ಬೆಂಗಳೂರು: ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ಸಂವಿಧಾನಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಬೃಹತ್ ಪ್ರತಿಮೆಯನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದರು. ೧೨ ಅಡಿ ಎತ್ತರದ ಆ ಪ್ರತಿಮೆ ಬಳಿಗೆ ತೆರಳಿ ಪುತ್ಥಳಿಯ ಪಾದಕ್ಕೆ ಮೋದಿ ಪುಷ್ಪಾರ್ಚನೆ ನೆರವೇರಿಸಿದರು.
ಅಲ್ಲಿಂದ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್(ಬೇಸ್) ಕ್ಯಾಂಪಸ್ ಲೋಕಾರ್ಪಣೆ ಮಾಡಿದರು. ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಸಚಿವರಾದ ವಿ. ಸೋಮಣ್ಣ, ಡಾ. ಸಿ.ಎನ್. ಅಶ್ವತ್ಥನಾರಾಯಣ ಉಪಸ್ಥಿತರಿದ್ದರು. ಸಚಿವ ಅಶ್ವತ್ಥನಾರಾಯಣ ಅವರು ಅಂಬೇಡ್ಕರ್ ಕಂಚಿನ ಪ್ರತಿಮೆಯನ್ನು ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದರು. ನಂತರ ಬೇಸ್ ಸಿಬ್ಬಂದಿ ಹಾಗೂ ಪ್ರಾಧ್ಯಾಪಕರ ಜತೆಗೆ ಫೋಟೊ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾದರು.
ಬಳಿಕ, ತಂತ್ರಜ್ಞಾನ ಕೇಂದ್ರಗಳಾಗಿ ಉನ್ನತೀಕರಿಸಿದ ೧೫೦ ಐಟಿಐಗಳನ್ನು ಪ್ರಧಾನಿ ಲೋಕಾರ್ಪಣೆ ಮಾಡಿದರು. ಐಟಿಐಗಳ ವಿದ್ಯಾರ್ಥಿಗಳೊಂದಿಗೆ ಗ್ರೂಪ್ ಫೋಟೊಗೆ ಮೋದಿ ಪೋಸ್ ನೀಡಿದರು.
ಇದನ್ನೂ ಓದಿ | Modi In Karnataka | ಕಾರು ನಿಲ್ಲಿಸಿ ಕೈ ಬೀಸಿದ ಮೋದಿ: ಕಾರ್ಯಕರ್ತರು ಫುಲ್ ಖುಷ್