Site icon Vistara News

Missing Case : ಸಾವನದುರ್ಗ ಚಾರಣಕ್ಕೆ ಹೋದ ಯುವಕ ಮಿಸ್ಸಿಂಗ್‌

Young man who went for Savandurga trek goes missing

ರಾಮನಗರ: ಸ್ನೇಹಿತನ ಜತೆ ಸಾವನದುರ್ಗ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಯುವಕನೊಬ್ಬ (Missing Case) ನಾಪತ್ತೆಯಾಗಿದ್ದಾನೆ. ರಾಮನಗರದ ಮಾಗಡಿ ತಾಲೂಕಿನ ಸಾವನದುರ್ಗ ಬೆಟ್ಟದಲ್ಲಿ (Savandurga Hill) ಘಟನೆ ನಡೆದಿದೆ. ಉತ್ತರ ಪ್ರದೇಶ ಮೂಲದ ಗಗನ್ (30) ಕಾಣೆಯಾದವನು.

ಬೆಂಗಳೂರಲ್ಲಿ ಕೆಲಸ ಮಾಡಿಕೊಂಡಿದ್ದ ಗಗನ್ ನಿನ್ನೆ ಕ್ರಿಸ್‌ಮಸ್‌ ರಜೆ‌ ಇದ್ದ ಕಾರಣಕ್ಕೆ ಸಾವನದುರ್ಗಕ್ಕೆ ತೆರಳಿದ್ದ. ಸ್ನೇಹಿತನೊಂದಿಗೆ ಮಧ್ಯಾಹ್ನ 3ರ ಸುಮಾರಿಗೆ ಚಾರಣ ಏರಿದ ಗಗನ್‌, ಆ ನಂತರ ಸ್ನೇಹಿತನಿಂದ ಬೇರಪಟ್ಟಿದ್ದ. ಎಷ್ಟು ಸಮಯ ಕಳೆದರೂ ಗಗನ್‌ ಬಾರದೇ ಇದ್ದಾಗ, ಜತೆಗೆ ಫೋನ್‌ ಸಂರ್ಪಕಕ್ಕೂ ಸಿಗದೇ ಕಾಣದೇ ಇದ್ದಾಗ ಆತನ ಸ್ನೇಹಿತ ಆತಂಕಗೊಂಡಿದ್ದಾನೆ.

ಬಳಿಕ ಬೆಟ್ಟ ಇಳಿದು ಈ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಪೊಲೀಸರು, ಅರಣ್ಯಾಧಿಕಾರಿಗಳು ನಿನ್ನೆಯಿಂದಲೂ ಬೆಟ್ಟದ ಮೇಲೆಲ್ಲ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಕಳೆದ 24 ಗಂಟೆಯಿಂದ ಸ್ಥಳದಲ್ಲೇ ಅಧಿಕಾರಿಗಳು ಬಿಡುಬಿಟ್ಟಿದ್ದಾರೆ. ಆದರೆ ಯುವಕನ ಸುಳಿವು ಮಾತ್ರ ಸಿಕ್ಕಿಲ್ಲ. ಹೀಗಾಗಿ ಡ್ರೋನ್ ಬಳಸಿ ಯುವಕನಿಗಾಗಿ ಹುಡುಕಾಟ ಶುರು ಮಾಡಿದ್ದಾರೆ. ಮಾಗಡಿ ಠಾಣೆಯಲ್ಲಿ ‌ಮಿಸ್ಸಿಂಗ್ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಚಿರತೆ ಭೀತಿ

ಸಾವನದುರ್ಗದ ಸುತ್ತಮುತ್ತ ಚಿರತೆ ಕಾಟವು ಇರುವುದರಿಂದ ಆತಂಕವನ್ನು ಹೆಚ್ಚಿಸಿದೆ. ಯುವಕನನ್ನು ಚಿರತೆ ಏನಾದರೂ ಎಳೆದು ಹೋಗಿದ್ಯಾ ಎಂಬ ಅನುಮಾನವು ಇದೆ. ಬೆಟ್ಟ ಹತ್ತುವಾಗ ದಾರಿ ತಿಳಿಯದೇ ನಾಪತ್ತೆಯಾಗಿದ್ದನಾ ಅಥವಾ ಬೆಟ್ಟ ಹತ್ತುವಾಗ ಎಲ್ಲಾದರೂ ಕೆಳಗೆ ಬಿದ್ದಿದ್ದನಾ? ಹೀಗೆ ಹತ್ತಾರು ಆಯಾಮದಲ್ಲಿ ಹುಡುಕಾಟವನ್ನು ನಡೆಸಿದ್ದಾರೆ. ಸದ್ಯ ಡ್ರೋನ್‌ ಮೂಲಕ ಯುವಕನ ಪತ್ತೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: Hasana News : ಹಾಸನದಲ್ಲಿ ಚಿಕ್ಕಟ್ಟೆ ಕೆರೆಗೆ ಹಾರಿ ದಂಪತಿ ಆತ್ಮಹತ್ಯೆ

