Site icon Vistara News

Modi in Karnataka : ಮೆಗಾ ರೋಡ್‌ ಶೋನಲ್ಲಿ ಮುಗಿಲುಮುಟ್ಟಿದ ʻಮೋದಿ ಮೋದಿʼ ಘೋಷಣೆ, ತೂರಿಬಂದ ಮೊಬೈಲ್

Modi road Show in Bangalore

Modi road Show in Bangalore

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Prime minister Narendra Modi) ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟು ನಡೆಸುತ್ತಿರುವ 26 ಕಿ.ಮೀ.ಗಳಷ್ಟು ಸುದೀರ್ಘವಾದ ರೋಡ್‌ ಶೋಗೆ (Modi Road Show) ಭಾರಿ ಜನಸಾಗರವೇ ಹರಿದುಬಂದಿದೆ. ಮೋದಿ ಅವರು ರಸ್ತೆಯಲ್ಲಿ ಕೈ ಬೀಸುತ್ತಾ ಸಾಗುತ್ತಿದ್ದರೆ, ಜನರು ಉತ್ಸಾಹದಿಂದ ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾ ಸೇವಂತಿಕೆ ದಳ ಮಳೆಗರೆಯುತ್ತಿದ್ದಾರೆ. ಈ ನಡುವೆ ರೋಡ್‌ ಶೋ ವೇಳೆ ಮೂರು ಬಾರಿ ಹೂವಿನೊಂದಿಗೆ ಮೊಬೈಲ್‌ ತೂರಿಬಂದಿರುವುದು ಆತಂಕ ಮೂಡಿಸಿತು..

ಬೆಂಗಳೂರಿನಲ್ಲಿ ನಡೆದ ಮೋದಿ ರೋಡ್‌ ಶೋ ಸಂಪೂರ್ಣ ಚಿತ್ರಣ ಇಲ್ಲಿದೆ

ಸೋಮೇಶ್ವರ ಸಭಾಭವನ ಬಳಿಯಿಂದ ಆರಂಭವಾದ ರೋಡ್ ಶೋ ಸುಮಾರು 26 ಕಿಮೀ ಕ್ರಮಿಸಲಿದೆ. ಮಧ್ಯಾಹ್ನ 11.45ರ ಹೊತ್ತಿಗೆ ರೋಡ್‌ ಶೋ, ಜೆ.ಪಿ. ನಗರ, ಜಯನಗರ ದಾಟಿ ಸೌತ್ ಎಂಡ್ ಸರ್ಕಲ್ ದಾಟಿ ಮಾಧವರಾವ್ ವೃತ್ತದ ದಾಟಿ ರಾಮಕೃಷ್ಣ ಆಶ್ರಮದ ಬಳಿ ತಲುಪಿತು.

ಕರ್ನಾಟಕ ಕುರುಕ್ಷೇತ್ರದಲ್ಲಿ ಮೋದಿಯ ಕೃಷ್ಣನ ಅವತಾರ

ಬಳಿಕ ಉಮಾ ಥಿಯೇಟರ್ ವೃತ್ತ, ಮೈಸೂರು ಸಿಗ್ನಲ್, ಟೋಲ್ ಗೇಟ್ ಸಿಗ್ನಲ್, ಗೋವಿಂದರಾಜನಗರ, ಮಾಗಡಿ ರೋಡ್ ಜಂಕ್ಷನ್, ಶಂಕರ ಮಠ ಸರ್ಕಲ್, ಮಲ್ಲೇಶ್ವರ ಸರ್ಕಲ್ ದಾಟಿ 2 ಗಂಟೆಯ ಹೊತ್ತಿಗೆ ಕಾಡು ಮಲ್ಲೇಶ್ವರ ದೇವಸ್ಥಾನದ ಬಳಿ ಅಂತ್ಯಗೊಂಡಿತು. ಅಲ್ಲಿಂದ ಮೋದಿ ಅವರು ಮೇಖ್ರಿ ಸರ್ಕಲ್‌ ಹೆಲಿಪ್ಯಾಡ್‌ಗೆ ಹೋಗಿ ಮುಂದೆ ವಿಮಾನದಲ್ಲಿ ಬಾದಾಮಿಗೆ ತೆರಳಿದರು.

