ಚಿಕ್ಕಮಗಳೂರು: ಟ್ರಕ್ಕಿಂಗ್ ಸಾಹಸಮಯ ಚಟುವಟಿಕೆ ಆಗಿದ್ದು, ಇತ್ತೀಚೆಗೆ ಯುವಕರು ಒಬ್ಬೊಬ್ಬರೇ ಟ್ರಕ್ಕಿಂಗ್ ಹೋಗಿ (Tracking) ಬರುವುದು ಫ್ಯಾಷನ್ ಆಗಿದೆ. ಹೀಗೆ ಬೆಂಗಳೂರಿನಿಂದ ಟ್ರಕ್ಕಿಂಗ್ ಹೋಗಿದ್ದ ಯುವಕನೊಬ್ಬ ಮಿಸ್ಸಿಂಗ್ (Missing Case) ಆಗಿದ್ದಾನೆ. ಭರತ್ ನಾಪತ್ತೆಯಾಗಿರುವ ಯುವಕ.
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಗುಡ್ಡದಲ್ಲಿರುವ ರಾಣಿಝರಿ ಪಾಯಿಂಟ್‌ನಲ್ಲಿ ಬೈಕ್ ನಿಲ್ಲಿಸಿ ಭರತ್ ನಾಪತ್ತೆಯಾಗಿದ್ದಾನೆ. ಇನ್ನು ಗುಡ್ಡದ ತುದಿಯಲ್ಲಿ ಆತನ ಟೀ ಶರ್ಟ್, ಸ್ಲಿಪರ್ ಜೆತಗೆ ಮೊಬೈಲ್ ಕೂಡ ಪತ್ತೆಯಾಗಿದೆ. ಬಿ.ಇ ಮುಗಿಸಿರುವ ಭರತ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.
ಬೆಂಗಳೂರಿನಿಂದ ಹಾರ್ನೆಟ್ ಬೈಕ್‌ನಿಂದ ದುರ್ಗದಹಳ್ಳಿಗೆ ಬಂದಿದ್ದ ಭರತ್ ಅನಂತರ ಕಾಣೆಯಾಗಿದ್ದಾನೆ. ಇತ್ತ ಭರತ್ ಪೋಷಕರು ಮಗನಿಗಾಗಿ ಹುಡುಕಿಕೊಂಡು ಬಂದಿದ್ದಾರೆ. ಸದ್ಯ ಕಾಣೆಯಾಗಿರುವ ಭರತ್‌ಗಾಗಿ ಶೋಧ ಕಾರ್ಯ ಆರಂಭವಾಗಿದೆ. ಬಾಳೂರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿಯಿಂದ ಭರತ್‌ಗಾಗಿ ಹುಡುಕಾಟ ನಡೆಸಿದ್ದಾರೆ.
ನೋಡನೋಡ್ತಿದ್ದಂತೆ ಉರುಳಿದ ಏರ್‌ಟೆಲ್ ಟವರ್; ಇಲ್ಲಿದೆ ಭಯಾನಕ ವಿಡಿಯೊ!
ಬೆಂಗಳೂರು: ರಾಜಧಾನಿಯಲ್ಲಿ ಹಲವಾರು ಕಟ್ಟಡಗಳ ಮೇಲೆ ನಾನಾ ಕಂಪನಿಗಳಿಗೆ ಸೇರಿದ ಸಾವಿರಾರು ಟವರ್‌ಗಳು (Communication towers) ಇವೆ. ಇವು ಯಾವ ಕ್ಷಣದಲ್ಲಿ ಬೇಕಾದರೂ ಉರುಳಿ ಬೀಳಬಹುದು ಎಂಬ ಆತಂಕ ಎಲ್ಲರನ್ನೂ ಕಾಡುತ್ತದೆ. ಯಾಕೆಂದರೆ, ಎತ್ತರದ ಕಟ್ಟಡಗಳ ಮೇಲ್ಭಾಗದಲ್ಲಿ ಇವುಗಳನ್ನು ಸ್ಥಾಪಿಸಲಾಗಿರುತ್ತದೆ. ಮೊದಲೇ ಕೆಲವು ಕಟ್ಟಡಗಳು ಗಟ್ಟಿಯಾಗಿರುವುದಿಲ್ಲ. ಅಂಥ ಕಟ್ಟಡಗಳ ಮೇಲೆ ಈ ರೀತಿಯ ಟವರ್‌ಗಳನ್ನು ನಿರ್ಮಿಸಲಾಗಿರುತ್ತದೆ. ಹಾಗಾಗಿ ಯಾವಾಗ ಕಿತ್ತುಕೊಂಡು ಹೋಗುತ್ತವೋ ಎಂಬ ಭಯ ಸಹಜವಾಗಿ ಕಾಡುತ್ತದೆ. ಅದರಲ್ಲೂ ಮುಖ್ಯವಾಗಿ ಪಕ್ಕದ ಕಟ್ಟಡದವರು ಭಯಪಡುತ್ತಿರುತ್ತಾರೆ.
