Site icon Vistara News

Modi Virtual samvada: ಕಾಂಗ್ರೆಸ್‌ನ ವಾರಂಟಿಯೇ ಮುಗಿದಿದೆ, ಇನ್ನು ಗ್ಯಾರಂಟಿ ಕಥೆ ಏನು?; ಮೋದಿ ಪ್ರಶ್ನೆ

modi-virtual-samvada: Congress warranty itself expired, then what about their guarantee? Asks Modi

modi-virtual-samvada: Congress warranty itself expired, then what about their guarantee? Asks Modi

ಬೆಂಗಳೂರು: ʻಕಾಂಗ್ರೆಸ್‌ನ ವಾರಂಟಿಯೇ ಮುಗಿದಿದೆ.. ಇನ್ನು ಅದು ಕೊಡುವ ಗ್ಯಾರಂಟಿಗಳಿಗೆ ಯಾವ ಬೆಲೆ ಇದೆʼ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದರು. ಅದರ ಜತೆಗೆ ಕಾಂಗ್ರೆಸ್‌ ನೀಡುತ್ತಿರುವ ಉಚಿತ ಕೊಡುಗೆಗಳ ಮೇಲೂ ವಾಗ್ದಾಳಿ ನಡೆಸಿದರು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕದ 50 ಲಕ್ಷ ಬಿಜೆಪಿ ಕಾರ್ಯಕರ್ತರ ಜತೆಗೆ ವರ್ಚ್ಯುವಲ್‌ ಸಂವಾದ (Modi Virtual samvada) ನಡೆಸಿದ ಪ್ರಧಾನಿ ಮೋದಿ ಅವರು, ಕಾಂಗ್ರೆಸ್‌ ಹಲವಾರು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಆದರೆ, ಆ ಗ್ಯಾರಂಟಿಗಳಾವುವೂ ಈಡೇರುವುದಿಲ್ಲ ಎಂದರು.

ದಕ್ಷಿಣ ಕನ್ನಡದ ಅರುಣ್ ಸೇಠ್ ಎಂಬುವವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವರು ರಾಜಕಾರಣವನ್ನು ಭ್ರಷ್ಟಾಚಾರದ ಮಾರ್ಗ ಮಾಡಿಕೊಂಡಿದ್ದಾರೆ. ಇದು ದೇಶದ ಭವಿಷ್ಯ, ಮುಂದಿನ‌ ಪೀಳಿಗೆಗೆ ಮಾರಕ. ಉಚಿತ ಯೋಜನೆಗಳ ರಾಜಕಾರಣ ಭ್ರಷ್ಟಾಚಾರಕ್ಕೆ ದಾರಿ. ಉಚಿತ ಯೋಜನೆಗಳ ಮೂಲಕ ದೇಶ, ಯುವ ಸಮೂಹದ ಭವಿಷ್ಯವನ್ನು ಹಾಳು ಮಾಡಿದ್ದಾರೆ. ಈ ಬಗ್ಗೆ ಅವರಿಗೆ ಚಿಂತೆಯೇ ಇಲ್ಲ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಉಚಿತ ಘೋಷಣೆಗಳಿಂದ ಸರ್ಕಾರ ನಡೆಯಲ್ಲ ಎಂದು ಹೇಳಿದರು.

ʻʻಬಿಜೆಪಿ ಈಥರದ ಶಾರ್ಟ್ ಕಟ್ ದಾರಿಯಲ್ಲಿ ಸಾಗಲ್ಲ. ನಮಗೆ ದೇಶದ ಭವಿಷ್ಯ ಬೇಕು. ನಾವು ಐದು ವರ್ಷ ಅಷ್ಟೇ ಆಡಳಿತ ಗುರಿ ಇಟ್ಟುಕೊಂಡಿಲ್ಲ. ನಮ್ಮ ಕನಸು ದೇಶದ ಭವಿಷ್ಯ ಉತ್ತಮ, ಸುರಕ್ಷಿತವಾಗಿಡುವುದು. ಮುಂದಿನ 25 ವರ್ಷ ದೇಶದ ಚಿತ್ರಣ ಬದಲಾಗಲಿದೆ, ಬದಲಾಗಬೇಕು ಎನ್ನುವುದು ನಮ್ಮ ಗುರಿʼʼ ಎಂದು ಹೇಳುವ ಮೂಲಕ ಮೋದಿ ಅವರು ಕಾಂಗ್ರೆಸ್ ನ ಉಚಿತ ಯೋಜನೆಗಳನ್ನು ಖಂಡಿಸಿದರು.

