Site icon Vistara News

Molestation Case: ಮದುವೆಯಾಗುವೆ ಚಿನ್ನ ಎಂದವನು ಮಾಡಿದ್ದೇ ಬೇರೆ! ಮುಂದೆ ಆಗಿದ್ದೇನು?

Man arrested

ಬೆಂಗಳೂರು: ಕಾಮುಕನೊಬ್ಬ ಮದುವೆ ಆಗುವುದಾಗಿ ಯುವತಿಯೊಬ್ಬಳನ್ನು ನಂಬಿಸಿ ವಂಚಿಸಿರುವ (Molestation Case) ಘಟನೆ ಬೆಂಗಳೂರಲ್ಲಿ ನಡೆದಿದೆ. ವೇಣುಮುರುಗೇಶಪ್ಪ ಎಂಬಾತನನ್ನು ಬಂಧಿಸಿ, ಪರಪ್ಪನ ಅಗ್ರಹಾರಕ್ಕೆ ಅಟ್ಟಿದ್ದಾರೆ.

ವೇಣುಮುರುಗೇಶಪ್ಪ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್‌ ಆಗಿದ್ದು, ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಹಿಂದೆ ಬಿದ್ದಿದ್ದ. ಪದೇ ಪದೆ ಮೆಸೇಜ್‌, ಕಾಲ್‌ ಮಾಡುವುದು ಮಾಡುತ್ತಾ ಕಾಡಿಸುತ್ತಿದ್ದ. ಈ ಮಧ್ಯೆ ಯುವತಿಯನ್ನು ಭೇಟಿ ಮಾಡಿ ಪ್ರೇಮ ನಿವೇದನೆಯನ್ನೂ ಮಾಡಿದ್ದ.

ಇದಾದ ಬಳಿಕ ಯುವತಿ, ಈತನಿಂದ ಅಂತರವನ್ನು ಕಾಯ್ದುಕೊಂಡಿದ್ದಳು. ಈ ಮಧ್ಯೆ ಕೋವಿಡ್‌ ಕಾರಣದಿಂದಾಗಿ ಕೆಲಸ ಕಳೆದುಕೊಂಡು ತನ್ನ ಊರಿಗೆ ವಾಪಸ್‌ ಆಗಿದ್ದಳು. ಒಂದು ವರ್ಷದ ನಂತರ ಮತ್ತೆ ಬೆಂಗಳೂರಿಗೆ ಬಂದವಳೇ ಬೇರೊಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು.

ಬಂಧಿತ ಆರೋಪಿ ವೇಣುಮುರಗೇಶಪ್ಪ

ಈ ವಿಷಯ ತಿಳಿಯುತ್ತಿದ್ದಂತೆ ಸೈಲೆಂಟ್‌ ಆಗಿದ್ದ ವೇಣುಮುರಗೇಶಪ್ಪ, ಮತ್ತೆ ಯುವತಿಯನ್ನು ಸಂಪರ್ಕಿಸಿ, ಭೇಟಿಗೆ ಯತ್ನಿಸಿದ್ದ. ಸತತವಾಗಿ ಯುವತಿಗೆ ಕರೆ ಮಾಡುತ್ತಾ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ. ಯುವತಿ ಮೊದಮೊದಲು ವೇಣುವಿನ ಪ್ರೀತಿಯನ್ನು ನಿರಾಕರಿಸಿದ್ದಳು. ಆದರೆ, ಪ್ರೀತಿ ಪ್ರೇಮ ಎಂದು ಯುವತಿಯ ತಲೆಕೆಡಿಸಿ ಮೂರು ವರ್ಷಗಳ ಕಾಲ ಪ್ರೀತಿಯಾಟ ಆಡಿದ್ದ.

ಮದುವೆ ನೆಪದಲ್ಲಿ ಯುವತಿಯೊಂದಿಗೆ ದೈಹಿಕ ಸಂಪರ್ಕ

ಯುವತಿ ಪ್ರೀತಿಗೆ ಓಕೆ ಎನ್ನುತ್ತಿದ್ದಂತೆ ವೇಣು ಅಸಲಿ ಆಟ ಶುರು ಮಾಡಿದ್ದ. ನನಗೆ ನಿನ್ನ ಜತೆಗೆ ಜೀವನ ಪರ್ಯಂತ ಬದುಕುವುದೇ ಆನಂದ, ನಿನ್ನೊಟ್ಟಿಗೆ ಏನೋ ಮುಖ್ಯವಾದದ್ದನ್ನು ಮಾತನಾಡುವುದು ಇದೆ ಎಂದಿದ್ದ. ಈಗಲೇ ನಿನ್ನ ಭೇಟಿ ಆಗಬೇಕು, ಮನೆಗೆ ಬರುತ್ತೇನೆ ಎಂದು ಹೇಳಿ ಬಂದಿದ್ದ.

ಈ ಮಧ್ಯೆ ಹೇಗೂ ಮುಂದೆ ಮದುವೆ ಆಗುತ್ತೇವೆ ಬಾ ಲೈಫ್‌ ಅನ್ನು ಎಂಜಾಯ್ ಮಾಡಬೇಕೆಂದು, ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಹೀಗೆ ಮೂರು ತಿಂಗಳಲ್ಲಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇದಾದ ಬಳಿಕ ಇತ್ತೀಚೆಗೆ ಮದುವೆಗೆ ಮನೆಯಲ್ಲಿ ಒಪ್ಪುತ್ತಿಲ್ಲ ಎಂದು ಕಿರಿಕ್‌ ತೆಗೆದಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಇದನ್ನೂ ಓದಿ: ಒಂಟಿಯಾಗಿದ್ದ ವೃದ್ಧೆಯ ಭೀಕರ ಹತ್ಯೆ; ಗಂಡ ಕಟ್ಟಿದ ಮನೆಯೆಂದು ಮಗನ ಜತೆಗೂ ಹೋಗಿರಲಿಲ್ಲ

ನೀನು ಕೆಳ ಜಾತಿಯವಳು, ನಮ್ಮಿಬ್ಬರ ಮದುವೆಗೆ ಮನೆಯಲ್ಲಿ ಪೋಷಕರು ಒಪ್ಪುತ್ತಿಲ್ಲ ಎಂದು ಹೇಳಿ ವಂಚನೆ ಮಾಡಿದ್ದಾನೆ ಎಂದು ಯುವತಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾಳೆ. ದೂರು ದಾಖಲಾದ ಬೆನ್ನಲ್ಲೇ ವೇಣುಮುರುಗೇಶಪ್ಪನನ್ನು ಪೊಲೀಸರು ಬಂಧಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version