ವಾಮಾಚಾರದ ಶಂಕೆ; 30 ವರ್ಷದ ಆದಿವಾಸಿ ಮಹಿಳೆಯನ್ನು ಜೀವಂತವಾಗಿ ಸುಟ್ಟ ನೀಚರು

ದಿಸ್ಪುರ: ಆಧುನಿಕ ಜಗತ್ತಿನಲ್ಲೂ ಜನ ವಾಮಾಚಾರವನ್ನು (Practising Witchcraft) ನಂಬುವವರಿದ್ದಾರೆ. ಇದೇ ವಾಮಾಚಾರದ ಮೂಲಕ ಅಂದುಕೊಂಡಿದ್ದನ್ನು ಸಾಧಿಸಲು ಮನುಷ್ಯರನ್ನು, ಮಕ್ಕಳನ್ನು ಬಲಿ ಕೊಡುವ ದುಷ್ಟರು ಕೂಡ ಇದ್ದಾರೆ. ಇದೇ ವಾಮಾಚಾರಕ್ಕೆ ಅಸ್ಸಾಂನಲ್ಲಿ (Assam) ಆದಿವಾಸಿ ಮಹಿಳೆಯೊಬ್ಬರು (Adivasi Woman) ಬಲಿಯಾಗಿದ್ದಾರೆ. ವಾಮಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಅಸ್ಸಾಂನಲ್ಲಿ ದುಷ್ಕರ್ಮಿಗಳು ಆದಿವಾಸಿ ಮಹಿಳೆಯೊಬ್ಬರನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ. ಮಹಿಳೆಯು ಮೂರು ಮಕ್ಕಳ ತಾಯಿ ಎಂದು ತಿಳಿದುಬಂದಿದೆ.

ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ನಿಜ್‌ ಬಾಹ್‌ಬರಿ ಗ್ರಾಮದ ಹೊರವಲಯದಲ್ಲಿ 30 ವರ್ಷದ ಸಂಗೀತಾ ಕಾಟಿ ಎಂಬ ಆದಿವಾಸಿ ಮಹಿಳೆಯನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯು ವಾಮಾಚಾರದಲ್ಲಿ ತೊಡಗಿದ್ದಾರೆ, ಇದರಿಂದ ನಮಗೆ ಕೆಡಕಾಗುತ್ತದೆ ಎಂದು ಭಾವಿಸಿದ ದುಷ್ಕರ್ಮಿಗಳು ಮಹಿಳೆಯ ಮೇಲೆ ಮೊದಲು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಮಹಿಳೆಯ ಪತಿಯನ್ನು ಕಟ್ಟಿಹಾಕಿ, ಆತನ ಎದುರೇ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಇದಾದ ಬಳಿಕ ಜೀವಂತವಾಗಿ ಸುಟ್ಟುಹಾಕಿದ್ದಾರೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಪಕ್ಕದ ಮನೆಯವರೇ ಕುಡಿದ ಮತ್ತಿನಲ್ಲಿ ಆದಿವಾಸಿ ಮಹಿಳೆಯನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ, ತಲೆಮರೆಸಿಕೊಂಡಿರುವ ಮತ್ತಿಬ್ಬರಿಗಾಗಿ ಬಲೆ ಬೀಸಿದ್ದಾರೆ. “ಮಹಿಳೆಯು ವಾಮಾಚಾರದಲ್ಲಿ ತೊಡಗಿದ್ದಾಳೆ ಎಂದು ಹಲವು ದುಷ್ಕರ್ಮಿಗಳು ಕುಡಿದ ಮತ್ತಿನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಬಳಿಕ ಆಕೆಯನ್ನು ಜೀವಂತವಾಗಿ ಸುಟ್ಟಿದ್ದಾರೆ” ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಧುರಿಮಾ ದಾಸ್‌ ಮಾಹಿತಿ ನೀಡಿದ್ದಾರೆ.

ಹತ್ಯೆ ಮಾಡಿದವರು ಪಕ್ಕದ ಮನೆಯವರು ಎಂದು ತಿಳಿದುಬಂದಿದೆ. ಕೆಲ ತಿಂಗಳಿಂದ ಮಹಿಳೆಯ ಕುಟುಂಬಸ್ಥರು ಹಾಗೂ ಪಕ್ಕದ ಮನೆಯವರ ಮಧ್ಯೆ ಗಲಾಟೆ ನಡೆದಿತ್ತು. ಎರಡೂ ಕುಟುಂಬಗಳು ದ್ವೇಷ ಕಾರುತ್ತಿದ್ದವು. ಇದೇ ಕಾರಣದಿಂದಾಗಿ ಮಹಿಳೆಯು ವಾಮಾಚಾರ ಮಾಡಿಸುತ್ತಿದ್ದಾಳೆ. ನಮ್ಮ ಕುಟುಂಬವನ್ನು ಹಣಿಯುತ್ತಾಳೆ ಎಂದು ಭಾವಿಸಿದ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಿಸೆಂಬರ್‌ನಲ್ಲಿಯೇ ನಾಗ್ಪುರದಲ್ಲಿ ವಾಮಾಚಾರದ ಭಾಗವಾಗಿ ವೃದ್ಧ ದಂಪತಿ ಹಾಗೂ ಅವರ ಮೊಮ್ಮಗಳನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಂಬತ್ತು ಆರೋಪಿಗಳನ್ನು ಬಂಧಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version