Mobile Tower : ಸರಸರನೇ 300 ಅಡಿ ಮೊಬೈಲ್‌ ಟವರ್ ಏರಿದ ಸಾಮಾಜಿಕ ಕಾರ್ಯಕರ್ತ! - Vistara News

ಉತ್ತರ ಕನ್ನಡ

Mobile Tower : ಸರಸರನೇ 300 ಅಡಿ ಮೊಬೈಲ್‌ ಟವರ್ ಏರಿದ ಸಾಮಾಜಿಕ ಕಾರ್ಯಕರ್ತ!

Mobile Tower : ತನ್ನೂರಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು (Social Worker) 300 ಅಡಿ ಎತ್ತರದ ಮೊಬೈಲ್‌ ಟವರ್‌ ಏರಿದ ಘಟನೆ ಮುಲ್ಕಿ ನಡೆದಿದೆ.

VISTARANEWS.COM


on

Mobile tower
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಂಗಳೂರು: ಸಾಮಾಜಿಕ ಕಾರ್ಯಕರ್ತರೊಬ್ಬರು (Social Activist) 300 ಅಡಿ ಮೊಬೈಲ್‌ ಟವರ್‌ನ ತುತ್ತಾತುದಿ (Mobile Tower) ಏರಿ ಕ್ಷಣಕಾಲ ಆತಂಕವನ್ನು ಸೃಷ್ಟಿ ಮಾಡಿದರು. ದಕ್ಷಿಣ ಕನ್ನಡದ ಮಂಗಳೂರು ತಾಲೂಕಿನ ಮುಲ್ಕಿ ಬಳಿಯ ಕೊಲ್ನಾಡು ಇಂಡಸ್ಟ್ರೀಯಲ್ ಏರಿಯಾದಲ್ಲಿ ಈ ಘಟನೆ ನಡೆದಿದೆ.

ಸಾಮಾಜಿಕ ಕಾರ್ಯಕರ್ತ ಭೀಮಾಶಂಕರ್ ಎಂಬಾತ ಮುಲ್ಕಿ ಬಳಿ ಮೊಬೈಲ್ ಟವರ್‌ ಏರಿದವರು. ಭೀಮಾಶಂಕರ್ ಅವರು ಮೂಲತಃ ವಿಜಯಪುರ ಜಿಲ್ಲೆಯ ನಿವಾಸಿ ಆಗಿದ್ದಾರೆ.

ಭೀಮಾಶಂಕರ್ ಈ ಹಿಂದೆಯೂ ಇದೇ ರೀತಿ ಬೆಳಗಾವಿ ಸಹಿತ 4 ಕಡೆಯಲ್ಲಿ ಇದೇ ರೀತಿಯ ಕೃತ್ಯ ನಡೆಸಿದ್ದಾರೆ. ಊರಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸುವಂತೆ ಒತ್ತಾಯಿಸಿ ಈ ರೀತಿ ಅಪಾಯಕಾರಿ ಸಾಹಸಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಪೊಲೀಸರ ಮುಂದೆ ಭೀಮಾ ಶಂಕರ್‌ ಹೇಳಿಕೆ ನೀಡಿದ್ದಾರೆ. ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿದ್ದು, ಅಗ್ನಿಶಾಮಕದಳ ಸಿಬ್ಬಂದಿ ದೌಡಾಯಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Dead Body Found : ಕಾವೇರಿ ನದಿಯಲ್ಲಿ ತೇಲಿ ಬಂದ ಶವಗಳು; ನೋಡಲು ಮುಗಿಬಿದ್ದ ಜನರು

Dead Body Found : ಕಾವೇರಿ ನದಿಯಲ್ಲಿ ಜೋಡಿ ಶವಗಳು ತೇಲಿ ಬಂದಿದ್ದು, ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಇದು ಆತ್ಮಹತ್ಯೆಯೋ, ಕೊಲೆಯೋ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದಾರೆ.

VISTARANEWS.COM


on

By

Dead Body Found Bodies found floating in Cauvery river
Koo

ಮಂಡ್ಯ: ಕಾವೇರಿ ನದಿಯಲ್ಲಿ ಮಹಿಳೆ ಹಾಗೂ ಪುರುಷನ ಶವ (Dead Body Found) ಪತ್ತೆಯಾಗಿದೆ. ಮಂಡ್ಯದ ಶ್ರೀರಂಗಪಟ್ಟಣದ ಸಂತೆಮಾಳದ ಬಳಿಯ ಕಾವೇರಿ ನದಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವಗಳು ತೇಲಿ ಬಂದಿವೆ.

ಸ್ಥಳೀಯರೊಬ್ಬರ ಮಾಹಿತಿ ಮೇರೆಗೆ ಸ್ಥಳಕ್ಕೆ ಶ್ರೀರಂಗಪಟ್ಟಣದ ಟೌನ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನದಿಯಿಂದ ಶವಗಳ ಹೊರ ತೆಗೆದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯ ಮೃತರ ಗುರುತು ಪತ್ತೆಗಾಗಿ ಪೊಲೀಸರಿಂದ ತನಿಖೆ ಶುರು ಮಾಡಿದ್ದಾರೆ.

