Site icon Vistara News

Molestation Case : ಗೆಳೆಯರ ಜತೆ ಸೇರಿ ಪತ್ನಿಗೇ ಲೈಂಗಿಕ ಕಿರುಕುಳ ಕೊಟ್ಟ ಸೈಕೋ ಗಂಡ! ವಿಡಿಯೊ ಮಾಡಿ ವಿಕೃತಿ

Molestation Case

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲೊಬ್ಬ ಸೈಕೋಪಾಥ್ ಮಾದಕ ವ್ಯಸನಿ ಪತಿ, ಗೆಳೆಯರೊಂದಿಗೆ ಪಾರ್ಟಿ ಮಾಡಿದ್ದು ಮಾತ್ರವಲ್ಲ, ಅವರೊಂದಿಗೆ ಸೇರಿ ಪತ್ನಿಗೆ ಕಿರುಕುಳ ನೀಡಿರುವ (Husband Harassment) ಘಟನೆ ನಡೆದಿದೆ. ಸ್ನೇಹಿತರೊಂದಿಗೆ ಸೇರಿ ಪತ್ನಿಯ ಖಾಸಗಿ ವಿಡಿಯೊವನ್ನು ಚಿತ್ರಿಕರಿಸಿರುವ ಈ ಭೂಪ ಆಕೆಯನ್ನು ಬ್ಲ್ಯಾಕ್‌ಮೇಲ್‌ (Molestation Case) ಮಾಡಿ ವಿಕೃತಿ ಮೆರೆದಿದ್ದಾನೆ.

ಆಂಧ್ರ ಪ್ರದೇಶದ ಕಾಕಿನಾಡ ಮೂಲದ ಅಖಿಲೇಷ್ ಧರ್ಮರಾಜ್ ಎಂಬಾತ ಮ್ಯಾಟ್ರಿಮೋನಿ ಮೂಲಕ 2019ರಲ್ಲಿ ಬೆಂಗಳೂರಿನ ವಸಂತಪುರದ ಟೆಕ್ಕಿಯೊಬ್ಬರನ್ನು ವಿವಾಹವಾಗಿದ್ದ. ವಿವಾಹದ ಬಳಿಕ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ದಂಪತಿ ವಾಸವಿದ್ದರು.

ಮೊದಮೊದಲು ಸಭ್ಯನಂತೆ ವರ್ತಿಸಿದ್ದ ಅಖಿಲೇಶ್‌ ನಂತರ ತನ್ನ ವಿಕೃತಿ ತೋರಿಸಲು ಶುರು ಮಾಡಿದ್ದ. ಮಾದಕ ಮತ್ತು ಮದ್ಯ ವ್ಯಸನಿಯಾಗಿದ್ದ ಅಖಿಲೇಶ್ ಮನೆಗೆ ಗಾಂಜಾ ತಂದು ಸೇವನೆ ಮಾಡುತ್ತಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಮಾತ್ರವಲ್ಲದೆ ಮನೆಗೆ ತನ್ನ ಗೆಳೆಯರನ್ನು ಕರೆದು ಗಾಂಜಾ ಪಾರ್ಟಿ ಮಾಡುತ್ತಿದ್ದ.‌ ಬಳಿಕ ಆತನ ಸ್ನೇಹಿತರು ಕೂಡಾ ನನ್ನ ಮೇಲೆ ಎರಗಿ ಲೈಂಗಿಕ ಕಿರುಕುಳವನ್ನು ನೀಡಿದ್ದಾರೆ ಎಂದು ನೊಂದ ಟೆಕ್ಕಿ ಆರೋಪಿಸಿದ್ದಾಳೆ.

ಇವರ ಲೈಂಗಿಕ ಕಿರುಕುಳಕ್ಕೆ ಬೇಸತ್ತು ನೊಂದ ಗೃಹಿಣಿ ತವರು ಮನೆಗೆ ಸೇರಿದ್ದಾಳೆ. ಆದರೆ ಅಲ್ಲಿಗೂ ಬಂದ ಗಾಂಜಾ ಸ್ನೇಹಿತರು ವಾಪಸ್ಸು ಮನೆಗೆ ಬರುವಂತೆ ಕಿರುಕುಳ ನೀಡಿದ್ದಾರೆ. ಮನೆಯಲ್ಲಿ ನಡೆದ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ನೊಂದ ಮಹಿಳೆ ದೂರು ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬೆಡ್‌ ರೂಮ್‌, ಬಾತ್‌ ರೂಮ್‌ನಲ್ಲಿ ಕ್ಯಾಮೆರಾ ಅಳವಡಿಕೆ

ಗಾಂಜಾ ವ್ಯಸನಿ ಪತಿಯು ಬೆಡ್‌ ರೂಮ್‌ ಹಾಗೂ ಬಾತ್‌ ರೂಮಿನಲ್ಲಿ ಕ್ಯಾಮೆರಾ ಅಳವಡಿಸಿದ್ದಾನೆ. ಇದನ್ನು ತಿಳಿದು ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಇತ್ತ ಪತ್ನಿಗೆ ತಿಳಿಯದಂತೆ ಸ್ನಾನ ಮಾಡುವಾಗ, ಬೆಡ್‌ ರೂಮ್‌ನಲ್ಲಿ ಬಟ್ಟೆ ಬದಲಾಯಿಸುವಾಗ ವಿಡಿಯೊ ಮಾಡಿಕೊಂಡಿದ್ದಾನೆ. ಘಟನೆ ಬಗ್ಗೆ ಬಾಯಿಬಿಟ್ಟರೆ ಈ ವಿಡಿಯೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಸದ್ಯ ಇವರ ಕಾಟದಿಂದ ಬೇಸತ್ತ ಟೆಕ್ಕಿ ಸುಬ್ರಮಣ್ಯಪುರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

ಇದನ್ನೂ ಓದಿ: Family Suicide: ಪತ್ನಿ, ಮಗನನ್ನು ನದಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ

ಪತಿ ಅಖಿಲೇಶ್‌, ಈತನ ಸಹೋದರ ಅಭಿಲಾಷ್‌ ಸೇರಿ ಸ್ನೇಹಿತರಾದ ಅನೀಶ್‌, ಶ್ರೀನಿವಾಸ್‌, ನಂದಾ, ಅಂಬಾಟಿ ಹಾಗೂ ಆದಿಶೇಷ್‌ ಎಂಬುವವರು ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ಈ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಇತ್ತ ಕೇಸ್ ವಾಪಸ್‌ ಪಡೆಯಲು ಪೊಲೀಸರು ಒತ್ತಡ ಹಾಕುತ್ತಿದ್ದಾರೆ ಎಂದು ಟೆಕ್ಕಿ ಆರೋಪಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version