ಮಂಗಳೂರು: ಸಾಮಾಜಿಕ ಕಾರ್ಯಕರ್ತರೊಬ್ಬರು (Social Activist) 300 ಅಡಿ ಮೊಬೈಲ್ ಟವರ್‌ನ ತುತ್ತಾತುದಿ (Mobile Tower) ಏರಿ ಕ್ಷಣಕಾಲ ಆತಂಕವನ್ನು ಸೃಷ್ಟಿ ಮಾಡಿದರು. ದಕ್ಷಿಣ ಕನ್ನಡದ ಮಂಗಳೂರು ತಾಲೂಕಿನ ಮುಲ್ಕಿ ಬಳಿಯ ಕೊಲ್ನಾಡು ಇಂಡಸ್ಟ್ರೀಯಲ್ ಏರಿಯಾದಲ್ಲಿ ಈ ಘಟನೆ ನಡೆದಿದೆ.
ಸಾಮಾಜಿಕ ಕಾರ್ಯಕರ್ತ ಭೀಮಾಶಂಕರ್ ಎಂಬಾತ ಮುಲ್ಕಿ ಬಳಿ ಮೊಬೈಲ್ ಟವರ್ ಏರಿದವರು. ಭೀಮಾಶಂಕರ್ ಅವರು ಮೂಲತಃ ವಿಜಯಪುರ ಜಿಲ್ಲೆಯ ನಿವಾಸಿ ಆಗಿದ್ದಾರೆ.
ಭೀಮಾಶಂಕರ್ ಈ ಹಿಂದೆಯೂ ಇದೇ ರೀತಿ ಬೆಳಗಾವಿ ಸಹಿತ 4 ಕಡೆಯಲ್ಲಿ ಇದೇ ರೀತಿಯ ಕೃತ್ಯ ನಡೆಸಿದ್ದಾರೆ. ಊರಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸುವಂತೆ ಒತ್ತಾಯಿಸಿ ಈ ರೀತಿ ಅಪಾಯಕಾರಿ ಸಾಹಸಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಪೊಲೀಸರ ಮುಂದೆ ಭೀಮಾ ಶಂಕರ್ ಹೇಳಿಕೆ ನೀಡಿದ್ದಾರೆ. ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿದ್ದು, ಅಗ್ನಿಶಾಮಕದಳ ಸಿಬ್ಬಂದಿ ದೌಡಾಯಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