ಬೆಳಗಾವಿ: ಮಕ್ಕಳಾಗಲಿ ಎಂದು ಕೋಟ್ಯಂತರ ಹೆಣ್ಣುಮಕ್ಕಳು ದೇವರಲ್ಲಿ ನಿತ್ಯ ಪ್ರಾರ್ಥನೆ ಮಾಡುತ್ತಾರೆ. ಅದರಲ್ಲೂ, ವಂಶೋದ್ಧಾರಕ ಜನಿಸಲಿ ಎಂದು ಭಗವಂತನಲ್ಲಿ ಹರಕೆ ಹೊತ್ತುಕೊಳ್ಳುತ್ತಾರೆ. ಪ್ರತಿದಿನ ಆಸ್ಪತ್ರೆಗಳಿಗೆ ಅಲೆದಾಡುತ್ತಾರೆ. ಆದರೆ, ಬೆಳಗಾವಿಯಲ್ಲಿ ಕಟುಕ ಮಹಿಳೆಯೊಬ್ಬರು ಹೆತ್ತ ಮಗನನ್ನೇ ಕಾಂಪೌಂಡ್‌ನಲ್ಲಿ ಎಸೆದು ಹೋಗಿದ್ದಾರೆ. ಅಮ್ಮಾ ಎಂದು ಕೂಗಲು ಆಗದೆ, ಕರುಳಿನ ಕೂಗು ಅಮ್ಮನಿಗೆ ಕೇಳಿಸದೆ ಒಂದು ದಿನದ ನವಜಾತ ಶಿಶು ಮೃತಪಟ್ಟಿದೆ.
ಬೆಳಗಾವಿ ನಗರದ ರಾಮತೀರ್ಥ ನಗರದ ಕಟ್ಟಡವೊಂದರ ಕಾಂಪೌಂಡ್‌ನಲ್ಲಿ ನವಜಾತ ಶಿಶುವನ್ನು ತಾಯಿ ಎಸೆದುಹೋಗಿದ್ದಾರೆ. ರಾತ್ರಿಯಿಡೀ ನರಳಿದ ಮಗು ಪ್ರಾಣ ಬಿಟ್ಟಿದೆ ಎಂದು ತಿಳಿದುಬಂದಿದೆ. ಇದು ಯಾರ ಮಗು, ಎಸೆದ ಮಹಿಳೆ ಯಾರು ಎಂಬುದು ಇದುವರೆಗೆ ಗೊತ್ತಾಗಿಲ್ಲ. ಸ್ಥಳಕ್ಕೆ ಮಾಳಮಾರುತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟ ಮಗುವನ್ನು ಮರಣೊತ್ತರ ಪರೀಕ್ಷೆಗಾಗಿ ಬಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನು ಹೆತ್ತ ಮಗುವನ್ನೇ ಎಸೆದುಹೋದ ತಾಯಿಯ ಕಟುಕ ಮನಸ್ಸನ್ನು ಜನ ಖಂಡಿಸಿದ್ದಾರೆ.
ಇದನ್ನೂ ಓದಿ: Chandrayaan 3 : ಇವನು ವಿಕ್ರಮ್, ಇವಳು ಪ್ರಜ್ಞಾನ್; ನವಜಾತ ಶಿಶುಗಳಿಗೆ ಈ ಹೆಸರಿಟ್ಟು ಸಂಭ್ರಮಿಸಿದ ಯಾದಗಿರಿ ಕುಟುಂಬ!
ಜಲಾಶಯಕ್ಕೆ ಹಾರಿ ಪ್ರಾಣಬಿಟ್ಟ ಯುವಕ
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕು ಶಿವಪುರ ಗ್ರಾಮದ ಕಲ್ಲುಕಟ್ಟೆ ಕಿರು ಜಲಾಶಯಕ್ಕೆ ಜಿಗಿದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೋಡಹಳ್ಳಿ ಗ್ರಾಮದ ಸ್ವಾಮಿ (23) ಮೃತ. ಶನಿವಾರ ರಾತ್ರಿ ರಾತ್ರಿ 8 ಗಂಟೆಗೆ ಮನೆಯಿಂದ ಹೋಗಿದ್ದ ಸ್ವಾಮಿ, ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜಲಾಶಯದಲ್ಲಿ ಜಿಗಿದ ವಿಚಾರ ತಿಳಿದು ಪೋಷಕರು, ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಶವಕ್ಕಾಗಿ ಶೋಧ ನಡೆದಿದೆ.