Site icon Vistara News

Cooker Politics: ಬಿಟಿಎಂ ಲೇಔಟ್‌ ಕ್ಷೇತ್ರದ ಮತದಾರರಿಗೆ ಕುಕ್ಕರ್ ಹಂಚಿದ ಶಾಸಕ ರಾಮಲಿಂಗಾ ರೆಡ್ಡಿ; ವಿಡಿಯೊ ವೈರಲ್

MLA Ramalinga Reddy distributes cookers to voters in BTM Layout constituency; The video has gone viral

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತದಾರರ ಬೆಂಬಲ ಪಡೆಯಲು ರಾಜಕೀಯ ಪಕ್ಷಗಳ ನಾಯಕರು ಜನರಿಗೆ ವಿವಿಧ ಆಮಿಷ ಒಡ್ಡುತ್ತಿದ್ದಾರೆ. ಈ ನಡುವೆ ನಗರದ ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಶಾಸಕ ರಾಮಲಿಂಗಾರೆಡ್ಡಿ (Cooker Politics) ಅವರು ಮತದಾರರಿಗೆ ಕುಕ್ಕರ್ ಹಂಚಿರುವುದು ಬೆಳಕಿಗೆ ಬಂದಿದೆ.

ಶಾಸಕ ರಾಮಲಿಂಗಾರೆಡ್ಡಿ ಅವರು ಮಹಿಳಾ ಮತದಾರರಿಗೆ ಕುಕ್ಕರ್‌ ಹಂಚಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಒಂದೆಡೆ ಬಿಜೆಪಿ ನಾಯಕರ (ರಮೇಶ್ ಜಾರಕಿಹೊಳಿ) ವಿರುದ್ಧ ಕೈ ನಾಯಕರು ದೂರು ನೀಡಿದ್ದಾರೆ, ಮತ್ತೊಂದೆಡೆ ಕೈ ಪ್ರಭಾವಿ ನಾಯಕರೇ ಬೆಂಗಳೂರಿನಲ್ಲಿ ಕುಕ್ಕರ್ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಸಿವಿ ರಾಮನ್ ನಗರದಲ್ಲಿ ಕುಕ್ಕರ್ ಹಂಚಿಕೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕರ ವಿರುದ್ಧ ಎಎಪಿ ಆರೋಪ ಮಾಡಿತ್ತು. ಇದರ ಬೆನ್ನಲ್ಲೆ ಕೈ ಮುಖಂಡರಿಂದಲೂ ಕುಕ್ಕರ್ ಹಂಚಿಕೆ ಶುರು‌ವಾಗಿದೆ.

ಇದನ್ನೂ ಓದಿ | Siddaramaiah : ಬಿಜೆಪಿಯವರು ಮಾಡುವ ಯಾವ ಆರೋಪಕ್ಕೂ ಸಾಕ್ಷಿ ಕೊಡುವುದಿಲ್ಲ : ಸಿದ್ದರಾಮಯ್ಯ ವಾಗ್ದಾಳಿ

Exit mobile version