ತುಮಕೂರು: ಇಲ್ಲಿನ ಹುಳಿಯಾರು ಪೊಲೀಸ್ ಠಾಣೆಯ ಕರ್ತವ್ಯನಿರತ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ (Missing Case) ಒಬ್ಬರು ನಾಪತ್ತೆಯಾಗಿದ್ದು, ಅವರನ್ನು ಹುಡುಕಿಕೊಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟಲ್ ಹರಿಬಿಡಲಾಗಿದ್ದು, ವೈರಲ್ ಆಗಿದೆ.
ಹುಳಿಯಾರು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಧಾ ಎಸ್. ನಾಪತ್ತೆಯಾಗಿರುವ ಕಾನ್ಸ್‌ಟೇಬಲ್. ಇವರು ಸೆಪ್ಟೆಂಬರ್ 13ನೇ ತಾರೀಖಿನಂದು ಮಧ್ಯಾಹ್ನ 3 ಗಂಟೆಗೆ ಡ್ಯೂಟಿ ಮುಗಿಸಿ ತೆರಳಿದ್ದರು ಎನ್ನಲಾಗಿದ್ದು, ಮನೆಗೆ ಬಂದಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಹುಳಿಯಾರು ಪೊಲೀಸ್ ಠಾಣೆಯಲ್ಲಿ ತಾಯಿ ದ್ರಾಕ್ಷಾಯಣಮ್ಮ ದೂರು ನೀಡಿದ್ದಾರೆ.
ಸುಧಾ ಅವರಿಗೆ 14 ವರ್ಷದ ಗಂಡು ಮಗ ಹಾಗೂ 10 ವರ್ಷದ ಹೆಣ್ಣು ಮಗಳಿದ್ದಾರೆ. 2 ವರ್ಷದ ಹಿಂದೆ ಪತಿ ಮೃತಪಟ್ಟಿದ್ದರು. ಕಳೆದ ಒಂದೂವರೆ ವರ್ಷದಿಂದ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಸುಧಾ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಹುಳಿಯಾರು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇತ್ತ “ಪೊಲೀಸ್ ಕಾನ್ಸ್‌ಟೇಬಲ್ ಸುಧಾ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿಕೊಡಿ” ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ | Students Missing | ಮೂವರು ಹೈಸ್ಕೂಲ್ ವಿದ್ಯಾರ್ಥಿನಿಯರು 9 ದಿನಗಳಿಂದ ನಾಪತ್ತೆ: ಪೋಷಕರಿಂದ ಪ್ರತಿಭಟನೆ, ಪತ್ರದಲ್ಲೇನಿತ್ತು?