ಈ ಭಯ ಶುಕ್ರವಾರ ಬೆಂಗಳೂರಿನಲ್ಲಿ ನಿಜವಾಗಿದೆ. ನೋಡನೋಡುತ್ತಿದ್ದಂತೆಯೇ ಏರ್‌ಟೆಲ್ ಕಂಪನಿಗೆ (Airtel Company tower) ಸೇರಿದ ಒಂದು ಟವರ್ ನೆಲಕ್ಕೆ (Tower overturns) ಉರುಳಿದೆ. ಆದರೆ, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಲಿಲ್ಲ.
ಈ ಘಟನೆ ನಡೆದಿರುವುದು ಲಗ್ಗೆರೆಯ ಪಾರ್ವತಿ ನಗರದಲ್ಲಿ, ಇಲ್ಲಿ ಮನೆಯೊಂದರ ಮೇಲೆ ಕಬ್ಬಿಣದಿಂದ ನಿರ್ಮಿಸಿದ ಲೊಕೇಷನ್ ಟವರನ್ನು ಅಳವಡಿಸಲಾಗಿತ್ತು. ಮೇನ್ ರೋಡ್‌ನ ಪಕ್ಕದಲ್ಲೇ ಈ ಕಟ್ಟಡವಿತ್ತು.
ಈ ಟವರ್ ಅಳವಡಿಸಿದ್ದ ಮನೆ ಪಕ್ಕದಲ್ಲಿ ಖಾಲಿ ಸೈಟ್ ಇತ್ತು. ಇದೇ ಸೈಟ್‌ನಲ್ಲಿ ಮನೆ ನಿರ್ಮಾಣಕ್ಕೆ ಮಾಲೀಕ ಮುಂದಾಗಿದ್ದರು. ಹೊಸ ಮನೆ ನಿರ್ಮಾಣದ ಪಾಯಕ್ಕೆಂದು ಜೆಸಿಬಿಯಿಂದ ಮಣ್ಣನ್ನು ತೆಗೆಯಲಾಗುತ್ತಿತ್ತು. ಈವೇಳೆ ಟವರ್ ಇದ್ದ ಮನೆ ಪಾಯಕ್ಕೆ ತೊಂದರೆಯಾಗಿದೆ. ಹೀಗಾಗಿ ಟವರ್‌ನ ಭಾರಕ್ಕೆ ಕಟ್ಟಡದಲ್ಲಿ ಸಂಚಲನ ಉಂಟಾಗಿದೆ. ಈ ವೇಳೆ ಕಬ್ಬಿಣದ ಟವರ್ ನೆಲಕ್ಕಪ್ಪಳಿಸಿದೆ.
ಈ ಟವರ್ ಖಾಲಿ ಸೈಟ್ ಮತ್ತು ಅದರಾಚೆಯ ಕಟ್ಟಡದ ಮೇಲೆ ಉರುಳಿ ಹಾನಿಯುಂಟು ಮಾಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಟವರ್ ಬೀಳುವ ಮುನ್ಸೂಚನೆ ಪಡೆದ ಜನರು ಕೂಡಲೇ ಎಚ್ಚೆತ್ತು ಕಟ್ಟಡದಲ್ಲಿ ವಾಸಿಸುತ್ತಿದ್ದ ಎಲ್ಲರನ್ನೂ ಹೊರ ಕರೆದಿದ್ದರಿಂದ ದೊಡ್ಡ ಅಪಾಯ ತಪ್ಪಿದೆ.. ನಂತರದ ಕೆಲವೇ ಕ್ಷಣಗಳಲ್ಲಿ ಟವರ್ ಕುಸಿದು ಬಿದಿದ್ದು, ಒಂದು ಹಣ್ಣಿನ ಅಂಗಡಿ ಮತ್ತು ಬಂಬು ಅಂಗಡಿಗೆ ಹಾನಿಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.