ಬಾಗಲಕೋಟೆ: ಜಿಲ್ಲೆಯ ಇಳಕಲ್ ನಗರದಲ್ಲಿ ಹಜರತ್ ಸೈಯದ್ ಮುರ್ತುಜಾ ಖಾದ್ರಿ ದರ್ಗಾ ಕಮಿಟಿ ಅಧ್ಯಕ್ಷನ ವಿರುದ್ಧ ಹಣದ ದುರ್ಬಳಕೆ (Misuse of Money) ಆರೋಪ ಕೇಳಿಬಂದಿದ್ದು, ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಮೂವರ ಮೇಲೆ ಕಮಿಟಿ ಅಧ್ಯಕ್ಷರೂ ಆದ ಎಐಎಂಐಎಂ ರಾಜ್ಯಾಧ್ಯಕ್ಷ ಹಾಗೂ ಪುತ್ರರು ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ.
ದರ್ಗಾ ಕಮಿಟಿ ಅಧ್ಯಕ್ಷ ಹಾಗೂ ಎಐಎಂಐಎಂ ರಾಜ್ಯಾಧ್ಯಕ್ಷ ಉಸ್ಮಾನ್ ಗಣಿ ಹುಮ್ನಾಬಾದ್ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಜಿಲ್ಲೆಯ ಇಳಕಲ್ ನಗರದ ಅಂಜುಮನ್ ಕಾಂಪ್ಲೆಕ್ಷ್ ಬಳಿ ಹಣದ ಅವ್ಯವಹಾರ ಪ್ರಶ್ನಿಸಿದ್ದಕ್ಕೆ ರಫಿಕ್ ನದಾಫ್, ಶಾಮೀದ್ ರೇಷ್ಮಿ, ಜುಬೇರ್ ಪುಣೇಕರ್ ಮೇಲೆ ಹಲ್ಲೆ ನಡೆಸಲಾಗಿದೆ.
ಕಮಿಟಿಯ ಲಕ್ಷಾಂತರ ರೂಪಾಯಿಗಳನ್ನು ಸ್ವಂತ ಬಳಕೆ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಉಸ್ಮಾನ್ ಗಣಿ ಹುಮನಾಬಾದ್ ವಿರುದ್ಧ ಆರೋಪಿಸಿದ ಮೂವರ ಮೇಲೆ ಉಸ್ಮಾನ್ ಗಣಿ ಹಾಗೂ ಮಕ್ಕಳಾದ ಆದಿಲ್ ಹುಮನಾಬಾದ್, ಫೈಸಲ್ ಹುಮನಾಬಾದ್, ಸೊಹಿಲ್ ಹುಮನಾಬಾದ್, ಶೊಹಿಬ್ ಹುಮನಾಬಾದ್, ಶಾಬಾಜ್ ಹುಮನಾಬಾದ್ ಹಾಗೂ ಸ್ನೇಹಿತ ಶೊಯಿಬ್ ಭಗವಾನ್ ಎಂಬುವವರು ಹಲ್ಲೆ ಮಾಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | Kerala Crime | ಉದ್ಯಮದಲ್ಲಿ ಸಂಘರ್ಷ; ಪಾಲುದಾರನ ದ್ವೇಷಕ್ಕೆ 4 ವರ್ಷದ ಬಾಲಕ ಬಲಿ