Site icon Vistara News

VISTARA TOP 10 NEWS : ತ.ನಾಡಿಗೆ ಮತ್ತಷ್ಟು ಕಾವೇರಿ ನೀರು, 17 ಭ್ರಷ್ಟ ಅಧಿಕಾರಿಗಳ ಬೇಟೆ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Top 10 news

1. ರಾಜ್ಯಕ್ಕೆ ಮತ್ತೆ ಶಾಕ್‌, 15 ದಿನ 2600 ಕ್ಯೂಸೆಕ್‌ ನೀರು ಹರಿಸಲು CWRC ಶಿಫಾರಸು
ನವದೆಹಲಿ: ಕಾವೇರಿ ಜಲ ವಿವಾದದಲ್ಲಿ (Cauvery Dispute) ರಾಜ್ಯಕ್ಕೆ ಮತ್ತೆ ಹೊಡೆತ ಬಿದ್ದಿದೆ. ರಾಜ್ಯದಲ್ಲಿ ನೀರಿಗೆ ಹಾಹಾಕಾರ ಕಾಣಿಸಿಕೊಂಡಿರುವ ನಡುವೆಯೇ ಕಾವೇರಿ ನೀರು ನಿಯಂತ್ರಣ ಸಮಿತಿಯು (Cauvery Water regulation Committee) ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಮತ್ತೆ 2600 ಕ್ಯೂಸೆಕ್ ನೀರು ಬಿಡಲು ಶಿಫಾರಸು ಮಾಡಿದೆ. ಸೋಮವಾರ ದಿಲ್ಲಿಯನ್ನು ಕೇಂದ್ರವಾಗಿಟ್ಟುಕೊಂಡು ನಡೆದ ವರ್ಚ್ಯುವಲ್‌ ಸಭೆಯಲ್ಲಿ ಸಾಕಷ್ಟು ಚರ್ಚೆಗಳ ಬಳಿಕ ಈ ತೀರ್ಮಾನ ಪ್ರಕಟಿಸಲಾಗಿದೆ. ಪ್ರತಿ ಬಾರಿ ಸಿಡಬ್ಲ್ಯುಆರ್‌ಸಿ ಸಭೆ ನಡೆದಾಗಲೂ ನೀರು ಬಿಡುಗಡೆ ಮಾಡುವಂತೆ ರಾಜ್ಯಕ್ಕೆ ಆದೇಶ ನೀಡುವುದು ಈಗ ಕಾಯಂ ಆಗಿದೆ. ಈ ಬಾರಿ ನೀರಿನ ಪ್ರಮಾಣವನ್ನು 2600 ಕ್ಯೂಸೆಕ್‌ಗೆ ಇಳಿಸಿದೆ ಎನ್ನುವುದೇ ಹೊಸ ಸಂಗತಿ. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

2. ರಾಜ್ಯದಲ್ಲಿ ಒಂದೇ ದಿನ 17 ಭ್ರಷ್ಟ ಅಧಿಕಾರಿಗಳ ಬೇಟೆ; ಕಂತೆ ಕಂತೆ ಹಣ, ಚಿನ್ನಾಭರಣ ಪತ್ತೆ!
ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ 17 ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ಸೋಮವಾರ ಲೋಕಾಯುಕ್ತ ದಾಳಿ (Lokayukta Raid) ನಡೆದಿದೆ. ಬೆಂಗಳೂರು, ತುಮಕೂರು, ಮಂಡ್ಯ, ಚಿತ್ರದುರ್ಗ ಸೇರಿ ಒಟ್ಟು 69ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆದ ಮೆಗಾ ರೇಡ್‌ನಲ್ಲಿ ನಗದು, ಚಿನ್ನ, ಬೆಳ್ಳಿ, ಆಸ್ತಿ ಪತ್ರಗಳು ಸೇರಿ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಯಾವ ಅಧಿಕಾರಿ ಮನೆಯಲ್ಲಿ ಎಷ್ಟು ಆಸ್ತಿ ಪತ್ತೆಯಾಗಿದೆ ಎಂಬ ಮಾಹಿತಿ ಇಲ್ಲಿದೆ. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್​ ಮಾಡಿ.
ಈ ಸುದ್ದಿಯನ್ನೂ ಓದಿ : Lokayukta Raid: ಬೆಂಗಳೂರಿನ ಇಬ್ಬರು ಅಧಿಕಾರಿಗಳ ಮನೆಯಲ್ಲಿ ನಗದು, ಚಿನ್ನ ಸೇರಿ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆ

3. ಹೃದಯಾಘಾತ ಭೀತಿ; ಕೊರೊನಾದಿಂದ ಪಾರಾದವರು ಹೆಚ್ಚು ಕೆಲಸ ಮಾಡದಂತೆ ಕೇಂದ್ರ ಸೂಚನೆ!
ನವದೆಹಲಿ: ದೇಶಾದ್ಯಂತ ಹೃದಯಾಘಾತಗಳಿಗೆ ಯುವಕರೇ ಬಲಿಯಾಗುತ್ತಿರುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಗುಜರಾತ್‌ನಲ್ಲಿ ಕೆಲವೇ ದಿನಗಳಲ್ಲಿ 10 ಜನ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅದರಲ್ಲೂ, ಕೊರೊನಾ ವೈರಸ್‌ ಬಳಿಕ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಲಸಿಕೆಯಿಂದಲೇ ಹಾರ್ಟ್‌ ಅಟ್ಯಾಕ್‌, ಹೃದಯ ಸ್ತಂಭನ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಮಹತ್ವದ ಸೂಚನೆ ನೀಡಿದೆ. “ಕೊರೊನಾ ವೇಳೆ ಸಾವು ಗೆದ್ದು ಬಂದವರು ಜಾಸ್ತಿ ಕೆಲಸ ಮಾಡಬಾರದು” ಎಂದು ಸೂಚಿಸಿದೆ. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

4. 64 ಲಕ್ಷ ಫೋನ್‌ಗಳ ಸಂಪರ್ಕ ಕಡಿತಗೊಳಿಸಿದ ಕೇಂದ್ರ; ಇದು ಕಾರಣ
ನವ ದೆಹಲಿ: 6 ತಿಂಗಳ ಅವಧಿಯಲ್ಲಿ ದೇಶದ ಸುಮಾರು 64 ಲಕ್ಷ ಅನಧಿಕೃತ ಫೋನ್ ಸಂಪರ್ಕವನ್ನು (Phone Connections) ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಫೇಸ್‌ ರೆಕಗ್ನಿಶನ್‌ನ(Facial recognition) ಸಹಾಯದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

5. ಗಾಜಾ ನಗರದ ಗಡಿ ಸಮೀಪಿಸಿದ ಇಸ್ರೇಲ್‌ ಟ್ಯಾಂಕರ್‌ಗಳು, ಶೀಘ್ರವೇ ಹಮಾಸ್‌ ಉಗ್ರರ ಸರ್ವನಾಶ?
ಜೆರುಸಲೇಂ: ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರವು (Israel Palestine War) 24ನೇ ದಿನಕ್ಕೆ ಕಾಲಿಟ್ಟಿದೆ. ಅದರಲ್ಲೂ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ದಾಳಿ ನಡೆಸಿದ ಬಳಿಕ, ಹಮಾಸ್‌ ಉಗ್ರರನ್ನು ಸರ್ವನಾಶ ಮಾಡುವ ಪಣತೊಟ್ಟಿರುವ ಇಸ್ರೇಲ್‌ ಸೇನೆಯು ಗಾಜಾ ನಗರದ (Gaza City) ಗಡಿಯಲ್ಲಿ ಬೀಡುಬಿಟ್ಟಿದೆ. ಅದರಲ್ಲೂ, ಸೋಮವಾರ (ಅಕ್ಟೋಬರ್‌ 30) ಇಸ್ರೇಲ್‌ ಸೇನೆಯ ಯುದ್ಧ ಟ್ಯಾಂಕರ್‌ಗಳು, ಬಂಕರ್‌ಗಳು ಗಾಜಾ ನಗರದ ಗಡಿ ಸಮೀಪಿಸಿದ್ದು, ಶೀಘ್ರವೇ ಇಡೀ ನಗರವನ್ನು, ಹಮಾಸ್‌ ಉಗ್ರರನ್ನು ಸರ್ವನಾಶ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

6.  ವಾರ ಪೂರ್ತಿ ಬೆಂಗಳೂರು ಸೇರಿ ಕರಾವಳಿಯಲ್ಲಿ ಗುಡುಗು ಸಹಿತ ಮಳೆ
ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ಕರಾವಳಿಯ ಹಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ (Karnataka Weather Forecast) ಸಾಧ್ಯತೆ ಇದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ (Rain News) ಸಾಧ್ಯತೆ ಇದೆ. ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದೆ. ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರಲಿದೆ. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

7. ದೇಶದ 81.5 ಕೋಟಿ ನಾಗರಿಕರ ಕೋವಿಡ್‌ ಪರೀಕ್ಷಾ ಮಾಹಿತಿ ರಹಸ್ಯ ಮಾರಾಟ! ನಿಮ್ಮದೂ ಇರಬಹುದು!
ಹೊಸದಿಲ್ಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಬಳಿ ಇದ್ದ ಸುಮಾರು 81.5 ಕೋಟಿ ಭಾರತೀಯ ನಾಗರಿಕರ Covid-19 ಪರೀಕ್ಷಾ ಮಾಹಿತಿ ಮಾರಾಟವಾಗಿದೆ ಎಂಬ ರಹಸ್ಯ ಬಹಿರಂಗವಾಗಿದೆ. ಇದುವರೆಗೆ ಭಾರತದಲ್ಲಿ ನಡೆದಿರಬಹುದಾದ ಡೇಟಾ ಸೋರಿಕೆ ಅವ್ಯವಹಾರಗಳಲ್ಲೇ ಅತಿ ದೊಡ್ಡದು ಎಂದು ಈ ಪ್ರಕರಣವನ್ನು ಶಂಕಿಸಲಾಗಿದೆ. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