ಇನ್ನೂ ನದಿಯಲ್ಲಿ ಶವಗಳು ತೇಲುತ್ತಿದೆ ಎಂಬ ವಿಷಯ ಹಬ್ಬುತ್ತಿದ್ದಂತೆ ಜನರುಸೇತುವೆ ಮೇಲೆ ಮುಗಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸದ್ಯ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ: Drowns in Lake: ಕೆರೆಯಲ್ಲಿ ಮುಳುಗಿ ಯುವಕ ಸಾವು; ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಕೊಟ್ಟಿಗೆಗೆ ಬೆಂಕಿ ತಗುಲಿ ಭಾರೀ ಅಗ್ನಿ ಅವಘಡ

ಉತ್ತರಕನ್ನಡ ಜಿಲ್ಲೆಯ ಶಿರಸಿಯ ಕೆಂಚಗದ್ದೆ ಗ್ರಾಮದಲ್ಲಿ ಕೊಟ್ಟಿಗೆಗೆ ಬೆಂಕಿ ತಗುಲಿ ಭಾರಿ ಅಗ್ನಿ ಅವಘಡ ಸಂಭವಿಸಿತ್ತು. ನಯನ ಮಂಜುನಾಥ ಹೆಗಡೆ ಎಂಬುವವರ ಮನೆಯ ಕೊಟ್ಟಿಗೆ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿತ್ತು. ನೋಡನೋಡುತ್ತಿದ್ದಂತೆ ಬೆಂಕಿಯು ಕೊಟ್ಟಿಗೆಯಲ್ಲಿದ್ದ ಹುಲ್ಲು ಎಲ್ಲವೂ ಸುಟ್ಟು ಕರಕಲಾಗಿತ್ತು. ಇದರಿಂದಾಗಿ ಲಕ್ಷಾಂತರ ರೂಪಾಯಿ ಹಾನಿಯಾಗಿತ್ತು. ತೀವ್ರ ಕಾರ್ಯಾಚರಣೆ ನಡೆಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಶಿರಸಿ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅಡುಗೆ ಸಿಲಿಂಡರ್ ಸಿಡಿದು ಅಪಾರ ಹಾನಿ

ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರದ ನಿರ್ಮಲನಗರದಲ್ಲಿ ತಡರಾತ್ರಿ ಅಡುಗೆ ಸಿಲಿಂಡರ್ ಸಿಡಿದು ಅಪಾರ ಹಾನಿಯಾಗಿದೆ. ಮಹಮ್ಮದ್ ಶಹಾಬುದ್ದೀನ್ ರಾಝ್ವಿ ಎಂಬುವವರು ಇದ್ದ ಬಾಡಿಗೆ ಮನೆಯಲ್ಲಿ ಸ್ಫೋಟಗೊಂಡಿದೆ. ಮನೆಯಲ್ಲಿ ಗ್ಯಾಸ್ ಆನ್‌ ಮಾಡುವಾಗ ಅನಿಲ ಸೋರಿಕೆಯಾಗಿ ಸಿಲಿಂಡರ್ ಸಿಡಿದಿದೆ.

ಸ್ಫೋಟದಿಂದಾಗಿ ಮನೆಯ ಗೋಡೆ, ಚಾವಣಿ ಬಿರುಕು ಬಿಟ್ಟಿದೆ. ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕಾಗಮಿಸಿದ ವೆಸ್ಟ್‌ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಬ್ಲ್ಯಾಸ್ಟ್ ಆದ ಸಿಲಿಂಡರ್ ಸೇರಿ ಎರಡು ಸಿಲಿಂಡರ್ ಹೊರತೆಗೆದರು. ದಾಂಡೇಲಿ ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಧಾರವಾಡದಲ್ಲಿ ಶಾಲಾ ವಾಹನದಲ್ಲಿ ಕಾಣಿಸಿಕೊಂಡ ಬೆಂಕಿ

ನವಲೂರು ಬಳಿಯ ಖಾಸಗಿ ರೆಸಿಡೆನ್ಸಿ ಶಾಲಾ ವಾಹನದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಧಾರವಾಡದ ಕೋರ್ಟ್ ವೃತ್ತದಲ್ಲಿ ಘಟನೆ ನಡೆದಿದೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ವಾಹನ ಚಾಲಕ ಬಸ್‌ ನಿಲ್ಲಿಸಿ ವಾಹನದಲ್ಲಿದ್ದ ಮಕ್ಕಳನ್ನು ಕೆಳಗಿಸಿದ್ದಾನೆ. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Karnataka Rain : ರಾಜಧಾನಿ ಬೆಂಗಳೂರಿನಲ್ಲಿ (Bengaluru Rains) ಭಾನುವಾರ ಸುರಿದ ಎರಡು ಗಂಟೆಯ ಮಳೆಗೆ ಹಳೆಯ ದಾಖಲೆಗಳನ್ನು ಮುರಿದು ಮುನ್ನುಗ್ಗಿದೆ. 133 ವರ್ಷದ ದಾಖಲೆಯನ್ನು ಬೆಂಗಳೂರು ಮಳೆ ರೆಕಾರ್ಡ್ ಬ್ರೇಕ್ ಮಾಡಿದೆ. ಜತೆಗೆ ಸೋಮವಾರವು ಹಲವೆಡೆ ಮಳೆಯು ಅಬ್ಬರಿಸಿದೆ.