ಕಾಂಗ್ರೆಸ್‌ ಎಂದರೆ ಸುಳ್ಳಿನ ಗ್ಯಾರಂಟಿ, ಕಾಂಗ್ರೆಸ್‌ ಎಂದರೆ ಭ್ರಷ್ಟಾಚಾರದ ಗ್ಯಾರಂಟಿ ಎಂದು ಹೇಳಿದ ಮೋದಿ ಅವರು ಕಾಂಗ್ರೆಸ್‌ನವರು ಯಾವ ಗ್ಯಾರಂಟಿಯನ್ನೂ ನೀಡುವ ಸ್ಥಿತಿಯಲ್ಲಿಲ್ಲ, ಅದನ್ನು ಈಡೇರಿಸುವ ಸ್ಥಿತಿಯಲ್ಲಂತೂ ಮೊದಲೇ ಇಲ್ಲ ಎಂದು ಹೇಳಿದರು. ಕಾಂಗ್ರೆಸ್‌ ಪಕ್ಷದ ವಾರಂಟಿಯೇ ಎಕ್ಸ್‌ಪೈರಿ ಆಗಿದೆ. ಹಾಗಿರುವ ಅದು ಕೊಡುವ ಗ್ಯಾರಂಟಿಗಳಿಗೆ ಎಲ್ಲಿದೆ ವಾರಂಟಿ ಎಂದು ಕೇಳಿದರು.

ಕಾಂಗ್ರೆಸ್‌ ಪಕ್ಷ ರಾಜಸ್ಥಾನದಲ್ಲಿ ಹಲವಾರು ಭರವಸೆಗಳನ್ನು ಕೊಟ್ಟಿತ್ತು. ಅಲ್ಲಿ ಸರ್ಕಾರ ಬಂದು ನಾಲ್ಕು ವರ್ಷಗಳಾದವು, ಯಾವ ಭರವಸೆಯಾದರೂ ಈಡೇರಿದೆಯಾ? ಹಿಮಾಚಲ ಪ್ರದೇಶದಲ್ಲಿ ಸರ್ಕಾರ ಬಂದು ಎಷ್ಟು ಕಾಲವಾಯಿತು? ಅಲ್ಲಿನ ಭರವಸೆಗಳು ಈಡೇರಿದವಾ ಎಂದು ಪ್ರಶ್ನಿಸಿದರು. ಅಲ್ಲಿನ ಜನ ಕಾಂಗ್ರೆಸ್‌ನ ಭರವಸೆಗಳಿಂದ ಭ್ರಮ ನಿರಶನಗೊಂಡಿದ್ದಾರೆ ಎಂದು ಮೋದಿ ಹೇಳಿದರು.

ನಾವು ಕಷ್ಟದಲ್ಲಿರುವಾಗ ಕೊಟ್ಟೆವು

ಉಚಿತ ಕೊಡುಗೆಗಳ ಬಗ್ಗೆ ಖಂಡತುಂಡವಾಗಿ ಮಾತನಾಡಿದ ಮೋದಿ ಅವರು, ರೇವಡಿಗಳಿಂದ ದೇಶದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದರು. ತಾವು ಕೂಡಾ ಉಚಿತ ಕೊಡುಗೆಗಳನ್ನು ಕೊಟ್ಟಿದ್ದೇವೆ ಎಂದು ಒಪ್ಪಿಕೊಂಡ ಅವರು, ಅದು ಕಷ್ಟಕಾಲದಲ್ಲಿ ಕೊಟ್ಟಿರುವ ಕೊಡುಗೆಗಳು. ಯಾರೂ ಹಸಿವಿನಿಂದ ಬಳಲಬಾರದು ಎಂದು ಕೊಟ್ಟ ಕೊಡುಗೆಗಳು ಏಂದು ವಿವರಿಸಿದರು.

ಇದನ್ನೂ ಓದಿ : Modi Virtual Samvada: ಉಳಿದ 10 ದಿನದಲ್ಲಿ ಕಾರ್ಯಕರ್ತರು ಏನು ಮಾಡಬಹುದು? ಮೋದಿ ಕೊಟ್ಟ ಸಲಹೆ ಏನು?

Exit mobile version