Site icon Vistara News

Karnataka Election 2023: ಏ.30ಕ್ಕೆ ಮೋದಿ ಚನ್ನಪಟ್ಟಣದಲ್ಲಿ ಪ್ರಚಾರ, ಮೈಸೂರು-ಬೆಂಗಳೂರು ಹೆದ್ದಾರಿ ಸಂಚಾರ ಬದಲು

Modi will campaigned in Channapatnam on April 30, Mysore-Bangalore highway traffic diverted

ರಾಮನಗರ, ಕರ್ನಾಟಕ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ. ಏಪ್ರಿಲ್ 30ರಂದು ಅವರು ಚನ್ನಪಟ್ಟಣಕ್ಕೆ ಮೋದಿ ಆಗಮಿಸಲಿರುವುದರಿಂದ ಮೈಸೂರು-ಬೆಂಗಳೂರು ಹೆದ್ದಾರಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ(Karnataka Election 2023).

ಮೋದಿ ಅವರು ಏಪ್ರಿಲ್ 30 ರಂದು ಮೋದಿ ಚನ್ನಪಟ್ಟಣ ಪ್ರವಾಸ ಮಾಡಲಿದ್ದಾರೆ. ಚನ್ನಪಟ್ಟಣ ತಾಲ್ಲೂಕಿನ ಶೆಟ್ಟಿಹಳ್ಳಿ ಬಳಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹಾಗಾಗಿ, ಏ.30ರ ಬೆ.11ರಿಂದ ಸಂಜೆ 4 ಗಂಟೆವರೆಗೆ ಚನ್ನಪಟ್ಟಣ- ಮದ್ದೂರು ನಡುವೆ ಹೈವೆ ಬಂದ್ ಆಗಿರಲಿದೆ.

ಬೆಂಗಳೂರಿನಿಂದ ಮೈಸೂರಿಗೆ ಹೊರಡುವ ವಾಹನಗಳು ಬಿಡದಿ- ಹಾರೋಹಳ್ಳಿ- ಕನಕಪುರ-ಮಳವಳ್ಳಿ ಮಾರ್ಗವಾಗಿ ಮೈಸೂರು ಪ್ರಯಾಣ ಮಾಡಬಹುದು. ಮೈಸೂರಿನಿಂದ ಬೆಂಗಳೂರಿಗೆ ಹೋಗುವ ವಾಹನಗಳು ಮದ್ದೂರು- ಕುಣಿಗಲ್-ನೆಲಮಂಗಲ ಮಾರ್ಗವಾಗಿ ಬೆಂಗಳೂರಿಗೆ ತಲುಪಬಹುದು. ಮೈಸೂರಿನಿಂದ ಬೆಂಗಳೂರಿಗೆ ಮತ್ತೊಂದು ಮಾರ್ಗವಿದ್ದು, ಮಳವಳ್ಳಿ, ಕನಕಪುರ, ಹಾರೋಹಳ್ಳಿ ಮಾರ್ಗವಾಗಿ ಬೆಂಗಳೂರು ತಲುಪಬಹುದು.

ಇದನ್ನೂ ಓದಿ: Karnataka Election : ಹೀಗೆ ಮಾತನಾಡಿಯೇ ಕಾಂಗ್ರೆಸ್‌ಗೆ ಈ ಗತಿ ಬಂದಿದ್ದು; ಮೋದಿ ಹಾವು ಹೇಳಿಕೆಗೆ ಬೊಮ್ಮಾಯಿ ಆಕ್ರೋಶ

ಮೋದಿ ಪ್ರವಾಸದ ಹಿನ್ನೆಲೆಯಲ್ಲಿ ಮಾರ್ಗ ಬದಲಾವಣೆ ಮಾಡಿ ರಾಮನಗರ ಹಾಗೂ ಮಂಡ್ಯ ಜಿಲ್ಲಾಡಳಿತ ಆದೇಶ ಹೊರಡಿಸಿವೆ. ಭಾನುವಾರ ವಾಹನ ದಟ್ಟಣೆ ಹೆಚ್ಚಳ ಹಿನ್ನಲೆ ಟ್ರಾಫಿಕ್ ಜಾಂ ಉಂಟಾಗುವ ಸಾಧ್ಯತೆ ಇದೆ.

Exit mobile version