ಮಂಗಳೂರು: ಇಬ್ಬರು ಮಕ್ಕಳೊಂದಿಗೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide Case) ಮಾಡಿಕೊಂಡಿರುವ ಘಟನೆ ನಗರದ ಕೊಡಿಯಾಲ್ ಬೈಲಿನಲ್ಲಿ ಬುಧವಾರ ನಡೆದಿದ್ದು, ಈ ವೇಳೆ ಅದೃಷ್ಟವಶಾತ್ ಬಾಲಕಿಯೊಬ್ಬಳು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ವಿಜಯಾ (33), ಬಾಲಕಿ ಶೋಭಿತಾ (4) ಮೃತರು. 12 ವರ್ಷದ ಯಜ್ಞಾ ಪವಾಡಸದೃಶ ರೀತಿಯಲ್ಲಿ ನೇಣು ಕುಣಿಕೆಯಿಂದ ಪಾರಾಗಿದ್ದಾಳೆ. ಪತಿ ಆರು ವರ್ಷಗಳ ಹಿಂದೆ ಮೃತಪಟ್ಟಿದ್ದರಿಂದ ವಿಜಯಾ ಮರು ಮದುವೆಯಾಗಿದ್ದರು. ಎರಡನೇ ಪತಿ ಉಮೇಶ್ ಇತ್ತೀಚೆಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ನೊಂದಿದ್ದ ವಿಜಯಾ ಇಬ್ಬರು ಹೆಣ್ಣುಮಕ್ಕಳೊಂದಿಗೆ ಆತ್ಮಹತ್ಯೆ ಯತ್ನಿಸಿದ್ದಾರೆ.
ಇದನ್ನೂ ಓದಿ | Boy drowned : ಗೆಳೆಯರೊಂದಿಗೆ ವಿಕ್ಟೋರಿಯಾ ಮಹಾರಾಣಿ ಕೆರೆಗೆ ಈಜಲು ತೆರಳಿದ್ದ ಬಾಲಕ ಶವವಾಗಿ ಪತ್ತೆ
ನೇಣು ಬಿಗಿದುಕೊಳ್ಳುವ ವೇಳೆ ಯಜ್ಞಾ ಕಾಲ ಬುಡದಲ್ಲಿ ಟಿಪಾಯಿ ಇದ್ದಿದ್ದರಿಂದ ಅದರ ಮೇಲೆ ಕಾಲನ್ನಿಟ್ಟು ಜೀವ ರಕ್ಷಣೆಗಾಗಿ ಚೀರಾಟ ಮಾಡಿದ್ದಾಳೆ. ತಕ್ಷಣ ಸ್ಥಳೀಯರು ಆಗಮಿಸಿ ಮೂವರನ್ನೂ ರಕ್ಷಿಸುವ ಕೆಲಸಮಾಡಿದ್ದಾರೆ. ಆದರೆ, ಆ ವೇಳೆಗಾಗಲೇ ತಾಯಿ ವಿಜಯಾ , ಬಾಲಕಿ ಶೋಭಿತಾ ಕೊನೆಯುಸಿರೆಳೆದಿದ್ದು, ಯಜ್ಞಾ ಅಪಾಯದಿಂದ ಪಾರಾಗಿದ್ದಾಳೆ.