Site icon Vistara News

Ram Mandir: ರಾಮಲಲ್ಲಾ ಪ್ರತಿಷ್ಠಾಪನೆ ದಿನವೇ ಹೆರಿಗೆ; ಬೆಂಗಳೂರಲ್ಲಿ 60ಕ್ಕೂ ಹೆಚ್ಚು ಮಕ್ಕಳ ಜನನ!

Ram lalla

ಬೆಂಗಳೂರು: ರಾಮಲಲ್ಲಾ ಪ್ರತಿಷ್ಠಾಪನೆ ದಿನದಂದು ಹೆರಿಗೆಗೆ ಸಿಲಿಕಾನ್ ಸಿಟಿಯ ಆಸ್ಪತ್ರೆಗಳಲ್ಲಿ ಭಾರಿ ಬೇಡಿಕೆ ಉಂಟಾಗಿತ್ತು. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ಐತಿಹಾಸಿಕ ದಿನದಂದು (ಜ.22) ಮಕ್ಕಳನ್ನು ಪಡೆಯಲು ಅನೇಕ ಪೋಷಕರು ಬಯಸಿದ್ದರು. ಇದೀಗ ರಾಜಧಾನಿಯಲ್ಲಿ ಸೋಮವಾರ ಸಂಜೆವರೆಗೆ 60ಕ್ಕೂ ಹೆಚ್ಚು ಮಕ್ಕಳು ಜನ್ಮ ಪಡೆದಿರುವುದು ಕಂಡುಬಂದಿದೆ.

ಅಯೋಧ್ಯೆ ರಾಮಮಂದಿರ ಪ್ರತಿಷ್ಠಾನೆಯ ಶುಭ ದಿನದಂದು ರಾಮನಂತಹ ಮಗು, ಸೀತೆಯಂತಹ ಮಗಳನ್ನು ಪಡೆಯಲು ಹಲವು ಪೋಷಕರು ಆಸಕ್ತಿ ವಹಿಸಿದ್ದರು. ಹೀಗಾಗಿ ರಾಜಧಾನಿಯಲ್ಲಿ ಇದುವರೆಗೂ 60ಕ್ಕೂ ಹೆಚ್ಚು ಶಿಶುಗಳು ಜನಿಸಿದ್ದಾರೆ.

ವಾಣಿವಿಲಾಸ್ ಆಸ್ಪತ್ರೆಯಲ್ಲಿ 28 ಕಂದಮ್ಮಗಳ ಜನನ, ಕೆಸಿ ಜನರಲ್ ಆಸ್ಪತ್ರೆಯಲ್ಲಿ ಈವರೆಗೆ 4 ಶಿಶುಗಳ ಜನನವಾಗಿದೆ. ಈ ಪೈಕಿ 2 ಸಹಜ ಹೆರಿಗೆ, 2 ಸಿಸೇರಿಯೆನ್ ಆಗಿದೆ. ಇನ್ನು ಘೋಷಾ ಆಸ್ಪತ್ರೆಯಲ್ಲಿ ಒಟ್ಟು 6 ಮಕ್ಕಳು ಜನಿಸಿದ್ದು, 5 ನಾರ್ಮಲ್, 1 ಸಿಸೇರಿಯನ್ ಹೆರಿಗೆ ಆಗಿದೆ. ಅದೇ ರೀತಿ ಇತರೆ ಖಾಸಗಿ ಆಸ್ಪತ್ರೆಗಳಲ್ಲಿ 25ಕ್ಕೂ ಅಧಿಕ ಮಕ್ಕಳ ಜನನವಾಗಿದೆ.

ಇದನ್ನೂ ಓದಿ | Ram Mandir: Selfie With ರಾಮೋತ್ಸವದಲ್ಲಿ ಮಿಂಚಿದ ಬಾಲರಾಮರು; ಮದುವೆ ಮನೆಯಲ್ಲೂ ರಾಮಜಪ

ಖಾಸಗಿ ಆಸ್ಪತ್ರೆಗಳಲ್ಲಿ ಡೆಲಿವರಿ ಬಗ್ಗೆ ಮಾಹಿತಿ ನೀಡದಂತೆ ಪೋಷಕರು ತಾಕೀತು ಮಾಡಿದ ಹಿನ್ನೆಲೆಯಲ್ಲಿ ಜನಿಸಿದ ಹಲವು ಮಕ್ಕಳ ಮಾಹಿತಿ ನೀಡಲು ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ.

