Site icon Vistara News

Molestation Case : ಕುಣಿಗಲ್‌ನಲ್ಲಿ ಸಹ ಶಿಕ್ಷಕಿಗೆ ಲೈಂಗಿಕ ಕಿರುಕುಳ; ಶಿಕ್ಷಕ ಅಮಾನತು

Molestation Case Sexual harassment of fellow teacher in Kunigal Teacher suspended

ತುಮಕೂರು: ಸಹ ಶಿಕ್ಷಕಿಗೆ ಲೈಂಗಿಕ ಕಿರುಕುಳ (Molestation Case) ಕೊಡುತ್ತಿದ್ದ ಶಿಕ್ಷಕನೊಬ್ಬನನ್ನು ಅಮಾನತು ಮಾಡಿ ಕ್ರಮ ವಹಿಸಲಾಗಿದೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೊಳಲುಗುಂದ‌ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಗೋಪಾಲ್ ಅಮಾನತು ಶಿಕ್ಷೆಗೆ ಒಳಗಾಗಿರುವುದು. ಈತ ಸಹ ಶಿಕ್ಷಕಿಗೆ ಪದೇ ಪದೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ದೂರು ನೀಡಲಾಗಿತ್ತು.

ಶಿಕ್ಷಕ ಗೋಪಾಲ್

ಶಾಲೆಯಲ್ಲಿ ಪಾಠ ಮಾಡಲು ಆಗದ ಪರಿಸ್ಥಿತಿ ಇದೆ. ನಾನು ಎಷ್ಟೇ ವಿರೋಧ ಮಾಡಿದರೂ ಈ ಶಿಕ್ಷಕ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗುತ್ತಿದ್ದ. ಈ ಸಂಬಂಧ ಎಚ್ಚರಿಕೆ ಕೊಟ್ಟರೂ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಮೇಲೆ ಕ್ರಮ ಕೈಗೊಂಡು ನ್ಯಾಯ ಒದಗಿಸಿ ಕೊಡಬೇಕೆಂದು ಶಿಕ್ಷಕನ ಲೈಂಗಿಕ ಕಿರುಕುಳದ ಬಗ್ಗೆ ಡಿಡಿಪಿಐಗೆ ಶಿಕ್ಷಕಿ ದೂರು ನೀಡಿದ್ದರು.

ಇದನ್ನೂ ಓದಿ: Weather Report: ರಾಜ್ಯಕ್ಕಿಲ್ಲ ಮುಂಗಾರು ಮೋಡಿ; ಮಳೆ ನೋಡಿ ನಾಟಿ ಮಾಡಿ

ಶಿಕ್ಷಕಿಯ ದೂರು ಆಧರಿಸಿ ತನಿಖೆ ಕೈಗೊಂಡ ಡಿಡಿಪಿಐ ನಂಜಯ್ಯ ಅವರು ಶಿಕ್ಷಕ ಗೋಪಾಲ್‌ನನ್ನು ಅಮಾನತು ಮಾಡಿ ಆದೇಶವನ್ನು ಹೊರಡಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ ವಿರುದ್ಧ ಅವಹೇಳನಕಾರಿ ಕಮೆಂಟ್; ಮುಖ್ಯ ಪೇದೆ ಅಮಾನತು

ಮೈಸೂರು: ಸಂಸದ ಪ್ರತಾಪ್ ಸಿಂಹ (Pratap Simha) ವಿರುದ್ಧ ಅವಹೇಳನಕಾರಿಯಾಗಿ ಸೋಷಿಯಲ್‌ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದ ಹಿನ್ನೆಲೆಯಲ್ಲಿ ಮುಖ್ಯ ಪೇದೆಯನ್ನು ಅಮಾನತು ಮಾಡಿ ಕ್ರಮ ಕೈಗೊಳ್ಳಲಾಗಿದೆ.

ವಿ.ವಿ. ಪುರಂ ಟ್ರಾಫಿಕ್ ಪೊಲೀಸ್ ಠಾಣೆ ಮುಖ್ಯ ಪೇದೆ ಬಿ. ಪ್ರಕಾಶ್‌ ಅಮಾನತಾಗಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರು ‌ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‌ ಬಗ್ಗೆ ಮಾಡಿದ್ದ ಟೀಕೆಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಲಾಗಿತ್ತು. ಈ ಪೋಸ್ಟ್‌ಗೆ ಪ್ರಕಾಶ್‌ ಕಮೆಂಟ್‌ ಮಾಡಿದ್ದು, “ಪ್ರದೀಪ್‌ ಸರ್‌, ಹೆಂಡತಿಯನ್ನು ತಂಗಿ ಅಂತ ಹೇಳಿಕೊಂಡು ಎರಡೆರಡು ಮೂಡಾ ಸೈಟ್‌ ತಗೆದುಕೊಂಡು ರಾಜ್ಯ ಸರ್ಕಾರಕ್ಕೆ ದ್ರೋಹ ಮಾಡಿದ ಅಯೋಗ್ಯ ಅವನು” ಎಂದು ಟೀಕಿಸಿದ್ದರು.

ಇದರ ಸ್ಕ್ರೀನ್ ಶಾಟ್ ಸೇರಿಸಿ ಪೇದೆ ವಿರುದ್ಧ ಪೊಲೀಸ್ ಕಮಿಷನರ್‌ಗೆ ಸಂಸದ ಪ್ರತಾಪ್‌ ಸಿಂಹ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತು ಮಾಡಿ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: PAN- Aadhaar deadline expired : ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾಗಿದ್ದರೆ ಏನು ಮಾಡಬೇಕು?

ಪ್ರತಾಪ್‌ ಸಿಂಹ ಪತ್ರದಲ್ಲೇನಿತ್ತು?

ಸಾಮಾಜಿಕ ಜಾಲತಾಣದಲ್ಲಿ ನಿಂದಿಸುವ ಮೂಲಕ ಅವಹೇಳನ ಮಾಡುತ್ತಿರುವ ಪ್ರಕಾಶ ವಿ. ಎಚ್‌ಸಿ-478, ವಿವಿ ಮರು ಸಂಚಾರ ಪೊಲೀಸ್ ಠಾಣೆ, ಮೈಸೂರು ಇವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮೈಸೂರು-ಕೊಡಗು ಲೋಕಸಭಾ ಸಂಸದನಾದ ನನ್ನ ವಿರುದ್ಧ ಇಲ್ಲದ ಸಲ್ಲದ ಆರೋಪಗಳನ್ನು ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಅಪ ಪ್ರಚಾರ ಮಾಡುತ್ತಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ (ಫೇಸ್‌ಬುಕ್) ನಿಂದಿಸುವ ಮೂಲಕ ಅವಹೇಳನಕಾರಿಯಾಗಿ ಪೋಸ್ಟ್‌ಗಳನ್ನು ಮಾಡುತ್ತಿರುವ ಇವನನ್ನು ಕಾನೂನು ಪ್ರಕಾರವಾಗಿ ವಿಚಾರಣೆ ನಡೆಸಿ, ಶಿಸ್ತು ಕ್ರಮ ಜರುಗಿಸಬೇಕೆಂದು ಕೋರಲಾಗಿದೆ.

Exit mobile version