Site icon Vistara News

Mobile addiction | ಮೊಬೈಲ್‌ಗೆ ಪಾಸ್‌ವರ್ಡ್‌ ಹಾಕಿ ಲಾಕ್‌ ಮಾಡಿದ ತಮ್ಮ, ಬೇಸರದಿಂದ ನೇಣಿಗೆ ಶರಣಾದ ಅಕ್ಕ

mobile death

ದೊಡ್ಡಬಳ್ಳಾಪುರ: ಮೊಬೈಲ್‌ ಗೀಳು ಎನ್ನುವುದು ಯುವಜನರನ್ನು ಯಾವ ರೀತಿಯಲ್ಲಿ ಆವರಿಸಿಕೊಂಡಿದೆ ಎಂದರೆ ಅದಿಲ್ಲದಿದ್ದರೆ ಜೀವನವೇ ಇಲ್ಲ ಎನ್ನುವಷ್ಟು. ಮೊಬೈಲ್‌ ಅಡಿಕ್ಷನ್‌ನಿಂದ ಕೆಲವರು ಬದುಕನ್ನೇ ಕಳೆದುಕೊಳ್ಳುತ್ತಿದ್ದರೆ ಇನ್ನು ಕೆಲವರು ಪ್ರಾಣವನ್ನೇ ಕಳೆದುಕೊಳ್ಳುವಷ್ಟು ಮುಂದೆ ಹೋಗುತ್ತಿದ್ದಾರೆ. ಇಲ್ಲೊಬ್ಬ ಯುವತಿ ತಮ್ಮ ಮೊಬೈಲ್‌ಗೆ ಪಾಸ್‌ವರ್ಡ್‌ ಲಾಕ್‌ ಮಾಡಿದ್ದಾನೆ ಎಂಬ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದೊಡ್ಡಬಳ್ಳಾಪುರ ನಗರದ ಗಾಣಿಗರಪೇಟೆಯ ೧೯ ವರ್ಷದ ಯುವತಿ ರುಚಿತಾ ಪ್ರಾಣ ಕಳೆದುಕೊಂಡಾಕೆ.

ಕಾಲೇಜಿಗೆ ಹೋಗುವ ರುಚಿತಾ ಯಾವಾಗಲೂ ಮೊಬೈಲ್‌ನಲ್ಲೇ ಬಿದ್ದಿರುತ್ತಿದ್ದಳು. ಮನೆಯಲ್ಲಿ ಬೇರೆ ಯಾರಿಗೂ ಮೊಬೈಲ್‌ ಬಳಸಲು ಬಿಡುತ್ತಲೇ ಇರಲಿಲ್ಲ. ಇದಕ್ಕೊಂದು ಪ್ಲ್ಯಾನ್‌ ಮಾಡಿದ್ದ ತಮ್ಮ ಮೊಬೈಲ್‌ಗೆ ಪಾಸ್‌ವರ್ಡ್‌ ಹಾಕಿ ಲಾಕ್‌ ಮಾಡಿದ್ದ.

ಮೊಬೈಲ್‌ ಎತ್ತಿಕೊಂಡು ಲಾಕ್‌ ಓಪನ್‌ ಆಗದೆ ಇದ್ದಾಗ ಪ್ರತಿಬಾರಿಯೂ ರುಚಿತಾಗೆ ತಮ್ಮನ ಸಹಾಯವೇ ಬೇಕಾಗಿತ್ತು. ಹೀಗಾಗಿ ಪಾಸ್‌ವರ್ಡ್‌ ಹೇಳು ಎಂದು ತಮ್ಮನಿಗೆ ಮನವಿ ಮಾಡುತ್ತಿದ್ದಳು. ಆದರೆ ಆತ ಮಾತ್ರ ಪಾಸ್‌ವರ್ಡ್‌ ಕೊಟ್ಟಿರಲಿಲ್ಲ. ಅತಿಯಾಗಿ ಮೊಬೈಲ್‌ ಬಳಸುತ್ತಿರುವ ಅಕ್ಕನ ಗೀಳನ್ನು ತಪ್ಪಿಸಲು ಆತ ಹೀಗೆ ಮಾಡಿದ್ದ. ಆದರೆ, ಆಕೆ ಪಾಸ್‌ವರ್ಡ್‌ ಸಿಗದೆ ಪರಿತಪ್ಪಿಸುತ್ತಿದ್ದಳು.

ಮೊಬೈಲ್‌ ಬಳಸಬೇಡ ಎಂದು ತಮ್ಮ ಕೂಡಾ ಹೇಳುತ್ತಿದ್ದುದರಿಂದ ಆಕೆಗೆ ಇನ್ನಷ್ಟು ಬೇಜಾರಾಯಿತು. ಈ ವಿಚಾರದಲ್ಲಿ ಅಕ್ಕ ಮತ್ತು ತಮ್ಮನ ಮಧ್ಯೆ ಮನೆಯಲ್ಲಿ ಸಾಕಷ್ಟು ಜಗಳ ಆಗಿದೆ. ಇದರಿಂದ ಮನನೊಂದ ಯುವತಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Suicide | ಮನೆಯಲ್ಲಿ ಕೆಲಸ ಮಾಡಲ್ಲ ಎಂದು ಹೆತ್ತವರು ಬೈದಿದ್ದಕ್ಕೆ 13 ವರ್ಷದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ

Exit mobile version