Site icon Vistara News

Molestation Case : ನೀನು ನನಗೆ ಬೇಕೆಬೇಕು ಎಂದು ಮಂಚಕ್ಕೆ ಕರೆದ ಆಡಳಿತಾಧಿಕಾರಿ!

molestation Case in bengaluru

ಬೆಂಗಳೂರು: `ನೀನು ನನಗೆ ಬೇಕೆಬೇಕು, ಲೈಂಗಿಕ ಕ್ರಿಯೆಗೆ ಸಹಕರಿಸು’ (Molestation Case) ಎಂದು ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಗೆ, ಅಭಿಯೋಜನಾ ಇಲಾಖೆಯ ಆಡಳಿತಾಧಿಕಾರಿಯೊಬ್ಬ ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಲೈಂಗಿಕ ಕಿರುಕುಳ ನೀಡುತ್ತಿರುವ ನಾರಾಯಣಸ್ವಾಮಿ ಎಂಬಾತ ಮೇಲೆ ಸಂತ್ರಸ್ತ ಮಹಿಳೆ ಠಾಣೆ ಮೆಟ್ಟಿಲೇರಿದ್ದಾರೆ.

ದಾವಣಗೆರೆ ಸರ್ಕಾರಿ ಅಭಿಯೋಜಕರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆ (45) ಇತ್ತೀಚೆಗೆ ಬೆಂಗಳೂರಿಗೆ ವರ್ಗಾವಣೆ ಆಗಿದ್ದರು. ಈ ನಡುವೆ ನಾರಾಯಣಸ್ವಾಮಿ ಮಹಿಳೆಯ ಹಿಂದೆ ಬಿದ್ದಿದ್ದ. ಕಳೆದ ಜನವರಿ 4 ರಿಂದ ನಾರಾಯಣಸ್ವಾಮಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಮಹಿಳೆಯನ್ನು ಒತ್ತಾಯಿಸುತ್ತಿದ್ದ. ನೀನು ನನಗೆ ಬೇಕೆ ಬೇಕು ಎಂದು ಬಲವಂತವಾಗಿ ಒತ್ತಾಯ ಮಾಡುತ್ತಿದ್ದನಂತೆ ಈ ಕಾಮುಕ. ಇತ್ತೀಚೆಗೆ ಕಳೆದ ಜೂ. 14 ರಂದು ನಟರಾಜ ಎಂಬಾತ ʼನಾರಾಯಣಸ್ವಾಮಿ ಸರ್ ಜತೆ ಜಾಲಿಯಾಗಿ ಇದ್ದುಬಿಡಿ ಎಂದಿದ್ದ. ಇದರಿಂದ ಮನನೊಂದ ಮಹಿಳೆ ಸದ್ಯ ದೂರು ದಾಖಲಿಸಿದ್ದಾರೆ.

ಜೀವ ಬೆದರಿಕೆ ಹಾಕುತ್ತಿರುವ ಕಾಮುಕ

ಈ ನಡುವೆ ಸಂತ್ರಸ್ತೆ ಕಳೆದ ಜೂನ್‌ 17ರಂದು ಅಭಿಯೋಜನಾ ಇಲಾಖೆಯಿಂದ ಮೆಯೋಹಾಲ್ ನ್ಯಾಯಾಲಯಕ್ಕೆ ನಿಯೋಜನೆಗೊಂಡಿದ್ದಾರೆ. ಕಾಮುಕನಿಂದ ತಪ್ಪಿಸಿಕೊಂಡೆ ಎಂದು ನೆಮ್ಮದಿಯಾಗಿದ್ದ ಮಹಿಳೆಗೆ ನಾರಾಯಣಸ್ವಾಮಿ ಬೆದರಿಕೆ ಹಾಕುತ್ತಿದ್ದಾನೆ. ಈ ಇಲಾಖೆಯಲ್ಲಿ ಹೇಗೆ ಕೆಲಸ ಮಾಡುತ್ತಿಯಾ ನೋಡುತ್ತೇನೆಂದು ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.

ಈ ಮೊದಲು ಸಂತ್ರಸ್ತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರು. ಬಳಿಕ ಆಂತರಿಕ ದೂರು ಸಮಿತಿಗೆ ದೂರು ಸಲ್ಲಿಸಿದ್ದರು. ಆದರೆ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆ ಇದೀಗ ಸಂತ್ರಸ್ತ ಮಹಿಳೆ ಠಾಣೆ ಮೆಟ್ಟಿಲೇರಿದ್ದಾರೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಐಪಿಸಿ 354(A) ಹಾಗೂ 506 ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಜೀವ ಬೆದರಿಕೆ ಹಾಕಿರುವ ಅಭಿಯೋಜನಾ ಇಲಾಖೆಯ ಆಡಳಿತಾಧಿಕಾರಿ ನಾರಾಯಸ್ವಾಮಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Fire Accident: ಗ್ಯಾಸ್‌ ಸಿಲಿಂಡರ್‌ ಸೋರಿಕೆ, ನಾಲ್ವರಿಗೆ ಗಾಯ ; ಮೈಸೂರು ಹೈವೆಯಲ್ಲಿ ಹೊತ್ತಿ ಉರಿದ ಕಾರು

ಪರಾರಿಯಾದ ಅಧಿಕಾರಿ

ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಅಭಿಯೋಜನಾ ಇಲಾಖೆ ಅಧಿಕಾರಿ ನಾಪತ್ತೆ ಆಗಿದ್ದಾನೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಸದ್ಯ ಆರೋಪಿ ನಾರಾಯಾಣ ಸ್ವಾಮಿಗಾಗಿ ಹುಡುಕಾಟ ನಡೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version