Site icon Vistara News

Monsoon Season: ಮಂಗಳೂರು ವಿವಿ ಕಾಲೇಜಲ್ಲಿ ಕೈ ತೊಳೆಯೋಕೂ ನೀರಿಲ್ಲ; ರಜೆ ಕೊಟ್ಟ ಆಡಳಿತ ಮಂಡಳಿ!

mangalore collage leave

ಮಂಗಳೂರು: ರಾಜ್ಯದಲ್ಲಿ ಮುಂಗಾರು (Monsoon Season) ಇನ್ನೂ ವಿಳಂಬ ಆಗುವ ಸೂಚನೆ ಕಂಡುಬಂದಿದೆ. ಆದರೆ, ರಾಜ್ಯದ ಹಲವು ಕಡೆ ಹಿಂಗಾರು ಮಳೆ ಭರ್ಜರಿಯಾಗಿಯೇ ಸುರಿಯುತ್ತಿದೆ. ಅಲ್ಲದೆ, ಈಗ ಬಿಪರ್‌ಜಾಯ್‌ ಚಂಡಮಾರುತದಿಂದಾಗಿ (Cyclone Biparjoy) ಇನ್ನೂ ಮೂರು ದಿನ (ಜೂನ್‌ 7, 8, 9) ರಾಜ್ಯದ ಹಲವು ಕಡೆ ಮಳೆಯಾಗಲಿದೆ. ಇನ್ನು ಈ ಬಾರಿ ಕರಾವಳಿ ಭಾಗವಾದ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಅಷ್ಟಾಗಿ ಮಳೆ ಆಗದೇ ಇರುವುದು ತೀವ್ರ ನೀರಿನ ಅಭಾವಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಮಂಗಳೂರು ವಿಶ್ವವಿದ್ಯಾಲಯವು (Mangalore University) ತನ್ನ ಕಾಲೇಜಿಗೆ ರಜೆಯನ್ನೇ ಘೋಷಿಸಿದೆ!

ಮಂಗಳೂರಿನಲ್ಲಿ ಮಳೆ ವಿಳಂಬದಿಂದಾಗಿ ನೀರಿಗೆ ಭಾರಿ ಸಂಕಷ್ಟ ಎದುರಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ ವಿವಿ ಆಡಳಿತ ಮಂಡಳಿಯು ಕಾಲೇಜಿಗೆ ರಜೆ ನೀಡುವ ನಿರ್ಧಾರಕ್ಕೆ ಬಂದಿದೆ. ಹಂಪನಕಟ್ಟೆ ಬಳಿಯ ಮಂಗಳೂರು ವಿವಿ ಅಧೀನದ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇಲ್ಲಿ ಕೈ-ಕಾಲುಗಳನ್ನು ತೊಳೆಯಲೂ ಸಹ ನೀರಿನ ಸಮಸ್ಯೆ ಎದುರಾಗಿದ್ದೇ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: Cyclone Biparjoy: ಬಿಪರ್‌ಜಾಯ್‌ ಚಂಡಮಾರುತ ಭೀತಿ; ಈ ಪದದ ಅರ್ಥ ಏನು? ಮೊದಲು ಎಲ್ಲಿ ಬಳಕೆ?

ಆನ್‌ಲೈನ್‌ ತರಗತಿ

ಸದ್ಯ ಎಲ್ಲ ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಯನ್ನು ಪ್ರಾರಂಭ ಮಾಡಲಾಗಿದೆ. ಸುಮಾರು 1800 ವಿದ್ಯಾರ್ಥಿಗಳಿಗೆ ರಜೆ ಸಿಕ್ಕಿದೆ. ಶೌಚಾಲಯ ಹಾಗೂ ಇತರೆ ಉಪಯೋಗಕ್ಕೆ ನೀರಿನ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಟ್ಯಾಂಕರ್‌ ನೀರೂ ಸಾಲುತ್ತಿಲ್ಲ

ಈ ನಡುವೆ ಕಾಲೇಜು ಆಡಳಿತ ಮಂಡಳಿಯವರು ಟ್ಯಾಂಕರ್ ಮೂಲಕ ಕೆಲವು ದಿನ ನೀರು ಪೂರೈಕೆಗೆ ಕ್ರಮ ವಹಿಸಿದರು. ಆದರೆ, ಆ ನೀರು ಸಹ ಯಾವುದಕ್ಕೂ ಸಾಕಾಗದ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುಂಗಾರು ಮಳೆ ಶುರುವಾಗಿ ನೀರಿನ ಕೊರತೆ ನೀಗುವವರೆಗೂ ಕಾಲೇಜಿಗೆ ರಜೆ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಬಸರಿಹಾಳದಲ್ಲಿ ಮಾರಕ ಕಾಲರಾ ರೋಗ; ಶಾಲೆಗಳಿಗೆ 3 ದಿನಗಳ ರಜೆ

ಕೊಪ್ಪಳ: ಕಳೆದ ಸೋಮವಾರ (ಜೂ.5) ಇಲ್ಲಿನ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು (Contaminated water) ಸೇವಿಸಿ 9 ತಿಂಗಳ ಮಗು ಸೇರಿ 60 ವರ್ಷದ ವೃದ್ಧೆ ಮೃತಪಟ್ಟಿದ್ದರು. ಇದೀಗ ಬಸರಿಹಾಳ ಗ್ರಾಮದಲ್ಲಿ ಕಾಲರಾ ಸೋಂಕು (Cholera disease) ಹೆಚ್ಚಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಆರೋಗ್ಯ ಸುರಕ್ಷತಾ ಹಿತದೃಷ್ಟಿಯಿಂದ ಮೂರು ದಿನಗಳ ರಜೆ ಘೋಷಣೆ (holiday announced) ಮಾಡಲಾಗಿದೆ.

ಇದನ್ನೂ ಓದಿ: Text Book: ಪಠ್ಯ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷ ಆಗಲಾರೆ; ಸರ್ಕಾರದ ಆಫರ್‌ ತಿರಸ್ಕರಿಸಿದ ಬರಗೂರು ರಾಮಚಂದ್ರಪ್ಪ

ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿಗಳ ಆದೇಶದಂತೆ ಶಾಲಾ ಶಿಕ್ಷಣ ಇಲಾಖೆಯು ಜೂನ್‌ 7 ರಿಂದ 9 ರವರೆಗೆ ರಜೆಯನ್ನು ಘೋಷಿಸಿದೆ. ಇನ್ನು ಈ ರಜಾ ಅವಧಿಯನ್ನು ಮುಂಬರುವ ಶನಿವಾರ ಹಾಗೂ ಭಾನುವಾರದಂದು ಶಾಲೆ ನಡೆಸಿ ರಜಾ ಅವಧಿಯನ್ನು ಸರಿದೂಗಿಸಲು ಶಾಲೆಗಳಿಗೆ ಸೂಚಿಸಲಾಗಿದೆ.

Exit mobile version