Site icon Vistara News

Mobile Theft : ಮೊಬೈಲ್ ಕಳ್ಳರ ಕೋಟೆ ಭೇದಿಸಿದ ಪೊಲೀಸ್ರು; ಗೋರಿಪಾಳ್ಯದಲ್ಲಿ ಸಿಕ್ಕಿದ್ದು ಎಷ್ಟು?

mobile theft

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಪ್ರತಿನಿತ್ಯ ನೂರಾರು ಮೊಬೈಲ್‌ ಫೋನ್‌ಗಳ (Mobile Theft) ಕಳ್ಳತನ ಆಗುತ್ತವೆ. ಆದರೆ ಆ ಮೊಬೈಲ್‌ಗಳು ಎಲ್ಲಿ? ಯಾರ ಕೈ ಸೇರುತ್ತವೆ ಎಂಬುದೇ ತಿಳಿದಿರಲಿಲ್ಲ. ಇಂತಹ ನಿಗೂಢ ಪ್ರಕರಣವನ್ನು ಭೇದಿಸಿರುವ ಬನ್ನೇರುಘಟ್ಟ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಕೋಟ್ಯಾಂತರ ರೂಪಾಯಿ ಮೌಲ್ಯದ 1 ಸಾವಿರಕ್ಕೂ ಅಧಿಕ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ದಾರಿಹೋಕರು ನಡೆದು ಹೋಗುತ್ತಿದ್ದರೆ, ಬಸ್‌ನಲ್ಲಿ ಗಮನ ಬೇರೆಡೆ ಸೆಳೆದು ಪ್ರಯಾಣಿಕರ ಜೇಬಿನಿಂದ ಮೊಬೈಲ್ ಎಗರಿಸುವುದು ಮಾಡುತ್ತಿದ್ದ ಗೋರಿಪಾಳ್ಯದ ಮಹಮ್ಮದ್ ಮಮೂದ್ ಪಾಷಾ, ಮಹಮ್ಮದ್ ಉಮರ್, ಮಹಮ್ಮದ್ ಸಲೀಂ ಹಾಗೂ ಐಯಾನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು

ಇದನ್ನೂ ಓದಿ: Namma Metro : ಮುಂಬೈ ಲೋಕಲ್‌ ಟ್ರೈನ್‌ನಂತಾಯ್ತು ನಮ್ಮ ಮೆಟ್ರೋ; ಹತ್ತಕ್ಕಾಗಲ್ಲ, ಇಳಿಯೋಕ್ಕಾಗಲ್ಲ!

ಸಾವಿರಾರು ರೂ. ಬೆಲಬಾಳುವ ಮೊಬೈಕ್‌ ಕದಿಯುವ ಇವರು ಗೋರಿಪಾಳ್ಯದ ರೂಂನಲ್ಲಿ ಸಂಗ್ರಹ ಮಾಡುತ್ತಿದ್ದರು. ಸಣ್ಣ ಪುಟ್ಟ ರಿಪೇರಿ ಮಾಡಿ ಬಳಿಕ‌ ಕಾಟನ್ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಿ ಚೆನ್ನೈ ಹಾಗೂ ಕೇರಳಕ್ಕೆ ರವಾನೆ ಮಾಡುತ್ತಿದ್ದರು. ಇನ್ನೂ ಮೊಬೈಲ್‌ಗಳ ಮಾರಾಟದಿಂದ ಬಂದ ಹಣವನ್ನು ಎರಡು ಬ್ಯಾಂಕ್ ಖಾತೆಗಳಲ್ಲಿ ನಿರ್ವಹಣೆ ಮಾಡುತ್ತಿದ್ದರು.

ಸದ್ಯ ಬಂದ ಹಣವನ್ನು ಯಾವ ಉದ್ದೇಶಕ್ಕಾಗಿ ಬಳಕೆ ‌ಮಾಡುತ್ತಿದ್ದರು ಎಂಬ ಶಂಕೆ ಪೊಲೀಸರಲ್ಲಿ ವ್ಯಕ್ತವಾಗಿದೆ . ಆರೋಪಿಗಳಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ ವಿವಿಧ ಬ್ರ್ಯಾಂಡ್‌ನ 1037 ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬನ್ನೇರುಘಟ್ಟ ಪೊಲೀಸರು ಮೊಬೈಲ್ ಕಳವು ಪ್ರಕರಣಗಳ ಹಿಂದೆ ಬೇರೆ ಯಾರು ಇದ್ದಾರೆ ಎಂಬುದನ್ನು ಪತ್ತೆ ಮಾಡಲು ತನಿಖೆ ಮುಂದುವರೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version