ಬೆಂಗಳೂರು: ಡಿಜೆ ಹಳ್ಳಿಯಲ್ಲಿ ಕಂಟ್ರಿಮೇಡ್ ಪಿಸ್ತೂಲು ಡೀಲ್ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ನಾಗ್ಪುರದಿಂದ ಬೆಂಗಳೂರಿಗೆ ನಾಡ ಪಿಸ್ತೂಲುಗಳ (Country-made pistol) ಪೂರೈಕೆಗೆ ಮುಂಬೈ ಗ್ಯಾಂಗ್‌ಸ್ಟರ್ ಲಿಂಕ್ ಇದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಬಂಧಿತನಾದ ನಾಗಪುರದ ನೀಲೇಶ್ ನಾವರೆ ವಿಚಾರಣೆ ವೇಳೆ ಫೋನ್‌ನಲ್ಲಿದ್ದ ಮಾಹಿತಿ ಜಾಲಾಡಿದ ಪೊಲೀಸರಿಗೆ ಬಾರ್ಚಿನ್ ಗಾಡಿಯಾ ಎಂಬಾತ ನಾಡ ಪಿಸ್ತೂಲು ಪೂರೈಕೆ ಮಾಡಲು ಹೇಳಿದ್ದಾನೆ ಎಂಬುವುದು ತಿಳಿದುಬಂದಿದೆ. ಇನ್ನು ಪ್ರಕರಣದಲ್ಲಿ ರಿಸೀವರ್ ಆಗಿದ್ದ ವಿಫುಲ್ ಪನ್ನೋರ್ ಎಂಬ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಎರಡು ಕಂಟ್ರಿಮೇಡ್ ಪಿಸ್ತೂಲ್, ಆರು ಜೀವಂತ ಗುಂಡುಗಳು ಪತ್ತೆಯಾದ ಪ್ರಕರಣದಲ್ಲಿ ಡಿಜೆ ಹಳ್ಳಿ ಠಾಣೆ ಸೇರಿ ಇತರೆಡೆ ಅಪರಾಧ ಪ್ರಕರಣಗಳ ಹಿನ್ನೆಲೆಯುಳ್ಳ ವ್ಯಕ್ತಿ ವಿಫುಲ್ ಪನ್ನೋರ್ ಪಿಸ್ತೂಲ್ ಆರ್ಡರ್ ಮಾಡಿದ್ದ. ಗಣೇಶೋತ್ಸವ ಮತ್ತು ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಬೆಂಗಳೂರಿನಲ್ಲಿ ವೆಪನ್ ಡೀಲಿಂಗ್ ನಡೆದಿದೆ ಎನ್ನಲಾಗಿದೆ. ಈತ ಯಾರಿಗೆ ಪೂರೈಕೆ ಮಾಡಲು ನಾಗಪುರದಿಂದ ಪಿಸ್ತೂಲು ತರಿಸಿಕೊಳ್ಳುತ್ತಿದ್ದ ಎಂಬುವ ಬಗ್ಗೆ ಡಿಜೆ ಹಳ್ಳಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಇದನ್ನೂ ಓದಿ | Chain Snatch | ಚಿನ್ನದ ಸರ ಕದ್ದು ಪರಾರಿಯಾಗುತ್ತಿದ್ದ ಮಹಿಳೆಯನ್ನು ಸೆರೆ ಹಿಡಿದ ಗ್ರಾಮಸ್ಥರು