Site icon Vistara News

BJP Karnataka: ವಿಕಸಿತ ಭಾರತಕ್ಕಾಗಿ ಮೋದೀಜಿ ಶ್ರಮ: ಜೆ.ಪಿ.ನಡ್ಡಾ

Modiji's hard work for an Viksit Bharat says JP Nadda

ಬೆಳಗಾವಿ: ಭಾರತವನ್ನು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ವಿಕಸಿತ ಭಾರತವಾಗಿ ನೋಡುವ ನಿಟ್ಟಿನಲ್ಲಿ ನರೇಂದ್ರ ಮೋದೀಜಿ ಅವರು ಸಂಕಲ್ಪ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಅಭಿಪ್ರಾಯಪಟ್ಟರು.

ನಗರದಲ್ಲಿ ಬಿಜೆಪಿ ವತಿಯಿಂದ (BJP Karnataka) ಮಂಗಳವಾರ ಏರ್ಪಡಿಸಿದ್ದ ಪ್ರಬುದ್ಧರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಲಕ್ಷಾಂತರ ಹಳ್ಳಿಗಳಲ್ಲಿ ನೀರು, ವಿದ್ಯುತ್ ಮತ್ತು ಮನೆ ವ್ಯವಸ್ಥೆಯನ್ನು ನರೇಂದ್ರ ಮೋದೀಜಿ ಅವರು ಮಾಡಿಕೊಟ್ಟಿದ್ದಾರೆ. ಹಿಂದೆ ಈ ಮೂಲಸೌಕರ್ಯಗಳು ಕೇವಲ ಕನಸಾಗಿದ್ದವು, ಈಗ ಅಗತ್ಯ ಮೂಲಸೌಕರ್ಯ ಸಿಗುತ್ತಿದೆ ಎಂದು ಹೇಳಿದರು.

2014ರಲ್ಲಿ ಬಿಜೆಪಿ ದೇಶದ ಅಧಿಕಾರ ವಹಿಸಿಕೊಂಡಾಗ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ಇರಲಿಲ್ಲ. ಕೇವಲ ಒಂದು ಸಾವಿರ ದಿನಗಳಲ್ಲಿ ಈ ಸೌಕರ್ಯ ನೀಡುವುದಾಗಿ ತಿಳಿಸಿದ ಪ್ರಧಾನಿ ಮೋದಿಯವರು, ಅದನ್ನು ಸಕಾಲದಲ್ಲಿ ಈಡೇರಿಸಿದರು. ಇದರಿಂದ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸೌಲಭ್ಯ ಸಿಕ್ಕಿದೆ ಎಂದರು.

ಇದನ್ನೂ ಓದಿ | Guarantee Survey : ಗ್ಯಾರಂಟಿ ಸಮೀಕ್ಷೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಬಳಕೆ; ಎಸಿ ಗಿರಾಕಿಗಳೆಲ್ಲಿ ಎಂದ HDK

ಜಲ್ ಜೀವನ್ ಮೀಷನ್ ಯೋಜನೆಯಡಿ 11 ಕೋಟಿ ನಲ್ಲಿ ನೀರಿನ ಸಂಪರ್ಕ ಕೊಡಲಾಗಿದೆ. ಈ ಹಿಂದೆ ಮಹಿಳೆಯರು ಕಿಲೋಮೀಟರ್‌ಗಟ್ಟಲೇ ನಡೆದು ಹೋಗಿ ನೀರು ತರಬೇಕಿತ್ತು. ಶೌಚಕ್ಕಾಗಿ ಮಹಿಳೆಯರು ಸೂರ್ಯೋದಯಕ್ಕೆ ಮೊದಲು ಅಥವಾ ಸೂರ್ಯಾಸ್ತದ ಬಳಿಕ ಅರಣ್ಯ ಮತ್ತಿತರ ಕಡೆ ಹೋಗಬೇಕಿತ್ತು. ಹೀಗಾಗಿ ಮಹಿಳೆಯರಿಗೆ ಘನತೆ ಹೆಚ್ಚಿಸುವ ಉದ್ದೇಶದಿಂದ 12 ಕೋಟಿ ಶೌಚಾಲಯಗಳನ್ನು ಮೋದಿ ಸರ್ಕಾರ ನಿರ್ಮಿಸಿ ಕೊಟ್ಟಿದೆ ಎಂದು ತಿಳಿಸಿದರು.

ಮಹಿಳೆಯರು ಈ ಹಿಂದೆ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಬೇಕಿತ್ತು. ಅದು ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿತ್ತು. ಆ ಸಮಸ್ಯೆಯನ್ನು ನಿವಾರಿಸಲಾಗಿದೆ. ಮೊಬೈಲ್ ಉತ್ಪಾದನೆ, ಸ್ಟಾರ್ಟಪ್, ಔಷಧ ರಫ್ತು, ರಕ್ಷಣಾ ಕ್ಷೇತ್ರದಲ್ಲಿನ ಉತ್ಪನ್ನಗಳ ರಫ್ತು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತದ ಅದ್ವಿತೀಯ ಸಾಧನೆ ಮಾಡಿದೆ ಎಂದು ವಿವರಿಸಿದರು.

ಇದನ್ನೂ ಓದಿ | HD Devegowda: 692 ರೈತರ ಆತ್ಮಹತ್ಯೆಯೇ ಸಿದ್ದರಾಮಯ್ಯ ಸಾಧನೆಯ ಕಿರುನೋಟ: ಎಚ್‌.ಡಿ. ದೇವೇಗೌಡ ವ್ಯಂಗ್ಯ

ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ನಾಡಿನ ಜನತೆ ಮತ್ತು ದೇಶದ ಜನತೆ ಬಿಜೆಪಿಯನ್ನು ಬೆಂಬಲಿಸುವುದು ಖಚಿತ. ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ ಬಿಜೆಪಿಯು ನರೇಂದ್ರ ಮೋದೀಜಿ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಏರುವುದು ಅಷ್ಟೇ ಸತ್ಯ ಎಂದು ನುಡಿದರು.

ಪಕ್ಷದ ಮುಖಂಡರು, ಪಕ್ಷದ ಶಾಸಕರು ಹಾಗೂ ಪ್ರಮುಖರು, ವಿವಿಧ ಕ್ಷೇತ್ರಗಳ ಆಹ್ವಾನಿತರು ಉಪಸ್ಥಿತರಿದ್ದರು.

Exit mobile version