ಬೆಂಗಳೂರು: ಕರ್ನಾಟಕದಲ್ಲೇ ಕಾಕಂಬಿ ( Molasses) ಕೊರತೆ ಇದ್ದರೂ ಗೋವಾ ಬಂದರಿನ ಮೂಲಕ ರಫ್ತು ಮಾಡುವ ಮೂಲಕ ಭ್ರಷ್ಟಾಚಾರ ಹಾಗೂ ಬೊಕ್ಕಸಕ್ಕೆ ತೆರಿಗೆ ನಷ್ಟ ಉಂಟು ಮಾಡಲಾಗಿದೆ ಎಂದು ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಅಬಕಾರಿಯಲ್ಲಿ ಕಾಕಂಬಿ ಅಂತ ಬರುತ್ತದೆ. ಇದರಲ್ಲೂ ಇವರು ಹಗರಣ ಮಾಡಿದ್ದಾರೆ. ಮೊಲಾಸಿಸ್ ನಲ್ಲೂ ಹಣ ಹೊಡೆದಿದ್ದಾರೆ. ಕೆ.ಎನ್.ರಿಸೋರ್ಸ್ ಪ್ರೈ.ಲಿಮಿಟೆಡ್ ಇದೆ. 2 ಲಕ್ಷ ಮೆಟ್ರಿಕ್ ಟನ್ ಕಾಕಂಬಿ ಎಕ್ಸ್ ಪೋರ್ಟ್‌ಗೆ ಅನುಮತಿ ನೀಡಲಾಗಿದೆ.
ಕಂಪನಿ ಸರ್ಕಾರಕ್ಕೆ ಅನುಮತಿ ಕೇಳುತ್ತದೆ, ಈ ಕಂಪನಿಯ ಬಳಿ ಯಾವುದೇ ದಾಖಲೆಗಳಿಲ್ಲ. ಆದರೂ ಈ ಕಂಪನಿಗೆ ಸರ್ಕಾರ ಅನುಮತಿ ನೀಡಿದೆ. ಜಿರೋ ಡಾಕ್ಯುಮೆಂಟ್ ಗೆ ಎಲ್ಲಾ ಲೈಸೆನ್ಸ್ ಕೊಟ್ಟಿದೆ. 3,500 ಕೋಟಿಯ ಲೈಸೆನ್ಸ್ ಕೊಡಲಾಗುತ್ತಿದೆ. ಕಾಕಂಬಿ ನಮಗೇ ಸಾಕಾಗ್ತಿಲ್ಲ ಅಂತ ಪ್ರತಿಭಟನೆ ನಡೆಯುತ್ತದರೆ ಅತ್ತ ಬೇರೆಡೆಗೆ ರಫ್ತು ಮಾಡುತ್ತಿದ್ದಾರೆ.
ಸರ್ಕಾರ ರಫ್ತು ಮಾಡೋಕೆ ಅವಕಾಶ ಕೊಡ್ತಿದೆ. ಪ್ರತಿಭಟನೆಗೆ ಸರ್ಕಾರ ಕಿಮ್ಮತ್ತು ಕೊಡ್ತಿಲ್ಲ. ಈ ಕೆ.ಎನ್.ರಿಸೋರ್ಸ್ ಜಿಎಸ್ ಟಿ ಕಟ್ಟಿಲ್ಲ. ಕಳೆದ ಮೂರು ವರ್ಷದಿಂದ ಜಿಎಸ್ ಟಿ ಕಟ್ಟಿಲ್ಲ. ಯಾವುದೇ ದಾಖಲೆ ಇಲ್ಲದೆ ಅನುಮತಿ ಕೊಟ್ಟಿದ್ದೇಕೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದರು.
ಒಂದು ಟನ್ ಗೆ 10 ಸಾವಿರ ರೂಪಾಯಿ ದರ ನಿಗದಿ ಮಾಡಲಾಗಿದೆ. 2 ಲಕ್ಷ ಮೆಟ್ರಿಕ್ ಟನ್ ಗೆ ಎಷ್ಟು ಹಣ ಆಗಲಿದೆ? ಇವರು ಗೋವಾದಿಂದ ರಫ್ತು ಮಾಡೋಕೆ ಹೊರಟಿದ್ದಾರೆ. ಯಾಕೆ ನಮ್ಮಲ್ಲಿ ಕಾರವಾರ ಬಂದರು ಇಲ್ವೇ? ಇಲ್ಲಿಂದಲೇ ಸಾಗಿಸಲು ಅವಕಾಶ ನೀಡಬಹುದಿತ್ತು. ಇದರಿಂದ ಸರ್ಕಾರಕ್ಕೂ 16% ಟ್ಯಾಕ್ಸ್ ಬರುತ್ತಿತ್ತು. ಈ ಕಾಕಂಬಿ ನಮ್ಮ ಡಿಸ್ಟಿಲರಿಗೆ ಕೊಟ್ಟಿದ್ದರೆ 66 ಕೋಟಿ ರೂ. ತೆರಿಗೆ ಬರ್ತಿತ್ತು. ಸ್ಥಳೀಯ ಡಿಸ್ಟಿಲರಿಗಳಿಗೆ ಕೊಟ್ಟಿದ್ದರೆ ಆದಾಯ ಬರುತ್ತಿತ್ತಾದರೂ ಆ ರೀತಿ ಮಾಡಿಲ್ಲ. ಕೆ.ಎನ್.ರಿಸೋರ್ಸ್ ಗೆ ಕೊಡಲು ಇಬ್ಬರು ಸಂಸದರಿದ್ದಾರೆ. ಕೇಂದ್ರ ಹಣಕಾಸು ಸಚಿವರು ಇದರಲ್ಲಿದ್ದಾರಂತೆ. ಸ್ವತಃ ಸಿಎಂ ಅಬಕಾರಿ ಸಚಿವ, ಆಯುಕ್ತರ ಜತೆ ಮಾತನಾಡಿದ್ದಾರೆ. ಕೆ.ಎನ್.ರಿಸೋರ್ಸ್ ಗೆ ಕೊಡಿಸಲು ಮಾತನಾಡಿದ್ದಾರೆ.
ಇದನ್ನೂ ಓದಿ: ಮುಂಬೈ ಕಂಪನಿಗೆ ಕಾಕಂಬಿ ರಫ್ತು ಅವಕಾಶ: ಅಬಕಾರಿ ಸಚಿವ ಕೆ. ಗೋಪಾಲಯ್ಯ ವಿರುದ್ಧ ಲಂಚ ಆರೋಪ
ಈ ಬಗ್ಗೆ ಶಿವರಾಜ್, ಸುರೇಶ್ ಎಂಬುವರು ಮಾತನಾಡಿದ್ದಾರೆ. ಇದರ ಬಗ್ಗೆ ಆಡಿಯೋ ಬಿಡುಗಡೆ ಮಾಡಲಾಗಿದೆ. ಲೋಕಾಯುಕ್ತಕ್ಕೂ ದೂರು ನೀಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.