Site icon Vistara News

ಬಿಜೆಪಿ ಕಾರ್ಯಕ್ರಮಕ್ಕೆ ಹಾಕಿದ್ದ ಬಂಟಿಂಗ್ಸ್‌; ಆಟವಾಡುತ್ತಾ ಆಡುತ್ತಾ ಕುತ್ತಿಗೆ ಬಿಗಿದು ಪ್ರಾಣ ಕಳೆದುಕೊಂಡ ಕೋತಿ

#image_title

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ಆರೂಡಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕ್ರಮಕ್ಕಾಗಿ ಮರಕ್ಕೆ ಕಟ್ಟಿದ್ದ ಬಂಟಿಂಗ್ಸ್‌ ಸಿಲುಕಿ ಕೋತಿಯೊಂದು ಪ್ರಾಣ ಬಿಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ.

ಬಂಟಿಂಗ್ಸ್‌ನಲ್ಲಿ ಆಟವಾಡುವ ವೇಳೆ ಕಟ್ಟಲಾಗಿದ್ದ ಹಗ್ಗವು ಕುತ್ತಿಗೆಗೆ ಸುತ್ತಿಕೊಂಡಿದ್ದು, ಅದು ಬಿಗಿಯಾಗಿದೆ. ಇದರಿಂದ ಬಿಡಿಸಿಕೊಳ್ಳಲು ಆಗದೆ ಒದ್ದಾಡುತ್ತಲೇ ಪ್ರಾಣ ಬಿಟ್ಟಿದೆ.

ಇದನ್ನೂ ಓದಿ: Victoria Hospital: ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಯುವಕ ಸಾವು; ಆಸ್ಪತ್ರೆಯ ಮುಂದೆ ಕುಟುಂಬಸ್ಥರ ಗೋಳಾಟ

ಮರದ ತುದಿಯಲ್ಲಿ ಸಿಲುಕಿ ಕೋತಿಯೊಂದು ಮೃತಪಟ್ಟಿದೆ. ಹೀಗೆ ಬಂಟಿಂಗ್ಸ್‌ಗೆ ಮೂಕ ಪ್ರಾಣಿಗಳು ಬಲಿಯಾಗುತ್ತವೆ. ಪ್ರಾಣಿ-ಪಕ್ಷಿಗಳ ಪ್ರಾಣಕ್ಕೆ ಕುತ್ತು ತರುವಂತಹ ಬಂಟಿಂಗ್ಸ್‌ ಅನ್ನು ಹಾಕದಂತೆ ಪ್ರಾಣಿಪ್ರಿಯರು ಆಗ್ರಹಿಸಿದ್ದಾರೆ.

Exit mobile version