Site icon Vistara News

Modi In Karnataka | ಮೋದಿ ಕಾರ್ಯಕ್ರಮದ ಸಮಯಕ್ಕೇ ಸುದ್ದಿಗೋಷ್ಠಿ ಕರೆದ ಸಿದ್ದರಾಮಯ್ಯ

Modi In Karnataka

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿರುವ ನಡುವೆಯೇ ಕಾಂಗ್ರೆಸ್‌ ತನ್ನ ರಣತಂತ್ರ ತೀವ್ರಗೊಳಿಸಿದೆ. ಮಾಜಿ ಸಿಎಂ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಈಗಾಗಲೆ ಟ್ವೀಟ್‌ ಮೂಲಕ ಪ್ರಧಾನಿ ಮೋದಿಯವರನ್ನು ಕೆಣಕಿದ್ದಾರೆ. ಇದೀಗ ಪ್ರಧಾನಿ ಕಾರ್ಯಕ್ರಮದ ವೇಳೆಗೆ ಸಿದ್ದರಾಮಯ್ಯ ಸುದ್ದಿಗೋಷ್ಠಿಯನ್ನೇ ಕರೆದಿದ್ದಾರೆ.

ಮದ್ಯಾಹ್ನ ಕ್ವೀನ್ಸ್‌ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದು, ಇದೇ ಸಮಯಕ್ಕೆ ಪ್ರಧಾನಿ ಮೋದಿ ಐಐಎಸ್‌ಸಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮೋದಿ ಕಾರ್ಯಕ್ರಮದ ಸಮಯದಲ್ಲೆ ತಮ್ಮತ್ತ ಮಾಧ್ಯಮಗಳ ಗಮನ ಕೇಂದ್ರೀಕರಿಸುವ ಪ್ರಯತ್ನ ಇದು ಎಂದು ವಿಶ್ಲೇಷಿಸಲಾಗುತ್ತಿದೆ. ಜತೆಗೆ, ಮೋದಿಗೆ ಕರ್ನಾಟಕದಲ್ಲಿ ತಾವೊಬ್ಬರೇ ಎದುರಾಳಿ ಎಂಬ ಸಂದೇಶವನ್ನು ನೀಡುವ ಪ್ರಯತ್ನವೂ ಇದು ಎನ್ನಲಾಗುತ್ತಿದೆ.

ಟ್ವೀಟ್‌ ಏಟು: ಸೋಮವಾರ ಬೆಳಗ್ಗೆ 13 ಟ್ವೀಟ್‌ ಮಾಡಿದ್ದ ಸಿದ್ದರಾಮಯ್ಯ, ಜ್ಞಾನ ಭಾರತಿ ಆವರಣದಲ್ಲಿರುವ ಬಾಬಾ ಸಾಹೇಬ್‌ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌(ಬೇಸ್‌) ಸಂಸ್ಥೆಯನ್ನು ತಾವೇ ಸ್ಥಾಪಿಸಿದ್ದು. ತಮ್ಮ ಅವಧಿಯಲ್ಲೆ ಇದು ಉದ್ಘಾಟನೆ ಆಗಿದ್ದು ಎಂದು ತಿಳಿಸಿದ್ದರು. ಈ ಮೂಲಕ, ಬೇಸ್‌ ಸಂಸ್ಥೆ ಸ್ಥಾಪನೆಯ ಕ್ರೆಡಿಟ್‌ ತಾವೇ ತೆಗೆದುಕೊಳ್ಳಲು ಪ್ರಯತ್ನಿಸಿದ್ದರು.

ಇದನ್ನೂ ಓದಿ | Modi In Karnataka | ಎರಡು ದಿನಗಳ ಪ್ರವಾಸಕ್ಕೆ ಬೆಂಗಳೂರಿಗೆ ಬಂದಿಳಿದ ಪ್ರಧಾನಿ

ಅದರ ಜತೆಗೆ, ಟ್ವಿಟ್ಟರ್‌ನಲ್ಲೆ 13 ಪ್ರಶ್ನೆಗಳನ್ನು ಸಿದ್ದರಾಮಯ್ಯ ಕೇಳಿದ್ದರು. ಉತ್ತರ ಹೇಳಿ ಮೋದಿ ಎಂದು 13 ಪ್ರಶ್ನೆಗಳನ್ನು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಮುಂದಿಟ್ಟಿದ್ದರು. ೧೫ನೇ ಹಣಕಾಸು ಆಯೋಗ ಮಧ್ಯಂತರ ವರದಿಯಲ್ಲಿ ಕರ್ನಾಟಕ ರಾಜ್ಯಕ್ಕೆ ₹೫,೪೯೫ ಕೋಟಿ ವಿಶೇಷ ಅನುದಾನ ಶಿಫಾರಸು ಮಾಡಿತ್ತು. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈ ಶಿಫಾರಸನ್ನು ತಿರಸ್ಕರಿಸಿದ್ದು ರಾಜ್ಯಕ್ಕೆ ಬಗೆದ ದ್ರೋಹವಲ್ಲವೇ? ಅದೇ ರೀತಿ ಕರ್ನಾಟಕದ ತೆರಿಗೆ ಸಂಗ್ರಹ ಹೆಚ್ಚಾಗುತ್ತಿದೆ.

ಕೇಂದ್ರದಿಂದ ಬರುವ ಪಾಲು ಕಡಿಮೆಯಾಗುತ್ತಿದೆ ಈ ನಷ್ಟಕ್ಕೆ ಯಾರು ಹೊಣೆ ?, ಬೆಂಗಳೂರು ಉಪನಗರ ರೈಲು ಯೋಜನೆಯ 20% ವೆಚ್ಚವನ್ನು ಕೇಂದ್ರ ಸರ್ಕಾರ ನಿಡಿದೆಯೇ? ಇಲ್ಲವೇ ಇದು ಇನ್ನೊಂದು ಜುಮ್ಮಾವೇ? ಕೃಷಿ ಕಾಯ್ದೆಗಳನ್ನು ರದ್ದು ಪಡಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಇದು ನಿಮ್ಮ ಸೂಚನೆಯಂತೆಯೇ ನಡೆದಿದ್ದೋ? ಇಲ್ಲವೇ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯೇ? ಎಂದು ಹಲವಾರು ಪ್ರಶ್ನೆಗಳನ್ನು ಹ್ಯಾಷ್‌ಟ್ಯಾಗ್‌ ಮೂಲಕ ಆನ್ಸರ್‌ ಮಾಡಿ ಮೋದಿ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ | Modi in Karnataka | ಮೋದಿ ಪ್ರತಿ ಬಾರಿ ಉಳಿಯುವುದು ಇದೇ ಕೊಠಡಿಯಲ್ಲಿ!

Exit mobile version