Site icon Vistara News

Murder Attempt: ಕುಟುಂಬಗಳ ನಡುವೆ ಆಸ್ತಿ ಜಗಳ; ಮಚ್ಚಿನಿಂದ ಅಟ್ಟಾಡಿಸಿ ಹೊಡೆದು ನಾಲ್ವರ ಮೇಲೆ ಹಲ್ಲೆ

attempt to murder in hasan

#image_title

ಹಾಸನ: ಬೇಲೂರು ತಾಲೂಕಿನ, ಮಾಳೆಗೆರೆ ಗ್ರಾಮದಲ್ಲಿ ಪಿತ್ರಾರ್ಜಿತ ಆಸ್ತಿಗಾಗಿ ಸಹೋದರರ ಕುಟುಂಬಸ್ಥರ ನಡುವೆ ಮಾರಾಮಾರಿ ನಡೆದಿದ್ದು, ಮಚ್ಚು ಹಿಡಿದು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಯತ್ನ (Murder Attempt) ಮಾಡಲಾಗಿದೆ.

ಗ್ರಾಮದ ಮಲ್ಲೇಶಗೌಡ, ಶಶಿಕುಮಾರ್, ಗೌರೀಶ್ ಹಾಗೂ ಮಲ್ಲೇಶಗೌಡರ ಸೊಸೆ ತೀರ್ಥ ಎಂಬುವವರಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಚ್ಚು ಹಿಡಿದು ನಾಲ್ವರನ್ನು ಅಟ್ಟಾಡಿಸಿ ಹಲ್ಲೆ ಮಾಡಿರುವ ದೃಶ್ಯ ಗ್ರಾಮಸ್ಥರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮಲ್ಲೇಶ್‌ಗೌಡ ಎಂಬುವವರಿಗೆ ಸೇರಿದ್ದ ಜಮೀನು ಇದಾಗಿದೆ ಎಂದು ಹೇಳಲಾಗಿದೆ. ಅವರ ತಾಯಿಯಿಂದ ಈ ಜಮೀನು ಬಂದಿದ್ದು, ಸುಮಾರು ಮೂವತ್ತು ವರ್ಷಗಳಿಂದ ಉಳುಮೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: HD Kumaraswamy: ಜೆಡಿಎಸ್‌ ಶಾಸಕಾಂಗ ಪಕ್ಷ ನಾಯಕರಾಗಿ ಎಚ್‌.ಡಿ. ಕುಮಾರಸ್ವಾಮಿ ಆಯ್ಕೆ

ಮಳೆ ಬಿದ್ದಿದ್ದ ಕಾರಣ ತಮ್ಮ ಮಕ್ಕಳಾದ ಶಶಿಕುಮಾರ್, ಗೌರೀಶ್ ಹಾಗೂ ಸೊಸೆ ತೀರ್ಥ ಜತೆ ಮಲ್ಲೇಶ್‌ಗೌಡ ಅವರು ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಸ್ಥಳಕ್ಕೆ ಬಂದ ಮಲ್ಲೇಶ್‌ಗೌಡನ ಸಹೋದರನ ಮಕ್ಕಳಾದ ಮಧುಕುಮಾರ್, ಚಂದ್ರೇಗೌಡ, ಕುಮಾರ್, ಜವರೇಗೌಡ, ರುದ್ರೇಶ್ ಹಾಗೂ ಲೋಕೇಶ್ ಜಗಳ ಮಾಡಿದ್ದಾರೆ.

ಈ ಜಾಗ ನಮಗೆ ಸೇರಿದ್ದು ಎಂದು ಹೇಳಿ ಏಕಾಏಕಿ ಅವಾಚ್ಯ ಪದಗಳಿಂದ ನಿಂದಿಸಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಮಧುಕುಮಾರ್, ಚಂದ್ರೇಗೌಡ, ಕುಮಾರ್, ಗೌರೇಗೌಡ, ಲೊಕೇಶ್, ರುದ್ರೇಶ್ ಎಂಬುವವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