Rama Mandir : ರಾಮನ ವೇಷ ಧರಿಸಿ ಶಾಲೆಗೆ ಬಂದ ಬಾಲಕ; ಸಹಪಾಠಿಗಳಿಂದ ಪಾದ ಪೂಜೆ!

ಬೆಳಗಾವಿ: ರಾಮ ಜನ್ಮಭೂಮಿಯಲ್ಲಿ ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆಯ (Rama Mandri Ayodhya) ಸಂದರ್ಭದಲ್ಲಿ ರಾಷ್ಟ್ರದ ನಾನಾ ಭಾಗಗಳಲ್ಲಿ ರಾಮ ಭಕ್ತಿ ನಾನಾ ರೂಪಗಳಲ್ಲಿ ಮೇಳೈಸುತ್ತಿದೆ. ದೇವಸ್ಥಾನಗಳಲ್ಲಿ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು, ಶೋಭಾ ಯಾತ್ರೆ ನಡೆದರೆ, ಕೆಲವರು ರಾಮನ ವೇಷ ಹಾಕಿ, ಮಕ್ಕಳಿಗೆ ಬಾಲ ರಾಮನ ವೇಷ ಹಾಕಿಸಿ ಖುಷಿಪಟ್ಟರು. ಈ ನಡುವೆ, ಬೆಳಗಾವಿಯ ಶಾಲೆಯೊಂದರಲ್ಲಿ (School in Belagavi) ನಡೆಯುತ್ತಿದ್ದ ಪರೀಕ್ಷೆ ವೇಳೆ ಬಾಲಕನೊಬ್ಬ ರಾಮನ ವೇಷ ಧರಿಸಿ (Boy comes in Ramas attire) ಬಂದಿದ್ದಾನೆ. ಆತನನ್ನು ಕಂಡು ಖುಷಿಪಟ್ಟ ಸಹಪಾಠಿಗಳು ಆತನನ್ನು ಸ್ವಾಗತಿಸಿ ಪಾದಪೂಜೆ ನಡೆಸಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಸಂಸ್ಕೃತಿ ಕೋಚಿಂಗ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದೆ. ಈ ಶಾಲೆಯಲ್ಲಿ ಸೋಮವಾರವೂ ಪರೀಕ್ಷೆ ಇತ್ತು. ಹಾಗಾಗಿ ರಜೆ ಕೊಟ್ಟಿರಲಿಲ್ಲ. ಈ ನಡುವೆ, 12 ವರ್ಷದ ಬಾಲಕ ಶ್ರೀಶಾಂತ್ ಕೋಟಿಹಾಳ ರಾಮನ ವೇಷ ಧರಿಸಿಯೇ ಕೋಚಿಂಗ್‌ ಸೆಂಟರ್‌ಗೆ ಬಂದಿದ್ದ.

ಅಯೋಧ್ಯೆಯಲ್ಲಿ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಮನೆಯವರು ಆತನನ್ನು ರಾಮನ ವೇಷ ಹಾಕಿ ಕಳಹಿಸಿದ್ದರು. ಶ್ರೀಶಾಂತ್‌ ವೇಷ ಧರಿಸಿ ಬರುತ್ತಿದ್ದಂತೆಯೇ ಸಹಪಾಠಿಗಳು ಹೂವಿನ ಹಾಸಿಗೆ ಮೂಲಕ ಬರಮಾಡಿಕೊಂಡರು.

ವಿದ್ಯಾರ್ಥಿಗಳು ʻಜೈ ಶ್ರೀರಾಮ್‌ʼ ಎಂದು ಘೋಷಣೆ ಮಾಡುತ್ತಾ ಹೂವಿನ ಮಳೆ ಸುರಿಸಿದರು. ಅದಾದ ಬಳಿಕ ಆ ಬಾಲಕನ ಪಾದ ಪೂಜೆಯನ್ನು ಮಾಡಿದರು. ಪಾದಗಳಿಗೆ ಜಲ ಸಿಂಚನ ಮಾಡಿ, ಗಂಧ ಲೇಪಿಸಿ ಸ್ವಾಮಿಸಿದರು. ಬಳಿಕ ಬಾಲಕ ಎಂದಿನಂತೆ ಪರೀಕ್ಷೆ ಬರೆದಿದ್ದಾನೆ.

ಇದನ್ನೂ ಓದಿ : Rama Mandir : ಎಂಥಾ ಸೌಹಾರ್ದ ನೋಡಿ, ದರ್ಗಾದಲ್ಲಿ ಹಿಂದು-ಮುಸ್ಲಿಂ ಯುವಕರಿಂದ ಶ್ರೀರಾಮ ಜಪ!

Exit mobile version