ಹಾಸನ: ಜಿಲ್ಲೆಯ ಬೇಲೂರಿನಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಸಂಬಂಧ ಶನಿವಾರ ಬಿಜೆಪಿ (bjp) ಬೇಲೂರು ನಗರ ಮತ್ತು ಗ್ರಾಮಾಂತರ ಮಂಡಲದ ಪ್ರಮುಖರು ಮತ್ತು ಘಟನಾಯಕರ ಸಭೆ ಏರ್ಪಡಿಸಲಾಗಿತ್ತು.
ಬೇಲೂರಿನ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಸಭೆಯನ್ನು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ. ಗೋಪಾಲಯ್ಯ ಉದ್ಘಾಟಿಸಿದರು. ಕಾರ್ಯಾಗಾರದಲ್ಲಿ ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಬೇಲೂರು ವಿಧಾನಸಭಾ ಕ್ಷೇತ್ರದ ಮುಖಂಡ ಹೆಚ್.ಕೆ. ಸುರೇಶ್ (ಹುಲ್ಲಳ್ಳಿ ಸುರೇಶ್) ಭಾಗವಹಿಸಿ ಮತದಾರರ ಸಂಪರ್ಕ ಹಾಗೂ ಚುನಾವಣೆಯ ಬಗ್ಗೆ ಮಾಹಿತಿ ನೀಡಿದರು.
ಇದನ್ನೂ ಓದಿ | ಗಲಭೆ ನಡೆಸಿ ಅಧಿಕಾರಕ್ಕೇರಲು ಕಾಂಗ್ರೆಸ್ ಪ್ರಯತ್ನ: ನಳಿನ್ ಕುಮಾರ್ ಕಟೀಲ್ ಆರೋಪ
ವಿಧಾನ ಪರಿಷತ್ ಸದಸ್ಯರು, ರಾಜ್ಯ ಕಾರ್ಯದರ್ಶಿ ಹಾಗೂ ಮೈಸೂರು ವಿಭಾಗದ ಸಹ ಪ್ರಭಾರ ತುಳಸಿ ಮುನಿರಾಜುಗೌಡ ಮತ್ತು ಹಾಸನ ಜಿಲ್ಲಾ ಪ್ರಭಾರಿ ನಿಜಗುಣರಾಜು ಅವರು ಚುನಾವಣೆಯ ನಿರ್ವಹಣೆಯ ಮಾರ್ಗದರ್ಶನ ನೀಡಿದರು.
ಚುನಾವಣೆಯ ಸಂಚಾಲಕರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಮಾಜಿ ಶಾಸಕರು, ಮಂಡಲಗಳ ಅಧ್ಯಕ್ಷರು ಮತ್ತಿತರರು ಇದ್ದರು.
ಇದನ್ನೂ ಓದಿ | ಮಂಡ್ಯದಲ್ಲಿ BJP ಅರಳಿಸಲು ಅನ್ಯ ಪಕ್ಷಗಳ ಮುಖಂಡರಿಗೆ ಗಾಳ