VISTARANEWS.COM


on

By

Karnataka Rain
Koo

ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru Rain) ಜೂನ್‌ ಮೊದಲ ವಾರವೇ ಮಳೆಯಲ್ಲಿ ರೆಕಾರ್ಡ್‌ ಬ್ರೇಕ್‌ ಮಾಡಿದೆ. ಜೂ.2ರ ಭಾನುವಾರ ಬೆಂಗಳೂರಿನಲ್ಲಿ 111.2 mm ಮಳೆಯಾಗಿದೆ. ಈ ಮೂಲಕ 133 ವರ್ಷಗಳ ದಾಖಲೆಯನ್ನು ಮುರಿದಿದೆ. ಬೆಂಗಳೂರಿನಲ್ಲಿ 1891ರ ಜೂನ್ 16ರಂದು 101.6 mm ಮಳೆ ಆಗಿತ್ತು. ಆದರೆ ನಿನ್ನೆ ಭಾನುವಾರ ಸುರಿದ ಜೂನ್ ತಿಂಗಳ ಮಳೆ 133 ವರ್ಷಗಳ ದಾಖಲೆ (Karnataka Rain) ಮುರಿದಿದೆ ಎಂದು ವಿಸ್ತಾರ ನ್ಯೂಸ್‌ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದಾಖಲೆಯ ಮಳೆ ಅಬ್ಬರದ ಡಿಟೈಲ್ಸ್‌

ವರ್ಷ- ಮಳೆ ಪ್ರಮಾಣ
1891ರ ಜೂನ್ 16ರಂದು 101.6 mm
2013ರ ಜೂನ್‌ 1ರಂದು 100mm
2009ರ ಜೂನ್ 11ರಂದು 89.6 mm
2024ರ ಜೂನ್‌ 2ರಂದು 111.2 mm

ಇದನ್ನೂ ಓದಿ: Bangalore Rain News : ಬೆಂಗಳೂರಿನಲ್ಲಿ ಭಾರಿ ಮಳೆ; ಹಲವು ಕಡೆ ಉರುಳಿ ಬಿದ್ದ ಮರಗಳು, ಮೆಟ್ರೋ ಸಂಚಾರಕ್ಕೂ ಅಡಚಣೆ

ಚಿಕ್ಕಮಗಳೂರಲ್ಲಿ ಮಳೆಗೆ 50 ಎಕರೆ ಅಡಿಕೆ ತೋಟ ಜಲಾವೃತ

ಚಿಕ್ಕಮಗಳೂರು ಬಯಲುಸೀಮೆ ಭಾಗದಲ್ಲಿ ಸೋಮವಾರ (ಜೂ. 3) ಭಾರಿ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ 50 ಎಕರೆ ಅಡಿಕೆ ತೋಟ ಜಲಾವೃತಗೊಂಡಿದೆ. ಚಿಕ್ಕಮಗಳೂರು ತಾಲೂಕಿನ ಕ್ಯಾತನಬೀಡು, ಸಾದರಹಳ್ಳಿ ಗ್ರಾಮಗಳಲ್ಲಿ ಘಟನೆ ನಡೆದಿದೆ. ಗ್ರಾಮದ ಬಸವರಾಜು, ಲೋಕೇಶ್ ಸೇರಿದಂತೆ ಹಲವು ರೈತರ ತೋಟ ನೀರುಪಾಲಾಗಿದೆ. ಇನ್ನೂ ಚಿಕ್ಕಮಗಳೂರು, ಮುಡಿಗೆರೆ, ಕೊಪ್ಪ, ಶೃಂಗೇರಿ, ಎನ್‌ಆರ್ ಪುರದಲ್ಲಿ ನಿರಂತರ ಮಳೆಯಿಂದಾಗಿ ಜನ-ಜೀವನ ಅಸ್ತವ್ಯಸ್ತವಾಗಿದೆ. ಕೊಟ್ಟಿಗೆಹಾರ, ಚಾರ್ಮಾಡಿ, ಕಿಗ್ಗಾ, ಬಸರಿ ಕಟ್ಟೆ ಭಾಗದಲ್ಲೂ ವ್ಯಾಪಕ ಮಳೆಯಾಗುತ್ತಿದೆ.

