ಮಂಗಳೂರು: ಇಲ್ಲಿನ ಮಂಗಳೂರು ಜ್ಯುವೆಲ್ಲರ್ಸ್‌ಗೆ ನುಗ್ಗಿ ಸಿಬ್ಬಂದಿಯನ್ನು ಹತ್ಯೆ ಮಾಡಿದ ಆರೋಪಿಯನ್ನು ಕೇರಳದ ಕಾಸರಗೋಡಿನಲ್ಲಿ ಒಂದು ತಿಂಗಳ ಬಳಿಕ ಬಂಧಿಸಲಾಗಿದೆ (Murderer arrested). ಕೇರಳದ ಕಲ್ಲಿಕೋಟೆಯ ಚಟ್ಟನಾಡುತ್ ಕೆಳಮನೆ ನಿವಾಸಿಯಾಗಿರುವ ಶಿಫಾಸ್(33) ಎಂಬಾತನೇ ಬಂಧಿತ. ಈತನನ್ನು ಕಾಸರಗೋಡು ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಫೆ.3ರಂದು ಮಂಗಳೂರಿನ ಹಂಪನಕಟ್ಟೆಯ ಮಂಗಳೂರು ಜ್ಯುವೆಲ್ಲರಿ ಹೆಸರಿನ ಶಾಪ್ ನಲ್ಲಿ ಕೊಲೆ
ನಡೆದಿತ್ತು. ಜ್ಯುವೆಲ್ಲರಿ ಸಿಬ್ಬಂದಿ, ಅತ್ತಾವರ ನಿವಾಸಿ ರಾಘವೇಂದ್ರ(50) ಅವರನ್ನು ಮಧ್ಯಾಹ್ನದ ವೇಳೆ ಕೊಲೆ ಮಾಡಲಾಗಿತ್ತು. ಜ್ಯುವೆಲರಿ ಮಾಲೀಕ ಕೇಶವ ಆಚಾರ್ಯ ಮಧ್ಯಾಹ್ನ ಊಟಕ್ಕೆ ಹೋಗಿದ್ದ ವೇಳೆ ಕೊಲೆ ನಡೆದಿದ್ದು, ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ವೇಳೆ ಜ್ಯುವೆಲ್ಲರಿಯಲ್ಲಿದ್ದ ಚಿನ್ನಾಭರಣ ಮಿಸ್ಸಿಂಗ್ ಆಗಿದ್ದು ಕಂಡು ಬಂದಿದ್ದು ಇದೊಂದು ದರೋಡೆ ಪ್ರಕರಣ ಅಂತ ಪೊಲೀಸರಿಗೆ ಅನುಮಾನ ಬಂದಿತ್ತು. ಸದ್ಯ ಕಾಸರಗೋಡು ಡಿವೈಎಸ್ಪಿ ಸುಧಾಕರನ್ ನೇತೃತ್ವದ ಪೊಲೀಸ್ ತಂಡದಿಂದ ಆರೋಪಿಯ ಬಂಧನವಾಗಿದೆ.
ಆರೋಪಿ ಶಿಫಾಸ್ ಮಂಗಳೂರು ಪೊಲೀಸರಿಗೆ ಒಪ್ಪಿಸುವ ಪ್ರಕ್ರಿಯೆ ನಡೆದಿದ್ದು ಆರೋಪಿಯನ್ನ ಮಂಗಳೂರು ಪೊಲೀಸರಿಗೆ ಒಪ್ಪಿಸಲಾಗಿದೆ. ದರೋಡೆ ನಡೆಸುವ ಉದ್ದೇಶದಿಂದಲೇ ಕೊಲೆ ನಡೆಸಿರುವ ಬಗ್ಗೆ ಆರೋಪಿಯಿಂದ ಮಾಹಿತಿ ಲಭ್ಯವಾಗಿದ್ದು, ಆರೋಪಿಯ ಈ ಹಿಂದಿನ ಕೃತ್ಯಗಳ ಬಗ್ಗೆ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ : Murder of family : ಹೆಂಡತಿ, ಇಬ್ಬರು ಪುಟ್ಟ ಮಕ್ಕಳಿಗೆ ವಿಷವುಣಿಸಿ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