Site icon Vistara News

Tumkur News: ಶಿಕ್ಷಣದಿಂದಲೇ ಮಕ್ಕಳು ಉನ್ನತ ಸ್ಥಾನಕ್ಕೇರಲು ಸಾಧ್ಯ: ಟಿ.ಬಿ.ಜಯಚಂದ್ರ

MLA TB Jayachandra

ಶಿರಾ: ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ (Good education) ಕೊಡಿಸಲು ಮುಂದಾಗಬೇಕು. ಶಿಕ್ಷಣದಿಂದಲೇ ಮಕ್ಕಳು ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದರು.

ತಾಲೂಕಿನ ಚಿಕ್ಕನಹಳ್ಳಿ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಶಿರಾ ಎಜುಕೇಷನಲ್‌ ಹಬ್‌ ಆಗಬೇಕು ಎಂಬ ಉದ್ದೇಶದಿಂದ ಈ ಹಿಂದೆ ಸರ್ಕಾದಿಂದ ಎಲ್ಲಾ ಜಾತಿ ವರ್ಗದ ಮಕ್ಕಳಿಗೆ 8 ಮೊರಾರ್ಜಿ ಶಾಲೆಗಳನ್ನು ಮಂಜೂರು ಮಾಡಿಸಿ ಸುಮಾರು 230 ಕೋಟಿ ರೂ.ಗಳ ವೆಚ್ಚದಲ್ಲಿ ಮೊರಾರ್ಜಿ ಶಾಲೆಗಳನ್ನು ಸ್ಥಾಪಿಸಲಾಗಿತ್ತು. ಈಗ ಈ ಶಾಲೆಗಳಲ್ಲಿ ಸುಮಾರು 3500 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಿಂದ ತಾಲೂಕಿನಲ್ಲಿ ಶಿಕ್ಷಣದ ಬದಲಾವಣೆಯಾಗಿದೆ. ಶಿರಾ ತಾಲೂಕನ್ನು ಎಜುಕೇಷನಲ್‌ ಹಬ್‌ ಮಾಡಬೇಕೆಂಬ ನನ್ನ ಕನಸು ಸಾಕಾರಗೊಳ್ಳುತ್ತಿದೆ ಎಂದರು.

ಇದನ್ನೂ ಓದಿ: Gruha lakshmi Scheme : ನೀವು/ನಿಮ್ಮ ಗಂಡ ಆದಾಯ ತೆರಿಗೆ ಕಟ್ತೀರಾ? ಹಾಗಿದ್ದರೂ ನಿಮಗೆ 2,000 ರೂ. ಸಿಗುತ್ತಾ?

ಇದನ್ನೂ ಓದಿ: RSS Baithak 2023 : 2025ರ ಶತಾಬ್ದಿ ನಿಮಿತ್ತ ದೇಶಾದ್ಯಂತ ಕಾರ್ಯವಿಸ್ತಾರಕ್ಕೆ ವೇಗ

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ, ತುಮುಲ್ ನಿರ್ದೇಶಕ ಎಸ್.ಆರ್.ಗೌಡ, ಮಾಜಿ ಜಿ ಪಂ ಸದಸ್ಯ ಪರ್ವತಪ್ಪ, ಮಾಜಿ ತುಮುಲ್ ನಿರ್ದೇಶಕ ಬಾಲೇನಹಳ್ಳಿ ಪ್ರಕಾಶ್ ಸೇರಿದಂತೆ ಅನೇಕ ಗಣ್ಯರು ಮುಖಂಡರು ಮತ್ತು ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಉಪಸ್ಥಿತರಿದ್ದರು.

Exit mobile version