Site icon Vistara News

ಸಮುದ್ರ ಮಟ್ಟದಿಂದ 1700 ಅಡಿ ಎತ್ತರದ ಗಡಾಯಿಕಲ್ಲನ್ನು ಬರಿಗೈಯಲ್ಲಿ ಕೇವಲ 2 ಗಂಟೆಯಲ್ಲಿ ಹತ್ತಿದ ಕೋತಿ ರಾಜು!

Monkey Raju climbs 1700 feet high above sea level with bare hands in just 2 hours

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಪ್ರಸಿದ್ಧ ಗಡಾಯಿಕಲ್ಲನ್ನು ಏರುವ ಮೂಲಕ ಕೋತಿ ರಾಜು (ಜ್ಯೋತಿ ರಾಜು) ಹೊಸ ಸಾಧನೆ ಮಾಡಿದ್ದಾರೆ. ಅದೂ ಎರಡೇ ತಾಸಿನಲ್ಲಿ ಏರಿದ್ದು, ಬರೀ ಕೈಗಳ ಮೂಲಕವೇ ಚಕಚಕನೆ ಹತ್ತಿದ್ದಾರೆ.

ಈ ಗಡಾಯಿಕಲ್ಲು ಸಮುದ್ರ ಮಟ್ಟದಿಂದ 1700 ಅಡಿ ಎತ್ತರದಲ್ಲಿದೆ. ಅವರು ಸುರಕ್ಷತೆಯ ಸಲುವಾಗಿ ಸೊಂಟಕ್ಕೆ ಹಗ್ಗವನ್ನು ಅಳವಡಿಸಿಕೊಂಡಿದ್ದರು. ಹೀಗೆ ಯಾವುದೇ ವಸ್ತುಗಳ ಸಹಾಯವಿಲ್ಲದೆ, ಬೆಟ್ಟವನ್ನು ಮೆಟ್ಟಿಲುಗಳ ಸಹಾಯವಿಲ್ಲದೆ ಏರಿದ ಮೊದಲ ವ್ಯಕ್ತಿ ಎಂಬ ಖ್ಯಾತಿಗೆ ಇವರು ಪಾತ್ರರಾಗಿದ್ದಾರೆ.

Monkey Raju climbs 1700 feet high above sea level with bare hands in just 2 hours

ಚಂದ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಕೋತಿ ರಾಜು, ಬಳಿಕ ಗಡಾಯಿಕಲ್ಲು ಹತ್ತಲು ಆರಂಭಿಸಿದರು. ಕಳೆದರೆಡು ದಿನಗಳ ಹಿಂದೆ ಗಡಾಯಿಕಲ್ಲಿಗೆ ಭೇಟಿ ನೀಡಿದ್ದ ಅವರು ಪರಿಶೀಲನೆ ನಡೆಸಿದ್ದರು. ಅಲ್ಲದೆ, ಅರಣ್ಯ ಇಲಾಖೆ ಸಿಬ್ಬಂದಿ ಇವರಿಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳ ಬಗ್ಗೆ ಸೂಚನೆಯನ್ನು ನೀಡಿದ್ದರು. ಎಷ್ಟೇ ಆದರೂ ಇದು ಅಪಾಯಕಾರಿ ಸಾಹಸ ಆಗಿರುವುದರಿಂದ ಹತ್ತುವ ಸಂದರ್ಭದಲ್ಲಿಯೂ ಕೋತಿ ರಾಜುವಿಗೆ ಅರಣ್ಯ ಇಲಾಖೆ ಅಧಿಕಾರಿಗಳು ರೋಪ್‌ ಕಟ್ಟಿಕೊಂಡು ಯಾವ ರೀತಿ ಏರಬೇಕು ಎಂಬುದನ್ನು ಸೂಚಿಸಿದ್ದರು.

Monkey Raju climbs 1700 feet high above sea level with bare hands in just 2 hours

ಇದನ್ನೂ ಓದಿ: Lithium Discovery : ಜಮ್ಮು ಕಾಶ್ಮೀರದಲ್ಲಿ ಹೇರಳ ಲಿಥಿಯಂ ನಿಕ್ಷೇಪದ ಬಗ್ಗೆ 26 ವರ್ಷ ಹಿಂದೆಯೇ ವರದಿ ಸಲ್ಲಿಸಿದ್ದ ಜಿಎಸ್‌ಐ

