Site icon Vistara News

ವಿಸ್ತಾರ ಕಚೇರಿಗೆ ಸಂಸದ ಪಿ ಸಿ ಮೋಹನ್‌ ಭೇಟಿ, ಟಿವಿ ಚಾನೆಲ್‌ಗೆ ಶುಭ ಹಾರೈಕೆ

ಪಿ ಸಿ ಮೋಹನ್‌

ಬೆಂಗಳೂರು: ಬೆಂಗಳೂರು ಸೆಂಟ್ರಲ್‌ ಕ್ಷೇತ್ರದ ಬಿಜೆಪಿ ಸಂಸದ ಪಿ ಸಿ ಮೋಹನ್‌ ಅವರು ಶುಕ್ರವಾರ ವಿಸ್ತಾರ ಕಚೇರಿಗೆ ಭೇಟಿ ನೀಡಿ ಶುಭ ಹಾರೈಸಿದರು.

ವಿಸ್ತಾರ ಮೀಡಿಯಾದ vistaranews.comನಲ್ಲಿ ಸುದ್ದಿಗಳು ಮತ್ತು ಉಪಯುಕ್ತ ಮಾಹಿತಿಗಳು ಉತ್ತಮ ಗುಣಮಟ್ಟದಿಂದ ಸಿಗುತ್ತಿವೆ. ಹಣಕಾಸು, ಆರೋಗ್ಯ, ಅಧ್ಯಾತ್ಮ ಮತ್ತು ಸಿನಿಮಾ ಕುರಿತ ಯುಟ್ಯೂಬ್‌ ಚಾನೆಲ್‌ಗಳಲ್ಲಿ ಜನಸಾಮಾನ್ಯರಿಗೆ ಬೇಕಾಗಿರುವ ಮಾಹಿತಿಗಳಿವೆ. ವಿಸ್ತಾರ ಟಿವಿ ಕೂಡ ಹೀಗೆಯೇ ವಿಭಿನ್ನವಾಗಿ ಮೂಡಿಬರುವ ವಿಶ್ವಾಸವಿದೆ ಎಂದು ಪಿ ಸಿ ಮೋಹನ್‌ ಹೇಳಿದರು.

ವಿಸ್ತಾರ ಮೀಡಿಯಾದ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ, ಸಂಸ್ಥೆಯ ಚೇರ್ಮನ್‌ ಮತ್ತು ಎಂಡಿ ಎಚ್‌ ವಿ ಧರ್ಮೇಶ್‌ ಅವರು ಪಿ ಸಿ ಮೋಹನ್‌ ಅವರಿಗೆ ವಿಸ್ತಾರ ಮೀಡಿಯಾದ ಧ್ಯೇಯೋದ್ದೇಶ ಮತ್ತು ರೂಪುರೇಷೆಗಳನ್ನು ವಿವರಿಸಿದರು. ವಿಸ್ತಾರ ನ್ಯೂಸ್‌ ಸ್ಪೆಷಲ್‌ ಆಪರೇಷನಲ್‌ ಎಡಿಟರ್‌ ಕಿರಣ್‌ ಕುಮಾರ್‌ ಡಿ ಕೆ, ರಾಜಕೀಯ ವಿಭಾಗದ ಮುಖ್ಯಸ್ಥ ಮಾರುತಿ ಪಾವಗಡ ಜತೆಗಿದ್ದರು.

ಇದನ್ನೂ ಓದಿ | ವಿಸ್ತಾರ ನ್ಯೂಸ್ ಕಚೇರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ, ಶುಭ ಹಾರೈಕೆ

ಇದನ್ನೂ ಓದಿ | ವಿಸ್ತಾರ ನ್ಯೂಸ್‌ ಕಚೇರಿಗೆ ಸಿಎಂ ಬೊಮ್ಮಾಯಿ ಭೇಟಿ, ಟಿವಿ ಚಾನೆಲ್‌ ಸಿದ್ಧತೆಗೆ ಮೆಚ್ಚುಗೆ

ಇದನ್ನೂ ಓದಿ | ʼವಿಸ್ತಾರʼ ಕಚೇರಿಗೆ ಡಾ. ಮಹೇಶ ಜೋಶಿ ಭೇಟಿ; ಸಂಸ್ಥೆಯ ಧ್ಯೇಯೋದ್ದೇಶಗಳಿಗೆ ಮೆಚ್ಚುಗೆ

Exit mobile version