Site icon Vistara News

Monsoon News: ಮುಂಗಾರು ಚುರುಕು, ರಾಜಧಾನಿ ಕೂಲ್‌ ಕೂಲ್

monsoon rain

ಬೆಂಗಳೂರು: ಬಿಪರ್‌ಜಾಯ್ ಚಂಡಮಾರುತದ ಕಾರಣ ಕೆಲವು ದಿನಗಳಿಂದ ದುರ್ಬಲಗೊಂಡಿದ್ದ ಮುಂಗಾರು ಇದೀಗ (monsoon arrival) ಚುರುಕಾಗಿದೆ. ರಾಜಧಾನಿ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣ ಹಾಗೂ ಮಳೆ ಶುರುವಾಗಿದೆ.

ನಿನ್ನೆಯಿಂದ ರಾಜ್ಯದ ಹೆಚ್ಚಿನ ಕಡೆ ಮುಂಗಾರು ಚುರುಕಾಗಿದೆ. ಈ ಹಿನ್ನಲೆ ರಾಜ್ಯದ ಹಲವು ಭಾಗಗಳಲ್ಲಿ ಈ ವಾರ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಗುಡುಗು ಮಿಂಚಿನ ಸಹಿತ ಉತ್ತಮ ಮಳೆಯಾಗಲಿದೆ.

ಬೆಂಗಳೂರಿನಲ್ಲಿ ಇಂದು ಮುಂಜಾನೆಯಿಂದಲೇ ಮಳೆ ಸುರಿಯುತ್ತಿದ್ದು, ಜನ ಹೊರಗಡೆ ವಾಕಿಂಗ್‌ ಇತ್ಯಾದಿಗಳಿಗೆ ಬರಲು ಹಿಂಜರಿದರು. ಮಲೆನಾಡಿನಂತಾದ ರಾಜಧಾನಿಯಲ್ಲಿ ತುಂತುರು ಮಳೆಯ ನಡುವೆ ಜನ ಓಡಾಡಿದರು. ಇಷ್ಟು ದಿನ ಸೆಕೆ, ಬಿಸಿಲಿನಿಂದ ಕಂಗೆಟ್ಟಿದ್ದ ನಗರವಾಸಿಗಳು ಚುಮುಚುಮು ಚಳಿ ಎಂಜಾಯ್ ಮಾಡಿದರು.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ತುಮಕೂರು, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಹಲವು ಭಾಗಗಳಲ್ಲಿ ಉತ್ತಮ ಮಳೆಯನ್ನು ನಿರೀಕ್ಷಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ ಇನ್ನೆರಡು ದಿನ ಮಳೆ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: Weather Report: ಮಲೆನಾಡಲ್ಲಿ ಭಾರಿ ಮಳೆ ಅಬ್ಬರ; ಕರಾವಳಿಗರೇ ನೀವೂ ಎಚ್ಚರ!

Exit mobile version