ಇದರಂತೆ ಕೋತಿ ರಾಜು ಹಗ್ಗವನ್ನು ಸೊಂಟಕ್ಕೆ ಕಟ್ಟಿಕೊಳ್ಳುವ ಮೂಲಕ ಬೆಟ್ಟ ಹತ್ತಲು ಸಜ್ಜಾದರು. ಆದರೆ, ಅವರು ಎಲ್ಲಿಯೂ ಸಹ ಆ ಹಗ್ಗದ ಆಶ್ರಯವನ್ನು ಪಡೆಯಲಿಲ್ಲ. ಚಕಚಕನೆ ಬೆಟ್ಟವನ್ನು ಹತ್ತಿದ ಅವರು, ಮಧ್ಯೆ ನಾಲ್ಕು ಕಡೆ ಕುಳಿತು ವಿಶ್ರಾಂತಿಯನ್ನು ಪಡೆದುಕೊಂಡರು. ಕಲ್ಲಿನ ಪೊಟರೆ ಇಲ್ಲವೇ ಮರಗಳ ಆಶ್ರಯವನ್ನು ಪಡೆದು ವಿಶ್ರಮಿಸಿಕೊಂಡೆ ಎಂದು ಕೋತಿ ರಾಜು ತಿಳಿಸಿದ್ದಾರೆ.

Monkey Raju climbs 1700 feet high above sea level with bare hands in just 2 hours

ಅರ್ಧ ಗಂಟೆ ವಿಶ್ರಾಂತಿ

ಕೇವಲ ೨ ತಾಸಿನಲ್ಲಿ ಗಡಾಯಿಕಲ್ಲು ಹತ್ತಿದ ನಂತರ ಅಲ್ಲಿ ೨ ತಾಸು ವಿಶ್ರಾಂತಿ ಪಡೆದಿದ್ದಾಗಿ ಹೇಳಿಕೊಂಡಿರುವ ಕೋತಿ ರಾಜು, ಬಳಿಕ ಮೇಲಿಂದ ಮೆಟ್ಟಿಲುಗಳ ಮೂಲಕ ಇಳಿದು ಬಂದರು.

ಬೆಳಗ್ಗೆ 9.50ಕ್ಕೆ ಚಂದ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಕೋತಿ ರಾಜು ಉತ್ತರ ಭಾಗದಿಂದ ಗಡಾಯಿಕಲ್ಲು ಏರಲು ಆರಂಭಿಸಿದ್ದು, 11.50ಕ್ಕೆ ಗಡಾಯಿಕಲ್ಲು ಶಿಖರವನ್ನು ಏರಿದರು. ಅಲ್ಲಿ ಕನ್ನಡ ಬಾವುಟ ಹಾರಿಸುವ ಮೂಲಕ ಸಾಧನೆ ಮೆರೆದರು.

ಇದನ್ನೂ ಓದಿ: Actor Anant Nag: ಹಿರಿಯ ನಟ ಅನಂತನಾಗ್ ಹಾಡಿದ್ದು ಕೇಳಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ

ಜೋಗದಲ್ಲಿ ಬೆಟ್ಟ ಹತ್ತುವಾಗ ಬಿದ್ದು, ಬೆನ್ನು ಮೂಳೆಗೆ ಏಟು ಮಾಡಿಕೊಂಡಿದ್ದ ಕೋತಿರಾಜು, ಸುಮಾರು ಒಂದೂವರೆ ವರ್ಷಗಳ ಕಾಲ ವಿಶ್ರಾಂತಿಯನ್ನು ಪಡೆದುಕೊಂಡಿದ್ದರು. ಇದೀಗ ಮತ್ತೆ ತಮ್ಮ ಸಾಹಸವನ್ನು ಮುಂದುವರಿಸಿದ್ದಾರೆ. ಕ್ಲೈಮ್ಮಿಂಗ್ ಫೌಂಡೇಶನ್ ಸ್ಥಾಪಿಸುವ ಉದ್ದೇಶ ಹೊಂದಿರುವ ಕೋತಿರಾಜು, ಇದಕ್ಕಾಗಿ ನಾಡಿನೆಲ್ಲೆಡೆ ತಿರುಗಿ ಸಾಹಸ ಮಾಡುವ ಗುರಿಯನ್ನು ಹೊಂದಿದ್ದಾರೆ. ಮುಂದಿನ ವಾರ ಮಂಗಳೂರಿನ ಅತಿ ಎತ್ತರದ ಕಟ್ಟಡ ಏರಲು ಪ್ಲ್ಯಾನ್ ರೂಪಿಸಿದ್ದಾರೆ.

Exit mobile version