Site icon Vistara News

Aam Aadmi Party: ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು ನೇಮಕ

Mukhyamantri Chandru

ಬೆಂಗಳೂರು: ರಾಜ್ಯದ ಹಿರಿಯ ರಂಗಭೂಮಿ, ಚಲನಚಿತ್ರ ಕಲಾವಿದ ಹಾಗೂ ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರು ಅವರನ್ನು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ಪಕ್ಷ (Aam Aadmi Party) ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಠಕ್ ದೆಹಲಿಯಲ್ಲಿ ಘೋಷಣೆ ಮಾಡಿದ್ದಾರೆ.

ಇವರೊಂದಿಗೆ ರಾಜ್ಯ ಸಂಘಟನಾ ಕಾರ್ಯದರ್ಶಿಗಳನ್ನಾಗಿ ಬಿ.ಟಿ. ನಾಗಣ್ಣ ಹಾಗೂ ಅರ್ಜುನ್ ಪರಪ್ಪ ಹಲಗಿಗೌಡರ್ ಅವರನ್ನು ನೇಮಿಸಲಾಗಿದೆ. ಪಕ್ಷದ ಈ ಹಿಂದಿನ ರಾಜ್ಯಾಧ್ಯಕ್ಷರಾಗಿದ್ದ ಪೃಥ್ವಿ ರೆಡ್ಡಿ ಅವರನ್ನು ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಇದನ್ನೂ ಓದಿ | BJP Karnataka: ನಾನೇ ವಿಪಕ್ಷ ನಾಯಕನಾಗುವೆ ಎಂದ ಯತ್ನಾಳ್‌:‌ ಅಸಾಧ್ಯ ಎಂದ ಸಿದ್ದರಾಮಯ್ಯ

Exit mobile version