ಬಾಗಲಕೋಟೆ: ನಮ್ಮ ಸಮಾಜಕ್ಕೆ ಸಿಗಬೇಕಾದ ಮೀಸಲಾತಿ ಪಡೆದೇ ಪಡೆಯುತ್ತೇವೆ. ಯಾವುದೇ ಪರಿಸ್ಥಿತಿಯಲ್ಲೂ ಅದರಲ್ಲಿ ಕಾಂಪ್ರಮೈಸ್ ಇಲ್ಲ. ನನಗೂ ಮಂತ್ರಿ ಸ್ಥಾನ ಕೊಡುತ್ತೇನೆ ಎಂದು ನಮ್ಮ ಬೊಮ್ಮಾಯಿಯವರು ಲಾಲಿಪಪ್ ತೋರಿಸುತ್ತಿದ್ದರು. ಇದನ್ನೆಲ್ಲ ಬಿಡಿ ಇಂತಹ ನಾಟಕ ಬೇಡ ಎಂದು ಹೇಳಿದ್ದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ತಿಳಿಸಿದ್ದಾರೆ.
ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡ ಗ್ರಾಮದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂಬುವುದು ನಮ್ಮ ಒತ್ತಾಯವಾಗಿದೆ. ಮೀಸಲಾತಿಗಾಗಿ ಒತ್ತಾಯ ಮಾಡುವಾಗ ನಿಮಗೆ ಸಚಿವ ಸ್ಥಾನ ಕೊಡುವುದಾಗಿ ಸಿಎಂ ಹೇಳುತ್ತಿದ್ದರು. ಲಿಸ್ಟ್‌ನಲ್ಲಿ ನಿಮ್ಮ ಹೆಸರು ಫಸ್ಟ್ ಇದೆ ಎನ್ನುತ್ತಿದ್ದರು ಎಂಬುದಾಗಿ ಯತ್ನಾಳ್ ತಿಳಿಸಿದ್ದಾರೆ.
ಇದನ್ನೂ ಓದಿ | Karnataka Election: ಅಹಿಂದ, ಮರಾಠದವರು ಶೇ. 74 ಇದ್ದೇವೆ; ನಾವೆಲ್ಲರೂ ಒಟ್ಟಾದರೆ ಏನಾಗತ್ತೆ?: ರಮೇಶ್ ಜಾರಕಿಹೊಳಿ
ಲಿಸ್ಟ್‌ನಲ್ಲಿ ನನ್ನ ಹೆಸರು ಇದೆ ಎಂದು ಸಿಎಂ ಹೇಳಿದಾಗ ನಾನು, ಬೊಮ್ಮಾಯಿ ಅವರೇ ಇದನ್ನೆಲ್ಲ ಬಿಡಿ ಇಂತಹ ನಾಟಕ ಕಂಪನಿ ಬೇಡ. 35 ವರ್ಷದಲ್ಲಿ ನಾನು 5 ಸಾರಿ ಶಾಸಕನಾಗಿ ಆಯ್ಕೆಯಾಗಿ ಬಂದಿದ್ದೇನೆ ಎಂದು ಹೇಳುತ್ತಿದ್ದೆ ಎಂದು ವ್ಯಂಗ್ಯವಾಡಿದರು.