ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಲೋಕಾರ್ಪಣೆ, ಕೆಂಪೇಗೌಡರ ೧೦೮ ಅಡಿ ಎತ್ತರದ ಪ್ರತಿಮೆ ಅನಾವರಣ ನಡೆಸಿದ ಪ್ರಧಾನಿ ಮೋದಿ ಅವರು ಬಳಿಕ ಏರ್‌ಪೋರ್ಟ್ ಸಮೀಪದ ಭುವನಹಳ್ಳಿಯಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಸಮಾವೇಶದಲ್ಲಿ ಮೋದಿ ಅವರು ಸುಮಾರು ೩೫ ನಿಮಿಷಗಳ ಕಾಲ ಭಾಷಣ ಮಾಡಲಿದ್ದು, ವೇದಿಕೆಯಲ್ಲಿ ಮೋದಿ ಮತ್ತು ೨೪ ಗಣ್ಯರಿಗೆ ಅವಕಾಶ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಭಾಗಗಳಿಂದ ಬಂದಿರುವ ಸುಮಾರು ೩ ಲಕ್ಷ ಮಂದಿ ಭಾಗವಹಿಸಲಿದ್ದಾರೆ.
ಯಾರಿರುತ್ತಾರೆ ವೇದಿಕೆಯಲ್ಲಿ?
ಪ್ರದಾನಿ ನರೇಂದ್ರ ಮೋದಿ ಅಕ್ಕಪಕ್ಕ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ನಿರ್ಮಲಾನಂದ ಶ್ರೀಗಳು, ನಂಜಾವದೂತ ಶ್ರೀಗಳು ವೇದಿಕೆಯಲ್ಲಿ ಇರಲಿದ್ದಾರೆ.
6 ಮಂದಿ ಕೇಂದ್ರ ಸಚಿವರು, ಬೊಮ್ಮಾಯಿ ಸಂಪುಟ 10 ಮಂದಿ ಸಚಿವರು, ಸಂಸದರಾದ ಡಿವಿಎಸ್, ಬಚ್ಚೇಗೌಡರಿಗೆ ವೇದಿಕೆಯಲ್ಲಿ ಸ್ಥಾನ ಸಿಕ್ಕಿದೆ.
ವೇದಿಕೆಯಲ್ಲಿ ಇರುವವರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಅಶ್ವಿನಿ ವೈಷ್ಣವ್, ರಾಜೀವ್ ಚಂದ್ರಶೇಖರ, ಭಗವಂತ್ ಖೂಬಾ, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಸಚಿವರಾದ ಆರ್. ಅಶೋಕ, ಡಾ. ಅಶ್ವಥ್ ನಾರಾಯಣ, ವಿ. ಸೋಮಣ್ಣ, ಡಾ. ಸುಧಾಕರ್, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜ, ನಾರಾಯಣ ಗೌಡ, ಕೆ. ಗೊಪಾಲಯ್ಯ, ಆರಗ ಜ್ಞಾನೇಂದ್ರ, ಮುನಿರತ್ನ, ಸುನೀಲ್ ಕುಮಾರ್, ಎಂಟಿಬಿ ನಾಗರಾಜ್, ಸಂಸದರಾದ ಡಿ.ವಿ. ಸದಾನಂದ ಗೌಡ ಮತ್ತು ಬಿ.ಎನ್. ಬಚ್ಚೇಗೌಡ.
ಕಾರ್ಯಕ್ರಮ ಹೀಗೆ ನಡೆಯುತ್ತದೆ?
ಮಧ್ಯಾಹ್ನ 12.30ಕ್ಕೆ ಪ್ರಧಾನಿ ಮೋದಿ ಮುಖ್ಯ ವೇದಿಕೆಗೆ ಆಗಮಿಸಲಿದ್ದಾರೆ. 12.43ಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯಿಂದ ಸ್ವಾಗತ ಭಾಷಣ, 12.46ಕ್ಕೆ ನಾಡಪ್ರಭು ಕೆಂಪೇಗೌಡ ಕುರಿತ ಕಿರುಚಿತ್ರ ಪ್ರಸಾರದ ಬಳಿಕ 12.50ಕ್ಕೆ ಸಿಎಂ ಬೊಮ್ಮಾಯಿಯಿಂದ ಭಾಷಣ ನಡೆಯಲಿದೆ.
12.55-01.30ರವರೆಗೆ ಪ್ರಧಾನಿ ಮೋದಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸಮಾವೇಶದಲ್ಲಿ ಮೂವರು ಗಣ್ಯರಿಗೆ ಮಾತ್ರ ಭಾಷಣ ಮಾಡಲು ಅವಕಾಶವಿದೆ.