Site icon Vistara News

Modi In Bengaluru: ನಾಳೆ ಎಚ್‌ಎಎಲ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

Election Result 2023 is for good governance and Development says PM Narendra Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶನಿವಾರ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(HAL)ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಸರ್ಕಾರಿ ವಿಮಾನ ತಯಾರಕ ಸಂಸ್ಥೆಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲಿದ್ದಾರೆ(Modi in Bengaluru). ಜತೆಗೆ, ಕಂಪನಿಯ ಕೆಲವು ಉತ್ಪಾದನಾ ಸೌಲಭ್ಯಗಳಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಅಂದರೆ, ಪ್ರಧಾನಿ ಮೋದಿ ಅವರು, ಲಘು ಯುದ್ಧ ವಿಮಾನ(LCA) ತಯಾರಿಕಾ ಕೇಂದ್ರಕ್ಕೆ ಅವರು ಭೇಟಿ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಭಾರತೀಯ ವಾಯುಪಡೆಯು ಹೆಚ್ಚಿನ ಫೈಟರ್ ಜೆಟ್‌ಗಳು ಮತ್ತು ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು (ಎಲ್‌ಸಿಎಚ್) ಖರೀದಿಸುವ ಮತ್ತು ಅದರ ಸುಖೋಯ್ -30 ಅನ್ನು ನವೀಕರಿಸುವ ಡೀಲ್‌ ಅನ್ನು ಎಚ್ಎಎಲ್‌ನೊಂದಿಗೆ ಮಾಡಿಕೊಳ್ಳಲಿದೆ.ಈ ಹಂತದಲ್ಲಿ ಪ್ರಧಾನಿ ಮೋದಿ ಅವರು ಎಚ್‌ಎಎಲ್‌ಗೆ ಭೇಟಿ ನೀಡುತ್ತಿರುವುದು ಭಾರೀ ಗಮನ ಸೆಳೆದಿದೆ. ಭಾರತೀಯ ವಾಯು ಪಡೆಯೊಂದಿಗೆ ಎಚ್ಎಎಲ್‌ನ ಸಂಭವಾ ಡೀಲ್‌ಗಳು ಶತಕೋಟಿ ಡಾಲರ್ ಮೌಲ್ಯದ್ದಗಳಾಗಿವೆ ಎಂದು ಹೇಳಲಾಗುತ್ತಿದೆ.

ಫ್ರೆಂಚ್ ಸಂಸ್ಥೆ ಸಫ್ರಾನ್‌ನೊಂದಿಗೆ ಜಂಟಿಯಾಗಿ ಹೆಲಿಕಾಪ್ಟರ್ ಎಂಜಿನ್‌ಗಳನ್ನು ವಿನ್ಯಾಸಗೊಳಿಸುವ ಮತ್ತು ಅಭಿವೃದ್ಧಿಪಡಿಸುವ ಕೆಲಸವನ್ನು ಎಚ್ಎಎಲ್ ಪ್ರಾರಂಭಿಸಲು ಸಿದ್ಧವಾಗಿದೆ. ಅಮೆರಿಕದ ಸಂಸ್ಥೆ ಜಿಇ ಏರೋಸ್ಪೇಸ್‌ನೊಂದಿಗೆ ದೇಶದಲ್ಲಿ ಫೈಟರ್ ಜೆಟ್ ಎಂಜಿನ್‌ಗಳ ಜಂಟಿ ಉತ್ಪಾದನೆ ಒಪ್ಪಂದ ಕುರಿತು ಮಾತುಗತೆಗಳು ಕೂಡ ನಡೆಯುತ್ತಿವೆ.

ಲಘು ಯುದ್ಧ ವಿಮಾನ ಎಂಕೆ-1ಎ ಮತ್ತು ಹಿಂದೂಸ್ತಾನ್ ಟುರ್ಬೊ ಟ್ರೈನರ್-40(ಎಚ್‌ಟಿಟಿ-40) ವಿಮಾನಗಳ ತಯಾರಿಕಾಗಿ ಎಚ್ಎಎಲ್ ನಾಸಿಕ್‌ನಲ್ಲಿ ಹೊಸ ಉತ್ಪದನಾ ಘಟಕವನ್ನು ಸಕ್ರಿಯಗೊಳಿಸುತ್ತಿದೆ. ಭಾರತದ ವಾಯುಪಡೆ ಬೇಡಿಕೆಗೆ ಅನುಗುಣವಾಗಿ ಎಚ್ಎಎಲ್ ಈ ನಿರ್ಧಾರವನ್ನು ಮಾಡಿದೆ. ಭಾರತೀಯ ವಾಯುಪಡೆಯು 2021ರ ಫೆಬ್ರವರಿಯಲ್ಲಿ ಎಚ್‌ಎಎಲ್ 48 ಸಾವಿರ ಕೋಟಿ ರೂ. ವೆಚ್ಚದಲ್ಲಿ 83 ಎಂಕೆ-1ಎಎಸ್ ವಿಮಾನಗಳಿಗಾಗಿ ಆರ್ಡರ್ ಮಾಡಿತ್ತು. ಅಲ್ಲದೆ, ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ಅಕ್ಟೋಬರ್‌ನಲ್ಲಿ ಘೋಷಣೆ ಮಾಡಿ, ಮತ್ತೆ 97 ಎಂಕೆ-1ಎ ವಿಮಾನಗಳನ್ನು ಖರೀದಿಸಲಾಗುತ್ತದೆ ಮತ್ತು ಇದಕ್ಕಾಗಿ 67 ಸಾವಿರ ಕೋಟಿ ರೂ. ವ್ಯಯಿಸಲಾಗುತ್ತದೆ ಎಂದು ತಿಳಿಸಿದ್ದರು.

ಬೆಂಗಳೂರಿನ ಘಟಕದಲ್ಲಿ ಎಚ್ಎಎಲ್ ಪ್ರತಿ ವರ್ಷ 16 ಲಘು ಯುದ್ಧವಿಮಾನ ಎಂಕೆ-1ಎಎಸ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ನಾಸಿಕ್ ಘಟಕವೂ ಸಕ್ರಿಯಗೊಂಡಿದೆ ವರ್ಷಕ್ಕೆ 24 ಜೆಟ್‌ಗಳ ಉತ್ಪಾದನೆ ಸಾಧ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ, ಭಾರತೀಯ ವಾಯುಪಡೆಯು ತನ್ನ ಸುಖೋಯಿ-30 ಯುದ್ಧವಿಮಾನಗಳನ್ನು ಅಪ್‌ಡೇಟ್ ಮಾಡಲು ಎಚ್ಎಎಲ್‌ ಆರ್ಡರ್ ನೀಡುವ ಸಾಧ್ಯತೆ ಇದ್ದು, ಇದಕ್ಕಾಗಿ 65 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: PM Narendra Modi: ಮಕ್ಕಳನ್ನು ಪ್ರಾಂಕ್‌ ಮಾಡಿದ ಪ್ರಧಾನಿ ಮೋದಿ! ವಿಡಿಯೋ ವೈರಲ್

Exit mobile version