ದಾವಣಗೆರೆಯಲ್ಲಿ ಕೊಚ್ಚಿ ಹೋದ ಮಂಡಲೂರು ಸೇತುವೆ

ಭಾನುವಾರ ರಾತ್ರಿ ಸುರಿದ ಮಳೆಯಿಂದ ಮಂಡಲೂರು ಸೇತುವೆ ಕೊಚ್ಚಿ ಹೋಗಿದೆ. ದಾವಣಗೆರೆಯ ಮಂಡಲೂರಿನಿಂದ ಕಾಟಿಹಳ್ಳಿ ತಾಂಡಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯು ಕೊಚ್ಚಿ ಹೋದ ಕಾರಣದಿಂದ ಸಂಚಾರಕ್ಕೆ ಅಡಚಣೆ ಆಗಿತ್ತು. ಮಂಡಲೂರು ಗ್ರಾಮಕ್ಕೆ ಬರಲು ಹೋಗಲು ಆಗದೆ ಕಾಟಿಹಳ್ಳಿ ತಾಂಡದ ಜನರಿಗೆ ತೊಂದರೆ ಅನುಭವಿಸಿದರು. ಸೇತುವೆ ತುರ್ತು ಕಾಮಗಾರಿ ಆರಂಭಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.

ಕೊಡಗಿಗೂ ಎಂಟ್ರಿ ಕೊಟ್ಟ ಮುಂಗಾರು ಮಳೆ

ಸೋಮವಾರ ಕೊಡಗು ಜಿಲ್ಲೆಯ ಹಲವೆಡೆ ತುಂತುರು ಮಳೆ ಆರಂಭವಾಗಿದೆ. ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಬಿಸಿಲ ವಾತವರಣವಿತ್ತು. ಸೋಮವಾರ ಮಧ್ಯಾಹ್ನದ ನಂತರ ಮಡಿಕೇರಿ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ಮನ್ಸೂನ್ ಮಾದರಿಯ ವಾತಾವರಣ ಕಂಡು ಬಂತು. ಮಳೆಯಿಂದಾಗಿ ಕೊಡಗಿನ ರೈತಾಪಿ ವರ್ಗದಲ್ಲಿ ಮಂದಹಾಸ ಮೂಡಿದೆ. ಇತ್ತ ದಿಢೀರ್‌ ಮಳೆಗೆ ಸಾರ್ವಜನಿಕರು ಹಾಗೂ ದ್ವಿಚಕ್ರ ವಾಹನ ಸವಾರರು ಪರದಾಡಿದರು.

ಚಿತ್ರದುರ್ಗದಲ್ಲಿ ಮಳೆಗೆ ಬೆಳೆ ನಾಶ

ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಆರ್ಭಟಕ್ಕೆ ಮೊಳಕಾಲ್ಮುರು ತಾಲೂಕಿನಲ್ಲಿ ಅವ್ಯವಸ್ಥೆ ಆಗಿದೆ. ಪಕ್ಕುರ್ತಿ ಗ್ರಾಮದಲ್ಲಿ ಮಳೆಯಿಂದಾಗಿ ಶೇಂಗಾ, ಹತ್ತಿ, ಕಲ್ಲಂಗಡಿ, ಕನಕಾಂಬರ ಬೆಳೆ ನಾಶವಾಗಿದೆ. ಮಳೆ ರಭಸಕ್ಕೆ ನಾಲ್ಕು ಬೋರ್ವೆಲ್,ವಿದ್ಯುತ್ ಪರಿಕರ,ಪೈಪ್ ಲೈನ್ ಕೊಚ್ಚಿ ಹೋಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain : ಸಿಡಿಲಿಗೆ ಆಕಳು ಬಲಿ; ಹಲವೆಡೆ ಮಳೆ ಅವಾಂತರಕ್ಕೆ ಜನರು ತತ್ತರ

Karnataka Rain : ಸಿಡಿಲು ಬಡಿದು ಆಕಳು ಬಲಿಯಾಗಿದ್ದರೆ, ರಾಜ್ಯದಲ್ಲಿ ಮಳೆ (Rain News) ಅವಾಂತರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ನೋಡಿದಷ್ಟು ದೂರ ಮಳೆ ನೀರಿನಿಂದ ರಸ್ತೆಗಳು ಜಲಾವೃತಗೊಮಡಿದೆ.

VISTARANEWS.COM


on

By

karnataka Rain
Koo

ಬೆಂಗಳೂರು: ರಾಜಧಾನಿ ಬೆಂಗಳೂರು ಮಾತ್ರವಲ್ಲದೇ ವಿವಿಧ ಜಿಲ್ಲೆಗಳಲ್ಲೂ ಮಳೆಯು (Karnataka Rain) ಅವಾಂತರವೇ ಸೃಷ್ಟಿಸಿದೆ. ಗುಡುಗು ಸಿಡಿಲು ಸಹಿತ ಸುರಿದ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಮುಖ್ಯವಾಗಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲೇ ಭಾರಿ ಮಳೆಯಾಗಿದ್ದು, ಮನೆಗಳಿಗೆ (Rain News) ನೀರು ನುಗ್ಗಿದೆ. ಜತೆಗೆ ಜಮೀನುಗಳು ಜಲಾವೃತಗೊಂಡಿದೆ. ವಿಜಯಪುರದಲ್ಲಿ ಸಿಡಿಲು ಬಡಿದು ಆಕಳು ಸ್ಥಳದಲ್ಲೇ ಮೃತಪಟ್ಟಿದೆ. ಹಾಗಾದರೆ ಯಾವ್ಯಾವ ಜಿಲ್ಲೆಗಳಲ್ಲಿ ಏನೆಲ್ಲ ಅನಾಹುತಗಳು ಸಂಭವಿಸಿದೆ ಎಂದು (Karnataka weather Forecast) ಮಾಹಿತಿ ಇಲ್ಲಿದೆ.