8. ರಾಜಸ್ಥಾನದ ಭವಿಷ್ಯ ನಿರ್ಧರಿಸಲಿದೆ ಈ 5 ಅಂಶಗಳು
ಜೈಪುರ: ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಯ (Rajasthan Assembly Election) ಕಾವು ಏರತೊಡಗಿದೆ. ನವೆಂಬರ್ 23ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದು ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ. ಪ್ರಶ್ನೆಪತ್ರಿಕೆ ಸೋರಿಕೆ, ಉಚಿತ ಕೊಡುಗೆಗಳು, ಮೋದಿ ವರ್ಸಸ್ ಸಿಎಂ ಅಭ್ಯರ್ಥಿ, ರಜಪೂತ್-ಗುಜ್ಜರ್ ಮತಗಳು ಮತ್ತು ಹಿಂದುತ್ವ – ಈ ಐದು ಅಂಶಗಳು ʼಮರುಭೂಮಿ ರಾಜ್ಯʼದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ನಿರ್ಧರಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

9. ಪಾಕ್​ ತಂಡದಲ್ಲಿ ಅಲ್ಲೋಲ ಕಲ್ಲೋಲ; ಮುಖ್ಯ ಆಯ್ಕೆದಾರ ಹಕ್​ ರಾಜೀನಾಮೆ
ಕರಾಚಿ: ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ಗಲಾಟೆ ಕೊನೆಗೂ ಬಯಲಾಗಿದೆ. ಐಸಿಸಿ ವಿಶ್ವಕಪ್ 2023 ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಕಳಪೆ ಪ್ರದರ್ಶನವು ಮೊದಲ ಬಲಿ ತೆಗೆದುಕೊಂಡಿದೆ. ಮುಖ್ಯ ಆಯ್ಕೆಗಾರ ಇಂಜಮಾಮ್ ಉಲ್ ಹಕ್ ತಮ್ಮ ಸ್ಥಾನಕ್ಕೆ ಏಕಾಏಕಿ ರಾಜೀನಾಮೆ ನೀಡಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕನ ವಿರುದ್ಧ ಹಿತಾಸಕ್ತಿ ಸಂಘರ್ಷವಿದೆ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಮ್ಮ ತನಿಖೆಯನ್ನು ನಡೆಸಲು ಸಜ್ಜಾಗಿದೆ. ಜತೆಗೆ ಭಾರತದಲ್ಲಿರುವ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ನೀಡುತ್ತಿದೆ. ಇವೆಲ್ಲದರ ನಡುವೆ ಸಮಸ್ಯೆಯಿಂದ ಪಾರಾಗಲು ಮಾಜಿ ನಾಯಕ ರಾಜೀನಾಮೆ ನೀಡಿದ್ದಾರೆ. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

10. ಜಗತ್ತಿನ ಮೊದಲ ‘ಹಾರುವ ಟ್ಯಾಕ್ಸಿ’ಗೆ ಚೀನಾ ಅಸ್ತು; ಇದರ ಹಾರಾಟ ಹೇಗಿದೆ ನೋಡಿ!
ಬೀಜಿಂಗ್:‌ ಟ್ಯಾಕ್ಸಿ ಎಂದರೆ ನಮಗೆ ಕಾರು ಅಥವಾ ಕ್ಯಾಬ್‌ಗಳಷ್ಟೇ ಗೊತ್ತು. ಓಲಾ ಅಥವಾ ಉಬರ್‌ನಲ್ಲಿ ಬುಕ್‌ ಮಾಡಿಕೊಂಡು ಸುತ್ತಾಡಿದ್ದಷ್ಟೇ ಗೊತ್ತು. ಆದರೆ, ಟ್ಯಾಕ್ಸಿ ಎಂದರೆ ಹಕ್ಕಿಯಂತೆ ಹಾರುವ, ಟ್ರಾಫಿಕ್‌ ಕಿರಿಕಿರಿ ಇಲ್ಲದೆ, ನಿಗದಿತ ಸಮಯಕ್ಕೆ, ನಿಗದಿತ ಸ್ಥಳಕ್ಕೆ ತೆರಳುವ ಟ್ಯಾಕ್ಸಿಯೊಂದು ಹಾರಲು ಸಜ್ಜಾಗಿದೆ. ಹೌದು, ಜಗತ್ತಿನಲ್ಲೇ ಮೊದಲ ಬಾರಿಗೆ ಚೀನಾದಲ್ಲಿ ಹಾರುವ ಟ್ಯಾಕ್ಸಿಗೆ ಸರ್ಕಾರ (Flying Taxi) ಅನುಮತಿ ನೀಡಿದೆ. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್​ ಮಾಡಿ.
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version