ಬಜರಂಗಿ ಲುಕ್‌ನಲ್ಲಿ ಗಮನ ಸೆಳೆದ ಮೋದಿ ಅಭಿಮಾನಿಗಳು

ಮೋದಿ ವಾಹನದ ಪಕ್ಕ ಬಂದು ಬಿದ್ದ ಮೊಬೈಲ್‌

ಮೈಸೂರಿನಲ್ಲಿ ನಡೆದ ರೋಡ್‌ ಶೋ ಸಂದರ್ಭದಲ್ಲಿ ಹೂವಿನ ಜತೆ ಮೊಬೈಲ್‌ ತೂರಿಬಂದು ಆತಂಕ ಸೃಷ್ಟಿಯಾಗಿತ್ತು. ಬೆಂಗಳೂರು ರೋಡ್‌ ಶೋನಲ್ಲೂ ಮೂರು ಬಾರಿ ಮೊಬೈಲ್‌ ತೂರಿಬಂದಿದೆ. ಜಯನಗರ ಸಮೀಪ ಎರಡು ಬಾರಿ ಮತ್ತು ಜೆ.ಪಿ. ನಗರದಲ್ಲಿ ಒಂದು ಬಾರಿ ಮೊಬೈಲ್‌ ಮೋದಿ ಸಂಚರಿಸುತ್ತಿದ್ದ ವಾಹನದ ಬಳಿ ಬಂದು ಬಿದ್ದಿದೆ. ಹೂವನ್ನು ಎಸೆಯುವಾಗ ಮೊಬೈಲ್‌ ಕೈತಪ್ಪಿ ಬಿತ್ತು ಎಂದು ಹೇಳಲಾಗಿದೆ. ಕೂಡಲೇ ಎಸ್‌ಪಿಜಿ ಸಿಬ್ಬಂದಿ ಆ ಮೊಬೈಲನ್ನು ಎತ್ತಿ ಆಯಾ ವ್ಯಕ್ತಿಗಳಿಗೆ ನೀಡಿದರು.

ಹಸುಗೂಸನ್ನೂ ಹಿಡಿದು ಬಂದ ಮಹಿಳೆ

ಮೋದಿಯನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಜನರು ಬಂದಿದ್ದು, ಮಹಿಳೆಯೊಬ್ಬರು ತಮ್ಮ ಐದು ತಿಂಗಳ ಮಗುವನ್ನು ಹಿಡಿದುಕೊಂಡು ಬಂದಿದ್ದು ಕಂಡುಬಂತು. ವಿಕಲಚೇತನ ಮಕ್ಕಳು, ವಯೋವೃದ್ಧರು ಕೂಡಾ ಆಗಮಿಸಿದ್ದರು.

ಮೋದಿ ಅಂದ್ರೆ ದೇವರು.. ಮೋದಿ ಅಂದ್ರೆನೇ ಶಕ್ತಿ.. ಮೋದಿಯಿಂದಲೇ ದೇಶ

ಮೋದಿಯವರನ್ನು ಹತ್ತಿರದಿಂದ ಕಾಣಲು ಮತ್ತು ಪ್ರಧಾನಿಯವರ ವಾಹನ ಮತ್ತು ಮೋದಿಯವರತ್ತ ಹೂವುಗಳನ್ನು ಎಸೆದು ಅವರನ್ನು ಸ್ವಾಗತಿಸಲು ಈ ರಸ್ತೆಯುದ್ದಕ್ಕೂ ಮಕ್ಕಳು, ಹಿರಿಯರು ಸೇರಿ ಅಭಿಮಾನಿಗಳು, ಸಾರ್ವಜನಿಕರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾಯುತ್ತಿದ್ದಾರೆ.

ಮೋದಿ ರೋಡ್‌ ಶೋನಲ್ಲಿ ಬಜರಂಗಿ ಫುಲ್‌ ಮಿಂಚಿಂಗ್

ಮೋದಿ ಅವರು ಬುಧವಾರವೂ ಇನ್ನೊಂದು ಸುತ್ತಿನ ರೋಡ್‌ ಶೋ ನಡೆಸಲಿದ್ದು, ಎರಡೂ ರೋಡ್‌ ಶೋಗಳಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸಂಸದರಾದ ಪಿ.ಸಿ.ಮೋಹನ್ ಮತ್ತು ತೇಜಸ್ವಿ ಸೂರ್ಯ ಅವರು ರೋಡ್‌ ಶೋ ಸಂದರ್ಭದಲ್ಲಿ ಜೊತೆಗೆ ಇದ್ದರು.‌

ಹೀಗೆಲ್ಲ ತೊಂದರೆ ಕೊಟ್ಟರೆ ಜನ ವೋಟು ಹಾಕ್ತಾರೆ..?

ಇದನ್ನೂ ಓದಿ : ರೋಡ್‌ ಶೋ ವೇಳೆ ರಾಮಕೃಷ್ಣ ಮಠದ ಸ್ವಾಮೀಜಿಗಳಿಂದ ಪುಸ್ತಕ ಉಡುಗೊರೆ; ಭಕ್ತಿಯಿಂದ ಸ್ವೀಕರಿಸಿದ ಮೋದಿ

Exit mobile version