Karnataka rain

ಯಾದಗಿರಿ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಗೆ ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದವು. ವರುಣನ ಅಬ್ಬರದಿಂದ ಬೈಕ್ ಸವಾರರು ಪರದಾಡಬೇಕಾಯಿತು.

Karnataka Rain

ರಾಯಚೂರಿನ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ರಾತ್ರಿಯಿಂದ ಮುಂದುವರೆದ ಮಳೆ ಮುಂದುವರಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ರಾತ್ರಿಯಿಂದ ಹಲವೆಡೆ ವಿದ್ಯುತ್ ವ್ಯತ್ಯಯದಿಂದಾಗಿ ಸಾರ್ವಜನಿಕರು ಪರದಾಡಿದರು. ಕಳೆದ 10 ಗಂಟೆಯಿಂದಲೂ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ.

karnataka Rain

ವಿಜಯನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಬಾಳೆ, ಕಬ್ಬು, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳಿಗೆ ನೀರು ನುಗ್ಗಿದೆ. ಹೊಸಪೇಟೆಯ ಜಂಬುನಾಥನ ಹಳ್ಳಿ ಪ್ರದೇಶದ ರಾಯರಕೆರೆ ಭಾಗದಲ್ಲಿನ ರೈತರ ಬೆಳೆಗಳು ನೀರುಪಾಲಾಗಿದೆ.

ಬಾಗಲಕೋಟೆ ಜಿಲ್ಲೆ ಇಲಕಲ್ಲ ತಾಲ್ಲೂಕಿನ ಕರಡಿ ಗ್ರಾಮದಲ್ಲಿ ಭಾರಿ ಮಳೆಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಲಕಲ್ ತಾಲ್ಲೂಕಿನಲ್ಲಿ ರಾತ್ರಿ ಸುರಿದ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಕರಡಿ ಗ್ರಾಮದ ಸಂಪರ್ಕ ರಸ್ತೆ ಹಳ್ಳದ ನೀರಿನಿಂದ ಜಲಾವೃತಗೊಂಡಿದೆ. ಕರಡಿ ರಸ್ತೆ ಮೇಲ್ಸೇತುವೆ ಕಾಮಗಾರಿಯಿಂದ ನೀರು ರಸ್ತೆಗೆ ನುಗ್ಗಿದೆ. ಕರಡಿ, ದಾಸಬಾಳ, ಪಾಲತಿ, ಕೊಣ್ಣೂರ, ಹುನಗುಂದ ಸಂಪರ್ಕ ಕಡಿತಗೊಂಡಿದೆ.

karnataka Rain

ತಡರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿಜಯಪುರ ನಗರದ ಜುಮನಾಳ, ಸಾರವಾಡ, ಹೊನಗನಹಳ್ಳಿ ಸೇರಿದಂತೆ ಭಾರಿ ಮಳೆಯಾಗಿದೆ. ವಿಜಯಪುರ ನಗರದ ಮೀನಾಕ್ಷಿ ವೃತ್ತ ಜಲಾವೃತಗೊಂಡಿದ್ದು, ನೀರು ತುಂಬಿದ ರಸ್ತೆಯಲ್ಲೇ ಸವಾರರು ವಾಹನ ಚಲಾಯಿಸಿದ್ದಾರೆ.

karnataka Rain

ದಾವಣಗೆರೆಯಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿತ್ತು. ದಾವಣಗೆರೆ ತಾಲೂಕಿನ ಅನಗೋಡು, ಮಾಯಕೊಂಡ, ಹುಣಸೇಕಟ್ಟೆ, ಹೆಬ್ಬಾಳು, ನರಗನಹಳ್ಳಿ ಹಾಗೂ ಹೊನ್ನಯಕನಹಳ್ಳಿ ಒಬಣ್ಣನಹಳ್ಳಿ ಭಾವಿಹಾಳ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭರ್ಜರಿ ಮಳೆಯಾಗಿದೆ. ಹೆಬ್ಬಾಳು ನರಗನಹಳ್ಳಿ, ಕೊಡಗನೂರು ಸೇರಿದಂತೆ ಇತರೆ ಕೆರೆಗಳಿಗೆ ನೀರು ಹರಿದು ಬಂದಿದೆ. ಮಳೆಯ ರಭಸಕ್ಕೆ ಹೊಲಗಳಿಗೆ ನೀರು ನುಗ್ಗಿದ್ದು, ಗುಲಾಬಿ ಗಿಡಗಳು ನೆಲಕಚ್ಚಿದೆ.

karnataka rain

ಈಶಾನ್ಯ ಪದವೀಧರ ಕ್ಷೇತ್ರದ ಮತದಾನಕ್ಕೂ ಮಳೆ ಎಫೆಕ್ಟ್‌ ತಟ್ಟಿದೆ. ರಾಯಚೂರಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಪವರ್ ಕಟ್ ಆಗಿದ್ದು, ಸಿಬ್ಬಂದಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಮತದಾನ ನಡೆದಿದೆ. ಪವರ್ ಇಲ್ಲದೆ ಮೊಬೈಲ್ ‌ಟಾರ್ಚ್ ಬಳಸಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆ ನಂ.84ರಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಮತದಾನ ಮಾಡಬೇಕಾಯಿತು.

