ಬೆಂಗಳೂರು: ಪ್ರಧಾನಿ ಮೋದಿಯವರಿಗೆ ಆರೋಗ್ಯದ ಬಗ್ಗೆ ಅಪಾರ ಕಾಳಜಿ. ತಮ್ಮ ಆರೋಗ್ಯವಷ್ಟೆ ಅಲ್ಲ, ತಮ್ಮನ್ನು ಭೇಟಿಯಾಗುವವರ ಆರೋಗ್ಯದ ಬಗ್ಗೆಯೂ ಅಷ್ಟೆ ಕಾಳಜಿ ಇದೆ ಎಂಬುದು ಸೋಮವಾರ ಮತ್ತೊಮ್ಮೆ ಸಾಬೀತಾಯಿತು.
ಸಚಿವ ಎಂ ಟಿ ಬಿ ನಾಗರಾಜ್ ಅವರ ಆರೋಗ್ಯವನ್ನು ಮೋದಿ ವಿಚಾರಿಸಿದ್ದು, ಅದಕ್ಕೆ ಎಂಟಿಬಿ ನಾಗರಾಜ್ ನೀಡಿದ ಉತ್ತರ ಎರಡೂ ಮಜವಾಗಿತ್ತು.
ಇದನ್ನೂ ಓದಿ | ಪ್ರತಿ ಕೆಜಿಗೆ 1000 ಕೋಟಿ ರೂ.ಕೊಡುತ್ತೇನೆಂದ ನಿತಿನ್ ಗಡ್ಕರಿ; 15ಕೆಜಿ ತೂಕ ಇಳಿಸಿಕೊಂಡ ಬಿಜೆಪಿ ಸಂಸದ
ಯಲಹಂಕ ವಾಯುನೆಲೆಯಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲು ಸಿಎಂ, ರಾಜ್ಯಪಾಲರ ಜತೆಗೆ ಸಚಿವ ಎಂಟಿಬಿ ನಾಗರಾಜ್ ಕೂಡ ಆಗಮಿಸಿದ್ದರು. ಈ ಸಂದರ್ಭದಲ್ಲಿ ಎಂಟಿಬಿ ಅವರ ಬಳಿ ಆಗಮಿಸಿದ ಮೋದಿ, “ಕ್ಯಾ ಆಪ್ ಇತನಾ ಪತ್ಲಾ ಹೋ?ʼ (ಏಕಿಷ್ಟು ಸಣಕಲಾಗಿದ್ದೀರ?) ಎಂದು ಎಂಟಿಬಿ ಅವರ ಹೆಗಲ ಮೇಲೆ ಕೈಯಿಟ್ಟು ಪ್ರಶ್ನಿಸಿದರು! ಕೂಡಲೆ ಎಂಟಿಬಿ ನಾಗರಾಜ್ ಸಹ ಹಿಂದಿಯಲ್ಲೆ ಉತ್ತರಿಸಿದರು. ʼಯೋಗ ಔರ್ ಸ್ವಿಮ್ಮಿಂಗ್ ಕರ್ ರಹಾ ಹೂಂ. ಇಸ್ ಲಿಯೇ ಮೇ ಪತ್ಲಾ ಲಗ್ತಾ ಹೂಂʼ(ನಾನು ಯೋಗ ಮತ್ತು ಸ್ವಿಮ್ಮಿಂಗ್ ಮಾಡುತ್ತಿದ್ದೇನೆ. ಅದಕ್ಕಾಗಿ ಇಷ್ಟು ತೆಳ್ಳಗಿದ್ದೇನೆ) ಎಂದಿದ್ದಾರೆ. ಇದಕ್ಕೆ , “ಅಚ್ಚಾʼ(ಆಗಲಿ) ಎನ್ನುತ್ತ ನಕ್ಕ ಪ್ರಧಾನಿ ಮೋದಿ, ಸಚಿವರ ಹವ್ಯಾಸಗಳಿಗೆ ಮೆಚ್ಚುಗೆ ಸೂಚಿಸುತ್ತ ಮುಂದೆ ಸಾಗಿದರು.
ಇದನ್ನೂ ಓದಿ | video viral: ಇದೇ ತರ ಹೊಟ್ಟೆ ಬೆಳೆದ್ರೆ ಏನಾಗ್ತದೆ ನೋಡು.. ಮಮತಾ ಬ್ಯಾನರ್ಜಿ ಹೀಗೂ ಜೋಕ್ ಮಾಡ್ತಾರಾ?