ವಿಜಯಪುರ: ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಯುವಕನೊಬ್ಬ ನಗ್ನವಾಗಿ ಮೊಬೈಲ್ ಟವರ್ ತುದಿಯೇರಿ (Mobile Tower) ಹುಚ್ಚಾಟ ನಡೆಸಿದ್ದ. ಟವರ್ ತುದಿಯಲ್ಲಿ ನಿಂತು ಅತ್ತಿಂದಿತ್ತ ನೇತಾಡುತ್ತಿದ್ದ. ಅವನನ್ನು ಕೆಳಗೆ ಇಳಿಸಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದರು. ಪೊಲೀಸರು, ಗ್ರಾಮಸ್ಥರ ಮಾತಿಗೆ ಕಿವಿಕೊಡದ ಯುವಕ ರಾಯಲ್ ಚಾಯ್ಸ್ ಮದ್ಯ, ವಿಮಲ್ ಗುಟ್ಕಾ ತಂದಿದ್ದೀವಿ ಬಾ ಎಂದ ಕೂಡಲೇ ಸರಸರನೇ ಕೆಳಗಿಳಿದು ಬಂದಿದ್ದಾನೆ.
ಸಿಂದಗಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಸತೀಶ್ ಕಡಣಿ (30) ಎಂಬಾತ ಮೊಬೈಲ್ ಟವರ್ ಏರಿದ್ದ. ಸತೀಶ್ ಕಡಣಿ ಮಾನಸಿಕ ಅಸ್ವಸ್ಥನಾಗಿದ್ದವನು ಟವರ್ ನೋಡಿದ ಕೂಡಲೇ ಬಟ್ಟೆಗಳನ್ನು ಬಿಚ್ಚಿ ನಗ್ನವಾಗಿ ಟವರ್ ಹತ್ತಿ ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದ. ಇದನ್ನೂ ಕಂಡು ಸ್ಥಳೀಯರು ಆತಂಕಗೊಂಡಿದ್ದರು. ಟವರ್ ತುದಿಯ ಮೇಲೆ ಹತ್ತಿ ಅಪಾಯಕಾರಿಯಾಗಿ ವರ್ತನೆ ಮಾಡುತ್ತಿದ್ದವನನ್ನು ಕೆಳಗಿಳಿಸಲು ಹರಸಾಹಸ ಪಡಬೇಕಾಯಿತು.
ಇದನ್ನೂ ಓದಿ: Food Poisoning : ಹಲ್ಲಿ ಬಿದ್ದ ಆಹಾರ ಸೇವಿಸಿ ಮಕ್ಕಳು ಅಸ್ವಸ್ಥ: ಹಲ್ಲಿ ಅಲ್ಲ, ಚಿಕ್ಕ ಹುಳುವೆಂದು ಪ್ರಾಚಾರ್ಯರ ವಾದ!
ಮಾತಿಗೆ ಜಗ್ಗದವನು ಗುಟ್ಕಾಗೆ ಬಗ್ಗಿದ
ಮಾನಸಿಕ ಅಸ್ವಸ್ಥನಾಗಿರುವ ಸತೀಶ್ ಖಣಿ ವಿಮಲ್ ಗುಟ್ಕಾ ತಿನ್ನುವ ಚಟ ಹೊಂದಿದ್ದ. ಹೀಗಾಗಿ ಸತೀಶ್ ಸ್ನೇಹಿತ ವಿಮಲ್ ಗುಟ್ಕಾ ಪ್ಯಾಕೆಟ್ಗಳನ್ನು ಕೈನಲ್ಲಿ ಹಿಡಿದು ಟವರ್ ಏರಿದ್ದರು. ಗುಟ್ಕಾ ಪ್ಯಾಕೆಟ್ ನೋಡುತ್ತಿದ್ದಂತೆ ಖುಷಿಯಾಗಿ ಸತೀಶ್ ಟವರ್ ತುದಿಯಿಂದ ಕೆಳಗೆ ಇಳಿದಿದ್ದಾನೆ. ಸತೀಶ್ ಸ್ವಗ್ರಾಮ ತೆಗ್ಗಿಹಳ್ಳಿ ಆಗಿದ್ದು, ತಾಯಿ ಜತೆಗೆ ಬಳಗಾನೂರಿಗೆ ಸಂಬಂಧಿಕರ ಮನೆಗೆ ಬಂದಿದ್ದ. ಟವರ್ ನೋಡಿ ಏಕಾಏಕಿ ಏರಿ ಹುಚ್ಚಾಟವಾಡುತ್ತಿದ್ದ. ಈ ಹಿಂದೆ ಎರಡು ಬಾರಿ ತೆಗ್ಗಿಹಳ್ಳಿಯಲ್ಲೂ ಟವರ್ ಏರಿ ಕುಳಿತಿದ್ದ ಎನ್ನಲಾಗಿದೆ. ತನಗೆ ಮಾಟ ಮಂತ್ರ ಮಾಡಿಸಿದ್ದಾರೆ ಎಂದು ಮಾನಸಿಕ ಅಸ್ವಸ್ಥನಾಗಿದ್ದಾನೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