Karnataka Rain

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ‌ ಹಿರೇಮಸಳಿ ಗ್ರಾಮದಲ್ಲಿ ಸಿಡಿಲು ಬಡಿದು ಆಕಳು ಮೃತಪಟ್ಟಿದೆ. ಶಿವಯೋಗಿ ಹೊಸಮನಿ ಎಂಬುವವರಿಗೆ ಸೇರಿದ ಆಕಳನ್ನು ಹೊಲದಲ್ಲಿ ಮರದ ಕೆಳಗೆ ಕಟ್ಟಲಾಗಿತ್ತು. ಈ ವೇಳೆ ಸಿಡಿಲು ಬಡಿದು ಆಕಳು ಮೃತಪಟ್ಟಿದೆ. ಇಂಡಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Karnataka Rain

ಯಾದಗಿರಿ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಗೆ ಕೃಪಾ ನಗರ ಹಾಗೂ ಹೊಸಳ್ಳಿ ಕ್ರಾಸ್ ಸಮೀಪದ 20ಕ್ಕೂ ಹೆಚ್ಚು ಗುಡಿಸಲು ಒಳಗೆ ನೀರು ನುಗ್ಗಿದೆ. ಅಲೆಮಾರಿ ಜನಾಂಗದವರು ವಾಸ ಮಾಡುವ ಗುಡಿಸಲು ನೀರುಪಾಲಾಗಿದ್ದು, ರಾತ್ರಿ ಪೂರ್ತಿ ಜಾಗರಣೆ ಮಾಡಿದ್ದಾರೆ. ಸರಕಾರ ವಾಸಕ್ಕೆ ಮನೆ ಸೌಲಭ್ಯ ಕಲ್ಪಿಸುವಂತೆ ಅಲೆಮಾರಿ ಜನಾಂಗದವರು ಒತ್ತಾಯಿಸಿದ್ದಾರೆ.

Karnataka Rain

ಕೊಪ್ಪಳದ ನಗರದ ಗಣೇಶ ನಗರದಲ್ಲಿ ಭಾರಿ ಮಳೆಗೆ ಮನೆಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಗಣೇಶ ನಗರ ಬಡಾವಣೆಯ ಹತ್ತಾರು ಮನೆಗಳ ಮುಂದೆ ಜಲಾವೃತಗೊಂಡಿದ್ದು, ಭಾಗ್ಯನಗರ ಪಟ್ಟಣ ಪಂಚಾಯತ್ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

Karnataka Rain

ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ಕಿತ್ನೂರು ಸರ್ಕಾರಿ ಶಾಲೆ ಆವರಣವು ಕೆರೆಯಂತಾಗಿತ್ತು. ನಿನ್ನೆ ರಾತ್ರಿ ಸುರಿದ ಮಳೆಗೆ ಶಾಲಾ ಆವರಣದಲ್ಲಿ ಮಳೆ ನೀರು ತುಂಬಿತ್ತು.

Karnataka Rain

ಯಾದಗಿರಿಯ ಹೊಸಳ್ಳಿ ಕ್ರಾಸ್ ಸಮೀಪದಲ್ಲಿ 3 ಮನೆಗಳಿಗೆ ಮಳೆ ನೀರು ನುಗ್ಗಿದೆ. ಧವಸ ಧಾನ್ಯ ಹಾಗೂ ಅಗತ್ಯ ವಸ್ತುಗಳಿಗೆ ಹಾನಿಯಾಗಿದೆ. ಕೃಷ್ಣಾ ದೇಗುಲ ಜಲ ದಿಗ್ಬಂಧನವಾಗಿದೆ. ನಗರಸಭೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

karnataka Rain

ತುಮಕೂರಿನ ತಿಪಟೂರಿನಲ್ಲಿ ಧಾರಕಾರವಾಗಿ ಸುರಿದ ಮಳೆಗೆ ಕುಡಿಯುವ ನೀರಿನ ಕೆರೆಗೆ ಕಲುಷಿತ ನೀರು ಸೇರ್ಪಡೆಯಾಗಿದೆ. ತಿಪಟೂರು ಪಟ್ಟಣದ ಕಲುಷಿತ ನೀರು ಈಚನೂರು ಕೆರೆಗೆ ಸೇರ್ಪಡೆಯಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಲು ಸ್ಥಳೀಯರು ಮನವಿ ಮಾಡಿದ್ದಾರೆ.

