ಬೆಂಗಳೂರು : ಪ್ರಧಾನಿ ಮೋದಿಗೆ ಸ್ವಾಗತ ಕೋರಲು ಬಿಜೆಪಿ ಕಾರ್ಯಕರ್ತರಿಗೆ ಮೇಖ್ರಿ ಸರ್ಕಲ್ ಬಳಿ ಬ್ಯಾರಿಕೇಡ್ ಅಳವಡಿಸಿ ಅವಕಾಶ ಕಲ್ಪಿಸಿಕೊಡಲಾಗಿತ್ತು. ಕಾರು ಹಾದು ಹೋಗುವುದನ್ನು ನೋಡಿ ಖುಷಿ ಪಡೋಣ ಎಂದುಕೊಂಡಿದ್ದ ಕಾರ್ಯಕರ್ತರಿಗೆ ಪ್ರಧಾನಿ ಬಂಪ್ ಗಿಫ್ಟ್ ಕೊಟ್ಟರು.
ಪೊಲೀಸ್ ಬಂದೋಬಸ್ತ್ ನಡುವೆಯೂ ಮೇಖ್ರೀ ಸರ್ಕಲ್ ಬಳಿ ನೂರಾರು ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು. ಫ್ಲೈಓವರ್ ಮೇಲೆ ಬರುತ್ತಿದ್ದಂತೆಯೇ ಮೋದಿ ಕಾರು ನಿಂತಿತು. ಕಾರಿನೊಳಗಿಂದಲೇ ಕುಳಿತು ಕೆಲಕಾಲ ನಮಸ್ಕಾರ ಮಾಡಿದರು. ಇದರಿಂದ ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಯಿತು. ಮೋದಿ ಮೋದಿ ಎಂದು ಘೋಷಣೆ ಕೂಗುತ್ತಿರುವುದು ಪ್ರಧಾನಿಯವರನ್ನು ಉತ್ತೇಜಿಸಿತು.
ಕೂಡಲೆ ಕಾರಿನ ಬಾಗಿಲು ತೆರೆದ ಮೋದಿ ಕೆಳಗಿಳಿದೇಬಿಟ್ಟರು. ಸುಮಾರು ಒಂದು ನಿಮಿಷ ಅಲ್ಲಿಯೇ ಇದ್ದು ಬಿಜೆಪಿ ಕಾರ್ಯಕರ್ತರಿಗೆ ಕೈ ಮುಗಿದರು. ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಜೈ ಕಾರ ಕೂಗುವುದು ಮುಂದುವರಿಸಿದರು. ತಮ್ಮ ಪ್ರೀತಿಪಾತ್ರ ನಾಯಕನನ್ನು ಅತ್ಯಂತ ಹತ್ತಿರದಿಂದ ಕಂಡು ಪುಳಕಿತರಾದರು.
ಇದನ್ನೂ ಓದಿ | ʼನಾನು ಕರ್ನಾಟಕಕ್ಕೆ ಹೋಗುತ್ತಿರುವೆʼ ಎಂದು ಕನ್ನಡದಲ್ಲೇ ಟ್ವೀಟ್ ಮಾಡಿದ ಮೋದಿ; ವಾಕ್ಯ ರಚನೆ ಬಗ್ಗೆ ಅಪಸ್ವರ
ಪ್ರಧಾನಿ ನರೇಂದ್ರ ಮೋದಿ ಸಾಗುವ ರಸ್ತೆಯಲ್ಲಿ ಎಲ್ಲೂ ಕಪ್ಪು ಬಾವುಟ ತೋರಿಸದಂತೆ ಸೂಕ್ತ ಎಚ್ಚರಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ | Modi In Karnataka | ಮೋದಿ ಕಾರ್ಯಕ್ರಮಕ್ಕಾಗಿ ರೈಲು ಸಂಚಾರ ವಿಳಂಬ