Site icon Vistara News

Moral Policing : ನಮ್‌ ಕಾಲೇಜಿನ ಹುಡುಗಿ ಬೇಕಾ ನಿಂಗೆ?; ಮುಸ್ಲಿಂ ಹುಡುಗನಿಗೆ ಅದೇ ಸಮುದಾಯದ ಯುವಕರಿಂದ ಹಲ್ಲೆ

Moral policing

ಮಂಗಳೂರು: ಸಾಮಾನ್ಯವಾಗಿ ದಕ್ಷಿಣ ಕನ್ನಡದಲ್ಲಿ ಹಿಂದೂ ಹುಡುಗಿಯ ಜತೆ ಮುಸ್ಲಿಂ ಹುಡುಗರು ಮಾತನಾಡಿದರೆ ದೊಡ್ಡ ಸಂಘರ್ಷವೇ (Moral policing) ನಡೆಯುತ್ತದೆ. ಅದೇ ರೀತಿ ಮುಸ್ಲಿಂ ಹುಡುಗಿಯರ ಜತೆ ಹಿಂದೂ ಹುಡುಗ ಮಾತನಾಡಿದರೂ ಮುಸ್ಲಿಮರಲ್ಲಿ ಕೆಲವರಿಗೆ ಪಿತ್ಥ ಕೆರಳುತ್ತದೆ. ಎರಡೂ ಘಟನೆಗಳು ದೊಡ್ಡ ಹೊಡೆದಾಟಕ್ಕೆ, ಬೆದರಿಕೆಗೆ ಕಾರಣವಾಗುತ್ತದೆ. ಆದರೆ, ಇಲ್ಲೊಂದು ವಿಭಿನ್ನವಾದ ಘಟನೆ ನಡೆದಿದೆ. ಇದೂ ಒಂಥರಾ ನೈತಿಕ ಪೊಲೀಸ್‌ಗಿರಿ ಘಟನೆ. ಆದರೆ, ಇಲ್ಲಿ ಇದು ನಡೆದಿರುವುದು ಹಿಂದೂ- ಮುಸ್ಲಿಂ (Hindu Muslim) ನಡುವೆ ಅಲ್ಲ. ಮುಸ್ಲಿಂ ಹುಡುಗನಿಗೆ ಅದೇಶ ಸಮುದಾಯದ ಹುಡುಗರು ಹಲ್ಲೆ ಮಾಡಿದ್ದಾರೆ.

ಕಾಸರಗೋಡು ಜಿಲ್ಲೆಯ ಉಪ್ಪಳದ ಇಬ್ರಾಹಿಂ ಫಾಹಿಂ (18) ಮಂಗಳೂರಿನ ಕಾಲೇಜೊಂದರಲ್ಲಿ ವಿದ್ಯಾರ್ಥಿ. ಆತ ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ಮುಸ್ಲಿಂ ವಿದ್ಯಾರ್ಥಿನಿಯನ್ನು (Muslim Student) ಪ್ರೀತಿ ಮಾಡುತ್ತಿದ್ದಾನೆ ಎಂದು ಆರೋಪಿಸಿ ಹಲ್ಲೆ ಮಾಡಲಾಗಿದೆ.

ಹಲ್ಲೆಗೆ ಒಳಗಾದ ಯುವಕ

ವಿದ್ಯಾರ್ಥಿಗಳ ತಂಡವೊಂದು ಆತನನ್ನು ಮಂಗಳೂರು ಹೊರವಲಯದ ಅಡ್ಯಾರ್ ಎಂಬಲ್ಲಿನ ಫ್ಲ್ಯಾಟ್ ಒಂದಕ್ಕೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ. ಬೆಲ್ಟ್ ನಿಂದ ಹೊಡೆದು ಸಿಗರೇಟ್ ನಿಂದ ಸುಟ್ಟು ವಿಕೃತಿ ಮೆರೆಯಲಾಗಿದ್ದು, ತೀವ್ರ ಗಾಯಗೊಂಡಿದ್ದ ಆತನನ್ನು ಬಳಿಕ ಆಸ್ಪತ್ರೆಗೆ ಸೇರಿಸಲಾಗಿದೆ.

ಈ ನಡುವೆ ಪೊಲೀಸರು ನೈತಿಕ ಪೊಲೀಸ್‌ಗಿರಿ ಮೆರೆದ ಮುಸ್ಲಿಂ ವಿದ್ಯಾರ್ಥಿಗಳ ಪೈಕಿ ಒಬ್ಬನನ್ನು ಬಂಧಿಸಿದ್ದಾರೆ. ಎಸ್‌ಡಿಪಿಐಯ ಮುಖಂಡ ಅನ್ವರ್ ಸಾದತ್ ಪುತ್ರನ ನೇತೃತ್ವದಲ್ಲಿ ಈ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: Moral Policing: ವಿದ್ಯಾರ್ಥಿನಿ ಜತೆ ಮಾತನಾಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಹಲ್ಲೆ, ಮೂವರ ಬಂಧನ

ಅನಾನ್ ಮತ್ತು ತಬೀಶ್ ಹಾಗೂ ತಂಡದಿಂದ ಯುವಕನ ಮೇಲೆ ದಾಳಿ ನಡೆದಿದೆ ಎನ್ನುವುದು ಗೊತ್ತಾಗಿದೆ. ಹಲ್ಲೆ ಮಾಡಿದವರು ಬಂಟ್ವಾಳ ತಾಲೂಕಿನವರು ಎನ್ನುವುದು ಗೊತ್ತಾಗಿರುವ ಮಾಹಿತಿ.

ಬೇರೆ ಕಾಲೇಜಿನ ವಿದ್ಯಾರ್ಥಿ ನಮ್ಮ ಕಾಲೇಜಿನ ವಿದ್ಯಾರ್ಥಿನಿಯನ್ನು ಪ್ರೀತಿಸಿದ್ದು ಈ ಹುಡುಗರನ್ನು ಕೆರಳಿಸಿದೆ ಎನ್ನಲಾಗಿದೆ. ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ.

Exit mobile version