Karnataka Rain

ಬಾಗಲಕೋಟೆಯ ಬಾದಾಮಿ ಭಾಗದಲ್ಲಿ ರಾತ್ರಿ ಸುರಿದ ಮಳೆಯು ಅವಾಂತರವನ್ನೇ ಸೃಷ್ಟಿಸಿದೆ. ನಿರ್ಮಾಣ ಹಂತದ ಕಾಲುವೆಯಿಂದ ನೀರು ನುಗ್ಗಿದ್ದು, 4 ಎಕರೆ ಜಮೀನಿನಲ್ಲಿ ಬೆಳೆದ ಕಬ್ಬು, ಗೋವಿನಜೋಳ ನಾಶವಾಗಿದೆ. ಹನುಮಂತ ಚೂರಿ ಎಂಬ ರೈತರ ಬೆಳೆ ಹಾನಿಯಾಗಿದೆ.

karnataka Rain

ಯಾದಗಿರಿಯಲ್ಲಿ ಮಳೆ ಆರ್ಭಟಕ್ಕೆ ಕಿರಾಣಿ ಅಂಗಡಿಗೆ ನೀರು ನುಗ್ಗಿ ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿವೆ. ನರಸಿಂಹ ಅವರಿಗೆ ಸೇರಿದ ಕಿರಾಣಿ ಅಂಗಡಿ ಹಾಳಾಗಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಿಡಿಕಾರಿದ್ದಾರೆ.

karnataka Rain

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ‌ 150ಎ ರಲ್ಲಿನ ಅಂಡರ್ ಪಾಸ್ ಜಲಾವೃತಗೊಂಡಿತ್ತು. ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್‌ನಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಹೈರಾಣಾದರು. ನೀರಿನಲ್ಲಿ ವಾಹನ ತಳ್ಳಿಕೊಂಡು ಹೋದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಬೆಂಗಳೂರಿಗೆ ಆವರಿಸಿದ ಮುಂಗಾರು; ಹಲವೆಡೆ ಇಂದು ಗಾಳಿಯೊಂದಿಗೆ ಭಯಂಕರ ಮಳೆ

Karnataka Weather Forecast : ರಾಜಧಾನಿ ಬೆಂಗಳೂರು (Bengaluru rains) ಸೇರಿದಂತೆ ದಕ್ಷಿಣ ಕರ್ನಾಟಕಕ್ಕೆ ಅಧಿಕೃತವಾಗಿ ಮುಂಗಾರು (monsoon rain) ಆವರಿಸಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ರಾಜ್ಯಾದ್ಯಂತ ಸೋಮವಾರದಂದು ಗುಡುಗು ಸಹಿತ ಭಾರಿ ಮಳೆಯಾಗುವ (Rain News) ಸೂಚನೆ ನೀಡಲಾಗಿದೆ.

VISTARANEWS.COM


on

By

karnataka Weather Forecast
Koo

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ (Bengaluru rains) ಶನಿವಾರ- ಭಾನುವಾರ ಅಬ್ಬರಿಸಿದ ಮಳೆಗೆ (Rain News) ಜನರು ತತ್ತರಿಸಿ ಹೋಗಿದ್ದಾರೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಇಂದು ಕೂಡ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಗುಡುಗು, ಮಿಂಚು ಸಹಿತ ಭಾರಿ ಗಾಳಿಯೊಂದಿಗೆ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.

karnataka Weather Forecast

ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಕರ್ನಾಟಕದ ಬಹುತೇಕ ಭಾಗವನ್ನು ಮುಂಗಾರು ಆವರಿಸಿದೆ. ಇದರ ಪ್ರಭಾವದಿಂದಾಗಿ ಜೂನ್‌ 7ರ ವರೆಗೆ ಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಪ್ರಮುಖವಾಗಿ ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ ಹಾಗೂ ರಾಮನಗರ, ಶಿವಮೊಗ್ಗ, ವಿಜಯನಗರದಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ.

ಉಳಿದಂತೆ ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿಯಲ್ಲೂ ಸಾಧಾರಣ ಮಳೆಯಾಗಲಿದೆ. ಕೆಲವೊಮ್ಮೆ ಗುಡುಗು, ಮಿಂಚು ಸಂಭವವಿದೆ. ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ವ್ಯಾಪಕ ಮಳೆಯಾಗಲಿದೆ.

ಇದನ್ನೂ ಓದಿ: CET Ranking : ಸಿಇಟಿ ರ‍್ಯಾಂಕಿಂಗ್‌ನಲ್ಲಿ ಎಂಜಿನಿಯರಿಂಗ್‌ನ 10 ಟಾಪರ್ಸ್‌ಗಳು ಬೆಂಗಳೂರಿನ ವಿದ್ಯಾರ್ಥಿಗಳು!