ಶೀಲ ಶಂಕಿಸಿ ಪತ್ನಿಯ ಕೊಲೆ ಮಾಡಿದ ಶಿಕ್ಷಕ; ಮನೆಗೆ ಬೀಗ ಹಾಕಿ ಪರಾರಿ

ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹದಿಂದ (Family dispute) ಪತಿ ಮತ್ತು ಪತ್ನಿ ನಡುವೆ ಜಗಳ ನಡೆದು ಅದು ಕೊಲೆಯಲ್ಲಿ (Murder case) ಅಂತ್ಯಗೊಂಡಿದೆ. ಪತ್ನಿಯನ್ನು ಕೊಂದ ಗಂಡ ಮನೆಗೆ ಬೀಗ ಹಾಕಿ ಎಸ್ಕೇಪ್‌ ಆಗಿದ್ದಾನೆ. ಮೂರು ದಿನಗಳ ಬಳಿಕ ಕೊಳೆತ ಶವದ ವಾಸನೆ ಬರಲಾರಂಭಿಸಿದಾಗಲೇ ಈ ಕೊಲೆ ವಿಚಾರ ಬೆಳಕಿಗೆ ಬಂದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ಗಂಗಾ ನಗರ ಬಡಾವಣೆಯಲ್ಲಿ‌ ಘಟನೆ‌ ನಡೆದಿದೆ. ಲಕ್ಷ್ಮೀ ದೇವಿ ಎಂಬುವವರನ್ನು ಆಕೆಯ ಪತಿ ಕೃಷ್ಣಪ್ಪ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಗೌರಿಬಿದನೂರಿನ ರಾಮಚಂದ್ರಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದ ಕೃಷ್ಣಪ್ಪನಿಗೆ (Teacher krishnappa) ಐವತ್ತು ವರ್ಷ. ಒಳ್ಳೆಯ ಬಡಾವಣೆಯಲ್ಲಿ ದೊಡ್ಡ ಮನೆಯನ್ನೇ ಕಟ್ಟಿಸಿದ್ದಾನೆ. ಆತನಿಗೆ ಪತ್ನಿ ಲಕ್ಷ್ಮೀ ದೇವಿ (40) ಶೀಲದ ಬಗ್ಗೆ ಸಂಶಯ. ಯಾವಾಗಲೂ ಈ ವಿಚಾರದಲ್ಲಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಆಕೆಯ ಮಕ್ಕಳು ಬೇರೆ ಕಡೆ ಇದ್ದು, ಮನೆಯಲ್ಲಿ ಇವರಿಬ್ಬರೇ ಇದ್ದಾರೆ.

ಕಳೆದ ಭಾನುವಾರ ಮನೆಯಲ್ಲಿ ಇಬ್ಬರೇ ಇದ್ದಾಗ ಮತ್ತೊಂದು ಸುತ್ತಿನ ಜಗಳ ಶುರುವಾಗಿದೆ. ಕೃಷ್ಣಪ್ಪ ಸಿಟ್ಟಿನ ಭರದಲ್ಲಿ ಪತ್ನಿಯನ್ನು ಕೊಂದೇ ಬಿಟ್ಟಿದ್ದಾನೆ. ನಂತರ ಏನು ಮಾಡಬೇಕು ಎಂದು ತೋಚದೆ ಮನೆಗೆ ಬೀಗ ಹಾಕಿ ಅಲ್ಲಿಂದ ಪರಾಗಿಯಾಗಿದ್ದಾನೆ.

ಮನೆಯಲ್ಲಿ ಪೊಲೀಸರ ತಪಾಸಣೆ

ಇತ್ತ ಒಂದೆರಡು ದಿನ ಈ ಮನೆಯ ವಿಚಾರದಲ್ಲಿ ಯಾರೂ ಗಮನ ಹರಿಸಿರಲಿಲ್ಲ. ಆದರೆ, ಮಂಗಳವಾರ ವಾಸನೆ ಬರಲು ಆರಂಭಿಸಿದಾಗ ಅಕ್ಕಪಕ್ಕದ ಮನೆಯವರಿಗೆ ಸಂಶಯ ಶುರುವಾಯಿತು. ಇತ್ತ ಮನೆಯಲ್ಲಿ ಯಾರೂ ಇಲ್ಲದಿರುವುದು, ಬೀಗ ಹಾಕಿರುವುದು ಸಂಶಯವನ್ನು ಇನ್ನಷ್ಟು ಹೆಚ್ಚಿಸಿತು.

ಇದನ್ನೂ ಓದಿ: Saffron politics: ಸರ್ಕಾರಿ ಶಿಲಾನ್ಯಾಸ, ಆಯುಧ ಪೂಜೆ ತಡೆಯುವ ಹುನ್ನಾರ; ನಳಿನ್‌ ಆರೋಪ

ಪೊಲೀಸರಿಗೆ ತಿಳಿಸಿದಾಗ ಅವರು ಬಂದು ಬಾಗಿಲು ಒಡೆದು ನೋಡಿದಾಗ ಒಳಗೆ ಲಕ್ಷ್ಮೀದೇವಿ ಶವವಾಗಿ ಬಿದ್ದಿದ್ದರು. ಈ ನಡುವೆ ವಿಷಯ ತಿಳಿದ ಮಕ್ಕಳು ಧಾವಿಸಿದರು. ಕಿರಿಮಗಳಾದ ಲೀಲಾ ಇದು ತಂದೆಯೇ ಮಾಡಿದ ಕೊಲೆ. ಅವರಿಬ್ಬರ ನಡುವೆ ಆಗಾಗ ಜಗಳ ಆಗುತ್ತಿತ್ತು ಎಂದು ಆರೋಪಿಸಿ ದೂರು ನೀಡಿದ್ದಾರೆ. ಈ ನಡುವೆ ಕೃಷ್ಣಪ್ಪ ಒಡವೆ ವಿಚಾರದಲ್ಲೂ ಜಗಳ ಮಾಡುತ್ತಿದ್ದ ಎಂದು ಹೇಳಲಾಗಿದೆ. ಗೌರಿಬಿದನೂರು ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಸ್ಪಿ ಡಿ ಎಲ್ ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version