ಬೆಳಗಾವಿ: ತಿಂಗಳ ಹಿಂದೆ ನಾಪತ್ತೆಯಾಗಿದ್ದ ಸೇನಾಧಿಕಾರಿ ಸೂರ್ಜಿತ್ ಸಿಂಗ್ ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೆಳಗಾವಿಯ ಜಿಎಲ್‌ವಿ ಕಮಾಂಡೋ ವಿಂಗ್‌ನಲ್ಲಿ ತರಬೇತುದಾರರಾಗಿದ್ದ ಪಂಜಾಬ್ ಮೂಲದ ಸೂರ್ಜಿತ್ ಸಿಂಗ್ (45) ಜೂನ್ 12ರಂದು ನಾಪತ್ತೆಯಾಗಿದ್ದರು.
ಕಳೆದ 10 ವರ್ಷಗಳಿಂದ ಟ್ರೈನಿಂಗ್ ಸೆಂಟರ್‌ನಲ್ಲಿ ತರಬೇತುದಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಆರ್ಮಿ ಕ್ಯಾಂಪ್‌ನಲ್ಲಿ ವಾಸವಾಗಿದ್ದ ಸೂರ್ಜಿತ್ ಸಿಂಗ್ ಹಣ ಪಡೆಯಲು ಎಟಿಎಂಗೆ ಹೋಗಿದ್ದರು. ಆದರೆ, ಮರಳಿ ಮನೆಗೆ ವಾಪಸ್ ಬಂದಿರಲಿಲ್ಲ.
ಹೀಗಾಗಿ ಕ್ಯಾಂಪ್ ಠಾಣೆಗೆ ಎಂಎಲ್ಐಆರ್‌ಸಿ ಅಧಿಕಾರಿಗಳು ದೂರು ನೀಡಿದ್ದರು, ಸೇನಾಧಿಕಾರಿ ಪತ್ತೆಗೆ ಅಪರಾಧ ವಿಭಾಗದ ಡಿಸಿಪಿ ಸ್ನೇಹ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತನಿಖೆ ಆರಂಭಿಸಿದ ತಂಡ ಸೂರ್ಜಿತ್ ಹುಡುಕಾಟ ನಡೆಸಿತ್ತು. ಆದರೆ, ೨೭ ದಿನಗಳ ನಂತರ ಅವರ ಇರುವಿಕೆ ಪತ್ತೆಯಾಗಿದ್ದು, ಈ ವೇಳೆ ಬೆಳಗಾವಿ ರೈಲ್ವೆ ನಿಲ್ದಾಣದಿಂದ ಕೊಲ್ಲಾಪುರಕ್ಕೆ ತೆರಳುತ್ತಿದ್ದ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಖಚಿತ ಮಾಹಿತಿ ಆಧರಿಸಿ ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಹೋದಾಗ ಸೂರ್ಜಿತ್ ಸಿಂಗ್ ಸಿಕ್ಕಿದ್ದಾರೆ. ಕೂಡಲೇ ಅವರನ್ನು ಕರೆ ತಂದು ಎಂಎಲ್ಐಆರ್‌ಸಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ. ಸೂರ್ಜಿತ್ ಸಿಂಗ್ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನು ಓದಿ|ಹುತಾತ್ಮ ಯೋಧರ ಸ್ಮಾರಕ ಸ್ತಂಭಕ್ಕೆ ಅಗೌರವ ಸಲ್ಲಿಸಿದ ಸಚಿವದ್ವಯರು!