ಈ ಜಿಲ್ಲೆಗಳಿಗೆ ಎಚ್ಚರಿಕೆ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ತುಮಕೂರಿನಲ್ಲಿ ಭಾರಿ ಮಳೆಯಾಗಲಿದ್ದು, ಗಾಳಿ ವೇಗವು ಗಂಟೆಗೆ 40-50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಬಾಗಲಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲೂ ಗಾಳಿ ವೇಗವು ಗಂಟೆಗೆ 30-40ಕಿ.ಮೀ ವ್ಯಾಪ್ತಿಯಲ್ಲಿ ಇರಲಿದೆ. ಹೀಗಾಗಿ ಈ ಮೇಲಿನ ಜಿಲ್ಲೆಗಳಿಗೆ ಎಚ್ಚರಿಕೆಯನ್ನು ನೀಡಲಾಗಿದೆ.

ತಾಪಮಾನದ ಮುನ್ಸೂಚನೆ

ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದ ಒಳನಾಡಿನಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್‌ನಿಂದ ಕ್ರಮೇಣ ಕಡಿಮೆಯಾಗುವ ಸಾಧ್ಯತೆಯಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Saree Fashion
ಫ್ಯಾಷನ್1 min ago

Saree Fashion: ರಫಲ್‌ ಡಿಸೈನ್‌ನಲ್ಲಿ ಬಂದಿದೆ ಜಾರ್ಜೆಟ್ ಲೆಹೆಂಗಾ ಸೀರೆ!

Hornbill bird sighting in Gangavathi
ಕರ್ನಾಟಕ3 mins ago

Hornbill Bird: ಗಂಗಾವತಿಯಲ್ಲಿ ‘ಹಾರ್ನ್‌ಬಿಲ್’ ಪಕ್ಷಿ ಪ್ರತ್ಯಕ್ಷ

Samsung Big TV Days Sale Exciting offer on big TVs
ದೇಶ6 mins ago

Samsung: ಸ್ಯಾಮ್‌ಸಂಗ್‌ನ ʼಬಿಗ್‌ ಟಿವಿ ಡೇಸ್‌ʼ ಸೇಲ್‌; ದೊಡ್ಡ ಟಿವಿಗಳ ಮೇಲೆ ಅತ್ಯಾಕರ್ಷಕ ಆಫರ್‌!

Davangere Lok Sabha Constituency
ದಾವಣಗೆರೆ9 mins ago

Davangere Lok Sabha Constituency: ದಾವಣಗೆರೆಯಲ್ಲಿ ನಾರಿಶಕ್ತಿ ಕದನ, ಯಾರು ಗೆದ್ದರೂ ಇತಿಹಾಸ

Rahul Dravid
ಕ್ರಿಕೆಟ್10 mins ago

Rahul Dravid: ರೋಹಿತ್​, ಕೊಹ್ಲಿ, ಪಂತ್​ ಸೇರಿ ಎಲ್ಲ ಆಟಗಾರರಿಗೆ ಖಡಕ್​ ಎಚ್ಚರಿಕೆ ನೀಡಿದ ಕೋಚ್​ ದ್ರಾವಿಡ್​

Kannada New Movie Mandela nari shrinivas
ಸ್ಯಾಂಡಲ್ ವುಡ್10 mins ago

Kannada New Movie: `ಮಂಡೇಲಾ’ ಚಿತ್ರಕ್ಕೆ ನಾರಿ ಶ್ರೀನಿವಾಸ್ ನಾಯಕ!

Election Result 2024
ಪ್ರಮುಖ ಸುದ್ದಿ16 mins ago

Election Result 2024: ಇಂಡಿ ಒಕ್ಕೂಟ ಸಭೆ ಸೇರಿದ್ದ ಸ್ಥಳದಲ್ಲೇ ವಾಸ್ತುದೋಷ, ಅಂದು ಅಮವಾಸ್ಯೆ ಬೇರೆ; ಹಾಗಾಗಿ…

Fact Check
Fact Check28 mins ago

Fact Check: ಸೋಲುವ ಭೀತಿಯಲ್ಲಿ ಬ್ಯಾಂಕಾಕ್‌ಗೆ ಹಾರಲು ಸಿದ್ಧರಾದ್ರಾ ರಾಹುಲ್‌ ಗಾಂಧಿ? ವೈರಲ್‌ ಆಗಿರುವ ಬೋರ್ಡಿಂಗ್‌ ಪಾಸ್‌ನ ಅಸಲಿಯತ್ತೇನು?

Benefits Of Walk After Meal
ಆರೋಗ್ಯ31 mins ago

Benefits Of Walk After Meal: ಊಟದ ಬಳಿಕ ಲಘುವಾದ ವಾಕಿಂಗ್‌ ಮಾಡಿ, ಆರೋಗ್ಯದಲ್ಲಿನ ಬದಲಾವಣೆ ನೋಡಿ!

Dead Body Found Bodies found floating in Cauvery river
ಕ್ರೈಂ37 mins ago

Dead Body Found : ಕಾವೇರಿ ನದಿಯಲ್ಲಿ ತೇಲಿ ಬಂದ ಶವಗಳು; ನೋಡಲು ಮುಗಿಬಿದ್ದ ಜನರು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 hour ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ7 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

ಟ್ರೆಂಡಿಂಗ್‌