ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ರಾಜ್ಯದಲ್ಲಿ ರಾಜಕೀಯ ಕಾವು ಏರಿದ್ದು, ಈ ನಡುವೆ ಹೈದರಾಬಾದ್ ಮೂಲದ ಸಂಸ್ಥೆಯೊಂದು ಚುನಾವಣಾ ಪೂರ್ವ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಿದೆ. ಹೈದರಾಬಾದ್‌ನ ಇಂಡಿಯನ್ ಪೊಲಿಟಿಕಲ್ ಸರ್ವೇಸ್ & ಸ್ಟ್ರಾಟಜೀಸ್ ಟೀಂ (ಐಪಿಎಸ್‌ಎಸ್) ಎಂಬ ಸಂಸ್ಥೆ ರೂಪಿಸಿರುವ ವರದಿಯಲ್ಲಿ, ಕಾಂಗ್ರೆಸ್ ಕಡೆಗೇ ಮತದಾರರ ಒಲವಿದೆ (Mood of Karnataka) ಎಂದು ತಿಳಿಸಲಾಗಿದೆ.
ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಕಾಂಗ್ರೆಸ್ 108-114, ಬಿಜೆಪಿ 65-76, ಜೆಡಿಎಸ್ 24-30 ಸ್ಥಾನ ಹಾಗೂಬ ಇತರೆ 7 ಶಾಸಕರು ಗೆಲ್ಲಬಹುದು ಎಂದು ತಿಳಿಸಿದೆ. ಈ ವರದಿಯನ್ನು ನೇರವಾಗಿ ಜನರಿಂದ ಸ್ವೀಕರಿಸಲಾಗಿದ್ದು, ಯಾವುದೇ ಡಿಜಿಟಲ್ ಮಾದರಿ ಸಂಗ್ರಹಿಸಿಲ್ಲ ಎಂದು ಸಂಸ್ಥೆ ತಿಳಿಸಿಲ್ಲ. ವಿವಿಧ ಸಮುದಾಯಗಳ ಮತದಾರರ ಮಾದರಿ ಸಂಗ್ರಹಿಸಿದ್ದು, ಸಾಮಾಜಿಕ ಆರ್ಥಿಕಯನ್ನು ಪ್ರತಿನಿಧಿಸುತ್ತದೆ ಎಂದೂ ವರದಿ ತಿಳಿಸಿದೆ.
ಪ್ರಭಾವಿಸುವ ೧೪ ವಿಷಯಗಳು
ಈ ಬಾರಿ ಕರ್ನಾಟಕದ ವಿಧಾನಸಭೆ ಚುನಾವಣೆಗಳನ್ನು ಪ್ರಭಾವಿಸುವ ಅಂಶಗಳು ಎಂದು 14 ಅಂಶಗಳನ್ನು ವರದಿ ತಿಳಿಸಿದೆ. ಆದರೆ ಇದರಲ್ಲಿ ಬಹುತೇಕ ಅಂಶಗಳು ಸರ್ಕಾರದ ವಿರುದ್ಧವಾಗಿ ಹಾಗೂ ಬಹಳಷ್ಟು ಕಡೆ ಕಾಂಗ್ರೆಸ್ ಪರವಾಗಿ ಇರುವಂತೆಯೇ ಮೇಲ್ನೋಟಕ್ಕೆ ಕಾಣುತ್ತಿವೆ.
- ಹಣದುಬ್ಬರ
- ರೈತರ ಸಮಸ್ಯೆಗಳು
- ನಿರುದ್ಯೋಗ
- ಸರ್ಕಾರಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರ
- ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ದರ ಏರಿಕೆ
- ಮರಳು ಮತ್ತು ಮದ್ಯ ಮಾಫಿಯಾ
- ವೈದ್ಯಕೀಯ ಮತ್ತು ಮೂಲಸೌಕರ್ಯ ಕೊರತೆ
- ರಿಯಲ್ ಎಸ್ಟೇಟ್ ಮಾಫಿಯಾ
- ಕೋಮುಗಳ ನಡುವೆ ಧ್ವೇಷ
- ಶಾಸಕರ ಖರೀದಿ
- ಪಿಎಸ್‌ಐ ನೇಮಕ ಹಗರಣ
- 40% ಕಮಿಷನ್ ಆರೋಪ
- ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ
- ಕರ್ನಾಟಕ-ತಮಿಳುನಾಡು ನಡುವೆ ಜಲ ವಿವಾದ
ಇದನ್ನೂ ಓದಿ | Salary hike | ಭಾರತದ ಉದ್ಯೋಗಿಗಳಿಗೆ ಶೇ.15ರಿಂದ 30ರಷ್ಟು ವೇತನ ಏರಿಕೆ: ಸಮೀಕ್ಷೆ