Site icon Vistara News

MTR: ಬೆಂಗಳೂರಿನಲ್ಲಿ ಎಂಟಿಆರ್ ಕರುನಾಡು ಸ್ವಾದ; 2 ದಿನಗಳ ಆಹಾರ ಉತ್ಸವದಲ್ಲಿ ಏನೇನಿವೆ?

MTR Karunadu Svada food festival inauguration in Bengaluru

ಬೆಂಗಳೂರು: ಎಂಟಿಆರ್ ಕರುನಾಡು ಸ್ವಾದ ಕರ್ನಾಟಕ ವಿಶಿಷ್ಟ ಆಹಾರ ಉತ್ಸವಕ್ಕೆ ಬೆಂಗಳೂರಿನ ಜಯಮಹಲ್ ಪ್ಯಾಲೇಸ್‌ನ ಕನ್ವೆನ್ಷನ್ ಸೆಂಟರ್‌ನಲ್ಲಿ ಶನಿವಾರ ಚಾಲನೆ ದೊರೆಯಿತು. 100 ವರ್ಷಗಳ ಸಂಭ್ರಮಾಚರಣೆಯೊಂದಿಗೆ ಎಂಟಿಆರ್ (MTR) ತನ್ನ ‌ಜನಪ್ರಿಯ ಆಹಾರ ಉತ್ಸವದ 3ನೇ ಆವೃತ್ತಿಯಾದ ಎಂಟಿಆರ್‌ ಕರುನಾಡು ಸ್ವಾದ ಎರಡು ದಿನಗಳ ಕರ್ನಾಟಕ ವಿಶಿಷ್ಟ ಆಹಾರ ಉತ್ಸವವನ್ನು ಭಾರತದ ಮಾಜಿ ಸಾಲಿಸಿಟರ್ ಜನರಲ್, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಉದ್ಘಾಟಿಸಿದರು.

ಆಹಾರ ಉತ್ಸವದ ವಿಶೇಷತೆ

ಎಂಟಿಆರ್‌ನ ಪಾಕಶಾಲೆಯ ಸೆಂಟರ್‌ ಆಫ್‌ ಎಕ್ಸಿಲೆನ್ಸ್‌ (Centre of Excellence) ನೇತೃತ್ವದಲ್ಲಿ, 50 ಕ್ಕೂ ಹೆಚ್ಚು ಗೃಹ ಬಾಣಸಿಗರು ಉತ್ತರ ಕರ್ನಾಟಕ, ಕೊಡಗು, ದಕ್ಷಿಣ ಕನ್ನಡ, ಕಲ್ಯಾಣ ಕರ್ನಾಟಕ, ಉಡುಪಿ ಮತ್ತು ಹಳೇ ಮೈಸೂರು ಸೇರಿದಂತೆ ಕರ್ನಾಟಕದ ಆರು ಪ್ರದೇಶಗಳ 100ಕ್ಕೂ ಹೆಚ್ಚು ಖಾದ್ಯಗಳನ್ನು ಪ್ರದರ್ಶಿಸುತ್ತಿದ್ದಾರೆ.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ; ಇಂದು ಖರೀದಿಗೆ ಮುನ್ನ ದರದ ಜೊತೆಗೆ ಇದು ತಿಳಿದಿರಲಿ

ಉತ್ಸವದಲ್ಲಿ ವಿಶೇಷ ಪಾಕವಿಧಾನ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಈ ಪುಸ್ತಕವು 100 ಕ್ಕೂ ಹೆಚ್ಚು ಪಾಕವಿಧಾನಗಳ ಸಂಗ್ರಹಣೆಯನ್ನು ಹೊಂದಿದೆ. ಇದರಿಂದ ವಿಶೇಷ ಭಕ್ಷ್ಯಗಳನ್ನು ಮನೆಯಲ್ಲಿಯೇ ತಯಾರಿಸಬಹುದಾಗಿದೆ.

ಈ ವೇಳೆ ಎಂಟಿಆರ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುನಯ್ ಭಾಸಿನ್ ಮಾತನಾಡಿ, “ಎಂಟಿಆರ್ ಕರುನಾಡು ಸ್ವಾದವು” ಕರ್ನಾಟಕದ ಆಹಾರ ಮತ್ತು ಸಂಸ್ಕೃತಿಯ ಮೇಲಿರುವ ಪ್ರೀತಿಯಿಂದ ಸೃಷ್ಟಿಯಾಗಿದೆ. ಇದು ಕರ್ನಾಟಕದ ವೈವಿಧ್ಯಮಯ ರುಚಿಗಳ ಆಚರಣೆಯಾಗಿದೆ ಮತ್ತು ರಾಜ್ಯದ ಪಾಕಶಾಲೆಯ ಪರಂಪರೆಯನ್ನು ಎತ್ತಿಹಿಡಿಯುವ ಬದ್ಧತೆಯಾಗಿದೆ. ಈ ಅಮೂಲ್ಯವಾದ ಭಕ್ಷ್ಯಗಳ ಮೂಲಕ ಕರುನಾಡು ಪರಂಪರೆಯನ್ನು ಸಂರಕ್ಷಿಸುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Job Alert: 313 ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ಡಿಪ್ಲೋಮಾ ಓದಿದವರು ಇಂದೇ ಅಪ್ಲೈ ಮಾಡಿ

ಆಹಾರ ಉತ್ಸವ ಕಾರ್ಯಕ್ರಮದಲ್ಲಿ ಯಕ್ಷಗಾನ ಮತ್ತು ಡೊಳ್ಳು ಕುಣಿತದಂತಹ ಕರ್ನಾಟಕದ ನೃತ್ಯ ಪ್ರಕಾರಗಳನ್ನು ಆಯೋಜಿಸಿರುವುದು ವಿಶೇಷವಾಗಿದೆ.

Exit mobile version