Site icon Vistara News

Moral policing | ಜುವೆಲ್ಲರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಥಳಿತ, ಸಹೋದ್ಯೋಗಿ ಯುವತಿ ಜತೆ ಆತ್ಮೀಯವಾಗಿದ್ದಕ್ಕೆ ಆಕ್ಷೇಪ

moral policing

ಮಂಗಳೂರು: ತಾನು ಕೆಲಸ ಮಾಡುತ್ತಿದ್ದ ಜುವೆಲ್ಲರಿಯಲ್ಲಿ ಸಹೋದ್ಯೋಗಿಯಾಗಿದ್ದ ಹಿಂದು ಯುವತಿ ಜತೆ ಆತ್ಮೀಯವಾಗಿದ್ದ ಎಂಬ ಕಾರಣಕ್ಕೆ ಯುವಕನೊಬ್ಬನಿಗೆ ಹಿಂದು ಸಂಘಟನೆಗಳ ಕಾರ್ಯಕರ್ತರು ಹಿಗ್ಗಾಮುಗ್ಗ ಥಳಿಸಿದ್ದಾರೆ.

ಮಂಗಳೂರಿನ ಕಂಕನಾಡಿ ಬಳಿ ಇರುವ ಸುಲ್ತಾನ್‌ ಜುವೆಲ್ಲರಿಯಲ್ಲಿ ಈ ಘಟನೆ ನಡೆದಿದೆ. ಜುವೆಲ್ಲರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಹಿಂದು ಯುವತಿ ಜತೆ ಆತ್ಮೀಯವಾಗಿದ್ದ ಎಂಬ ಕಾರಣಕ್ಕೆ ಯುವತಿಯ ಮನೆಯವರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದರು. ಆಕೆಯ ಜತೆಗೆ ಹೆಚ್ಚು ಬೆರೆಯದಂತೆ, ಆಮಿಷ ಒಡ್ಡದಂತೆ ಬೆದರಿಕೆ ಹಾಕಿದ್ದರು.

ಈ ವಿಚಾರವನ್ನು ತಿಳಿದ ಹಿಂದು ಸಂಘಟನೆ ಕಾರ್ಯಕರ್ತರು ಜುವೆಲ್ಲರಿಗೆ ನುಗ್ಗಿದ್ದಲ್ಲದೆ, ಹಿಂದು ಹುಡುಗಿಯ ಸಹವಾಸಕ್ಕೆ ಹೋಗದಂತೆ ಎಚ್ಚರಿಸಿ ಹಿಗ್ಗಾಮುಗ್ಗಾ ಥಳಿಸಿದರು. ಇಬ್ಬರೂ ಒಂದೇ ಜುವೆಲ್ಲರಿಯಲ್ಲಿ ಕೆಲಸ ಮಾಡುತ್ತಿದ್ದು, ಮುಸ್ಲಿಂ ಯುವಕ ಯವತಿಯ ತಲೆ ಕೆಡಿಸಿದ್ದಾನೆ ಎಂಬ ಆರೋಪ ವ್ಯಕ್ತವಾಗಿದೆ.

ಯುವತಿ ಮನೆಯವರು ಕೂಡಾ ಆತನ ವರ್ತನೆಗಳಿಂದ ಸಿಟ್ಟಿಗೆದ್ದು ಜುವೆಲ್ಲರಿಗೆ ಬಂದು ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Moral Policing | ಮಂಗಳೂರಿನಲ್ಲಿ ಯುವತಿ ಜತೆ ತೆರಳುತ್ತಿದ್ದ ಅನ್ಯಕೋಮಿನ ಯುವಕನಿಗೆ ಥಳಿತ

Exit mobile version