಇಲ್ಲಿನ ಕೆಇಬಿ ಕಚೇರಿಯಲ್ಲಿ ಹಾಕಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವುದು ಬೆಳಕಿಗೆ ಬಂದಿದೆ. ಕಚೇರಿಯ ಒಳಗಿದ್ದ ಅಂಬೇಡ್ಕರ್ ಫೋಟೋಗೆ ಯಾರೋ ಕಿಡಿಗೇಡಿಗಳು ಚಪ್ಪಲಿಯಿಂದ ಹೊಡೆದಂತೆ ಗುರುತು ಮೂಡಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಕೆಇಬಿ ಅಧಿಕಾರಿಗಳು ಕಚೇರಿಯಲ್ಲಿ ರಾಷ್ಟ್ರೀಯ ನಾಯಕರ ಭಾವಚಿತ್ರವನ್ನು ಅಳವಡಿಸಿದ್ದರು. ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದು, ಅಂಬೇಡ್ಕರ್ ಭಾವಚಿತ್ರದಲ್ಲಿ ಚಪ್ಪಲಿಯಿಂದ ಹೊಡೆದಿರುವ ಗುರುತು ಇದೆ. ವಿಷಯ ತಿಳಿಯುತ್ತಿದ್ದಂತೆ ದಲಿತ ಸಂಘಟನೆಗಳು ಕಚೇರಿಗೆ ಆಗಮಿಸಿ, ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿದರು.
ಕೆಇಬಿ ಅಧಿಕಾರಿಗಳು ಹಾಗೂ ದಲಿತ ಸಂಘಟನೆಗಳು ಸೇರಿ ಅಂಬೇಡ್ಕರ್ ಭಾವಚಿತ್ರವನ್ನು ಸ್ವಚ್ಛ ಮಾಡಿ ಹೂ ಮಾಲೆ ಹಾಕಿದರು. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಇದನ್ನೂ ಓದಿ | Coronavirus | ಭಾರತದಲ್ಲಿ ಹೊಸ ರೂಪಾಂತರಿಯ ಅಲೆ ಬಾರದು: ವೈರಾಣುತಜ್ಞೆ ಅಭಯ